ಬೆಂಗಳೂರು (ಮಾ. 30): ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿ ಅಬ್ಬರಿಸಿ ಬೊಬ್ಬಿರಿದಿದ್ದ ಕೆಜಿಎಫ್ ಗೆ ಶತಕದ ಸಂಭ್ರಮ. ಶತದಿನವನ್ನು ಪೂರೈಸಿ ಮುನ್ನುಗ್ಗುತ್ತಿದೆ. 

ರಾಕಿ ಭಾಯ್ ಅಭಿನಯದ ಕೆಜಿಎಫ್ ಕಳೆದ ಡಿಸಂಬರ್ 21 ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ರಾಕಿಭಾಯ್ ಗೆ ಸಲಾಂ ಎಂದಿತ್ತು. 
ರಾಕಿ ಭಾಯ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕಾ ಸೇರಿದಂತೆ ಸಾಕಷ್ಟು ನಟರ ಅಭಿನಯ ಜನರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಬಾಕ್ಸಾಫೀಸ್ ಕಲಕ್ಷನ್ ನಲ್ಲಿಯೂ ಕೋಟಿ ಕ್ಲಬ್ ಸೇರಿದೆ. ಈಗಾಗಲೇ ಕೆಜಿಎಫ್-2 ಶೂಟಿಂಗ್ ಕೂಡಾ ಶುರುವಾಗಿದೆ. 

ನೂರು ದಿನಗಳ ಯಶಸ್ಸಿನ ಸಂತಸವನ್ನು ಕೆಜಿಎಫ್ ಟೀಂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.