Asianet Suvarna News Asianet Suvarna News

ಪಡುಕೋಣೆ ಪಡುಕೋಣ್ ಆದದ್ದರಲ್ಲೇ ಎಲ್ಲಾ ಕತೆ ಅಡಗಿದೆ;ಇಂದ್ರಜಿತ್ ಕಣ್ಣಲ್ಲಿ ದೀಪಿಕಾ ಚರಿತೆ

'ಐಶ್ವರ್ಯ' ಸಿನಿಮಾ ನಂತರ ಮುಂಬಯಿಗೆ ಹೊರಟು ಹೋದ ಆಕೆ ಯಾವತ್ತೂ ತನ್ನ ಮೊದಲ ಸಿನಿಮಾ ಕನ್ನಡದ್ದು ಅಂತ ಹೇಳಿಲ್ಲ. ಐ ಹೇಟ್‌ ಹರ್‌ ಫಾರ್ ದಟ್‌' ಎಂದು ಇಂದ್ರಜಿತ್ ಲಂಕೇಶ್

Kannada Indrajith lankesh talks about deepika padukone vcs
Author
Bangalore, First Published Sep 25, 2020, 4:41 PM IST

ಲಿರಿಲ್ ಸೋಪಿನಲ್ಲಿ ಮೈತೊಳೆದುಕೊಳ್ಳುತ್ತಾ ಜಲಪಾತದ ಅಡಿಯಲ್ಲಿ ನಿಂತಿರುವ ದೀಪಿಕಾ ಪಡುಕೋಣೆಯ ಚಿತ್ರ ಅವರ ತಂದೆ ಪ್ರಕಾಶ್ ಪಡುಕೋಣೆಗೆ ಅಷ್ಟಾಗಿ ಇಷ್ಟವಿರಲಿಲ್ಲವಂತೆ. ಮಗಳು ತನ್ನ ಹಾಗೆಯೇ ಬ್ಯಾಡ್ಮಿಂಟನ್ ಆಟಗಾತಿ ಆಗಬೇಕು ಅಂತ ಪ್ರಕಾಶ್ ಕನಸು ಕಂಡಿದ್ದರಂತೆ.

ಬರ್ತ್‌ಡೇ ದಿನ ಹಿರಿಯ ಕಲಾವಿದರಿಗೆ ಇಂದ್ರಜಿತ್ ಲಂಕೇಶ್ ನೆರವು: ಡ್ರಗ್ಸ್ ತನಿಖೆ ಬಗ್ಗೆ ಅಸಮಾಧಾನ 

‘ಆಕೆ ಅಪ್ಪನ ಆಸೆಯಂತೆ ಬ್ಯಾಡ್ಮಿಂಟನ್ ಆಟಗಾರ್ತಿ ಆಗಿರುತ್ತಿದ್ದರೆ ಸಂತೋಷವಾಗಿರುತ್ತಿದ್ದಳೋ ಏನೋ?  ಈ ಒದ್ದಾಟ ಅಂತೂ ಇರುತ್ತಿರಲಿಲ್ಲ. ಆದರೂ ಅವಳ ಮೇಲೆ ನನಗೆ ಸಿಟ್ಟಿದೆ. ಆಕೆ ನಟಿಸಿದ ಮೊದಲ ಸಿನಿಮಾ ಕನ್ನಡದ್ದು. ಐಶ್ವರ್ಯ ಚಿತ್ರಕ್ಕೆ ಉಪೇಂದ್ರ ನಾಯಕಿಯಾಗಿ ನಟಿಸಲು ಆಕೆಯನ್ನು ನಾನು ಒಪ್ಪಿಸಿ ಕರಕೊಂಡು ಬಂದದ್ದು. ನಮ್ಮ ಸಿನಿಮಾದ ನಂತರ ಮುಂಬಯಿಗೆ ಹೊರಟು ಹೋದಳು. ಆದರೆ ಯಾವತ್ತೂ ಎಲ್ಲೂ ತಪ್ಪಿಯೂ ತನ್ನ ಮೊದಲ ಸಿನಿಮಾ ಕನ್ನಡದ್ದು ಅಂತ ಹೇಳಲಿಲ್ಲ. ಐ ಹೇಟ್ ಹರ್ ಾರ್ ದಟ್’ ಅಂತ ಅ‘ರ್ ಪ್ರೀತಿಯಲ್ಲಿ ಅ‘ರ್ ಬೇಸರದಲ್ಲಿ ಮಾತಾಡಿದ್ದು ಇಂದ್ರಜಿತ್ ಲಂಕೇಶ್. ಅವರು, ದೀಪಿಕಾ ಮೊದಲ ಚಿತ್ರ ‘ಐಶ್ವರ್ಯ’ ನಿರ್ದೇಶನ ಮಾಡಿ ೧೪ ವರ್ಷಗಳಾಗಿವೆ.

