ಸ್ಯಾಂಡಲ್‌ವುಡ್‌ ಬರ್ದರ್ಸ್‌ ಫಾರ್‌ ಲೈಫ್ ಅಂದ್ರೆ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ. ಅವರಿಬ್ಬರ  ಒಡನಾಟದ ಬಗ್ಗೆ ನಾವು ಏನೂ ಹೇಳಬೇಕಿಲ್ಲ.ಸದಾ ಒಬ್ಬರಿಗೊಬ್ಬರು ಹೆಗಲಾಗಿ ನಿಂತುಕೊಂಡು ಸುಖ ಜೀವನ ಸಾಗುತ್ತಿದ್ದವರು.

22 ಸಿನಿಮಾಗಳಲ್ಲಿ ಅಭಿನಯಿಸಿ ಹಿಟ್‌ ನಟರ ಪಟ್ಟಿಯಲ್ಲಿ ಮಿಂಚುತ್ತಿದ್ದ ಚಿರಂಜೀವಿ ಸರ್ಜಾ ಇಂದು ನೆನಪುಗಳು ಮಾತ್ರ. ಇನ್ನಿಲ್ಲದ ನಟನನ್ನು ನೆನೆದು ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ ಹಾಗೂ ಈಗಲೂ ಹಲವರು ಚಿರು ನಿವಾಸಕ್ಕೆ ತೆರಳಿ ಕುಟುಂಬಸ್ಥರನ್ನು ಹಾಗೂ ಮೇಘನಾಳನ್ನು ಭೇಟಿ ಮಾಡುತ್ತಿದ್ದಾರೆ.

 

ಮಂಟಪ ನಿರ್ಮಾಣ:

 ಅಣ್ಣ ಎಂದಿಗೂ ನನ್ನ ಜತೆ ಇರಬೇಕು ಎಂದು ಧ್ರುವ ಸರ್ಜಾ ಹಠ ಮಾಡಿ ತನ್ನ ನೆಚ್ಚಿನ ಫಾರ್ಮ್‌ಹೌಸ್‌ ಆದ 'ಬೃಂದಾವನ'ದಲ್ಲಿ ಚಿರು ಪಾರ್ಥೀವ ಶರೀರವನ್ನು ಮಣ್ಣು ಮಾಡಲಾಗಿತ್ತು. ವರ್ಷಗಳ ಹಿಂದೆ ಖರೀದಿಸಿದ ಈ ಫಾರ್ಮ್ ಹೌಸ್ ನಲ್ಲಿ  ಅನೇಕ ಬಾರಿ ಕುಟುಂಬಸ್ಥರ ಜತೆ ಬಂದು ಸರ್ಜಾ ಬರ್ದರ್ಸ್‌ ಮೋಜು ಮಸ್ತಿ ಮಾಡಿದ್ದಾರೆ. 

ಕೊನೆಗೂ ಚಿರಂಜೀವಿ ಬಗ್ಗೆ ಬಾಯಿಬಿಟ್ಟ ಧ್ರುವ; ಅಣ್ಣನೇ 'My world'!

 ಮಳೆ ಹಾಗೂ ಬಿಸಿಲು ಹೆಚ್ಚಾಗುತ್ತಿರುವ ಕಾರಣ ಚಿರಂಜೀವಿ ಸರ್ಜಾ ಪುಣ್ಯಭೂಮಿಗೆ ಯಾವುದೇ ತೊಂದರೆ ಆಗದಂತೆ ತಮ್ಮ ಮಂಟಪವನ್ನು ಕಟ್ಟಿಸಿದ್ದಾರೆ. ಸದ್ಯಕ್ಕೆ ಚಿರು ಕುಟುಂಬ ಸಂಬಂಧಿ ಮಂಜು ಈ ಮಂಟಪ ಕಟ್ಟಿದ್ದಾರೆ. ಕೆಲ ತಿಂಗಳುಗಳ ನಂತರ ದೊಡ್ಡದಾದ  ಸಮಾಧಿ ಕಟ್ಟಿಸಬೇಕೆಂದು ನಿರ್ಧರಿಸಿದ್ದಾರೆ.