Kannada Indrajith lankesh talks about deepika padukone vcs

ಐಶ್ವರ್ಯ ಚಿತ್ರದಲ್ಲಿ ನಟಿಸುತ್ತಿದ್ದ ದಿನಗಳಲ್ಲಿ ದೀಪಿಕಾ ಸಾಧ್ವಿಯಾಗಿದ್ದರು. ಶಿಸ್ತಿನಿಂದ ಕೆಲಸ ಮಾಡುತ್ತಿದ್ದರು. ಯಾವ ನಖರಾಗಳೂ ಇರಲಿಲ್ಲ. ಹೇಳಿದ ಸಮಯಕ್ಕೆ ಸರಿಯಾಗಿ ಬರುತ್ತಿದ್ದರು, ಸೊಗಸಾಗಿ ನಟಿಸುತ್ತಿದ್ದರು. ಮತ್ತೊಂದು ಟೇಕ್ ಕೇಳಿದರೆ ಸಂತೋಷದಿಂದಲೇ ಕೊಡುತ್ತಿದ್ದರು. ವಿದ್ಯಾರ್ಥಿಯ ಹಾಗಿದ್ದರು. ನನಗಂತೂ ಅವರಿಂದ ಯಾವ ತೊಂದರೆಯೂ ಆಗಲಿಲ್ಲ. ಆಗ ಅವರಿಗೆ ಯಾವ ದುಶ್ಚಟಗಳೂ ಇದ್ದಂತೆ ನನಗೆ ಕಾಣಲಿಲ್ಲ ಎನ್ನುತ್ತಾರೆ ಇಂದ್ರಜಿತ್.
ಅವರಿಗೆ ಈಗ ದಿಗ್ಭ್ರಮೆಯಾಗಿದೆಯಂತೆ. ಕಾರಣ ಇಷ್ಟೇ: ಕನ್ನಡದಿಂದ ಅಲ್ಲಿಗೆ ಹೋದ ನಂತರ ಅವಳು ದೀಪಿಕಾ ಪಡುಕೋಣ್ ಆದಳು. ಆದರೆ ಆಕೆಯ ತಂದೆಗೆ ಪಡುಕೋಣೆ ಎಂಬ ಹೆಸರಿನ ಬಗ್ಗೆ ಹೆಮ್ಮೆಯಿತ್ತು. ಅಂತಾರಾಷ್ಟ್ರೀಯ ಆಟಗಾರರಾಗಿದ್ದರೂ ಅವರು ಯಾವತ್ತೂ ಪ್ರಕಾಶ್ ಪಡುಕೋಣ್ ಆಗಲಿಲ್ಲ. ಈಕೆ ಅಲ್ಲಿಗೆ ಹೋದ ತಕ್ಷಣವೇ ಪಡುಕೋಣ್ ಆದಳು. ಪಡುಕೋಣೆ ಪಡುಕೋಣ್ ಆದದ್ದರಲ್ಲೇ ಎಲ್ಲಾ ಅರ್ಥವೂ ಇದೆ. ಬಾಲಿವುಡ್ ಆಕೆಯನ್ನು ಪೂರ್ತಿ ಬದಲಾಯಿಸಿರಬೇಕು ಎಂಬುದು ಇಂದ್ರಜಿತ್ ಊಹೆ.

Kannada Indrajith lankesh talks about deepika padukone vcs

ಕೆವಿ ರಾಜು, ರಾಜೇಂದ್ರ ಸಿಂಗ್ ಬಾಬು, ಪುಟ್ಟಣ್ಣ ಕಣಗಾಲ್ ಕನ್ನಡದವರೇ ಆದರೂ ಹಿಂದಿ ಸಿನಿಮಾ ನಿರ್ದೇಶನ ಮಾಡಿದವರು. ನಾನೂ ಹಿಂದಿ ಚಿತ್ರ ನಿರ್ದೇಶನಕ್ಕೆ ಮುಂಬಯಿಗೆ ಹೋಗಿದ್ದೆ. ಆ ಜಗತ್ತೇ ಬೇರೆ. ಅಲ್ಲಿ ಕನ್ನಡ ಅನ್ನೋದಿಲ್ಲ, ಕನ್ನಡ್ ಅಂತಾರೆ. ಆ ಸಾಗರದಲ್ಲಿ ಏನು ಬೇಕಿದ್ದರೂ ಆಗಬಹುದು, ಯಾವ ಚಟ ಬೇಕ್ದಿದ್ದರೂ ತಗಲಬಹುದು. ಆದರೆ ಶಿಸ್ತುಗಾರ, ಕಟ್ಟುನಿಟ್ಟಿನ ಪ್ರತಿ‘ಾವಂತ ಪ್ರಕಾಶ್ ಪಡುಕೋಣೆ ಅವರಿಗೆ ಈ ಘಟನೆಯಿಂದ ಎಷ್ಟು ಘಾಸಿಯಾಗಿರಬಹುದು ಎಂಬುದನ್ನು ನೆನೆದು ನನಗೆ ದುಃಖವಾಗುತ್ತಿದೆ ಎಂದರು ಇಂದ್ರಜಿತ್.

ಸುದೀಪ್‌- ಇಂದ್ರಜಿತ್‌ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ!

ಇವತ್ತು ದೀಪಿಕಾ ವಿಚಾರಣೆಗೆ ಹಾಜರಾಗುತ್ತಾರೆ. ಅಲ್ಲೇನಾದರೂ ಸಾಬೀತಾದರೆ ಲಿರಿಲ್ ಅಲ್ಲ, ಯಾವ ಸೋಪು ಕೂಡ ಆ ಅಪಖ್ಯಾತಿಯನ್ನು ತೊಳೆಯಲಾರದು ಅನ್ನುವುದು ಆಕೆಗೂ ಗೊತ್ತಿರುತ್ತದೆ. 

Follow Us:
Download App:
  • android
  • ios