ಕಲ್ಯಾಣ್ ಜ್ಯುವೆಲರ್ಸ್ ಫ್ಯಾಮಿಲಿ ಜೊತೆ ನವರಾತ್ರಿ ಹಬ್ಬ ಆಚರಿಸಿದ ಶಿವರಾಜ್ ಕುಮಾರ್ | ಕೇರಳದ ತ್ರಿಶೂರ್ ನಲ್ಲಿ ದಿಗ್ಗಜ ನಟರನ ಸಮಾಗಮ |  ನಟರೆಲ್ಲರೂ ಸೇರಿ ದುರ್ಗಾಪೂಜೆ ಆಚರಿಸಿದ್ದಾರೆ 

ದೇಶದಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಎಲ್ಲರ ಮನೆಯಲ್ಲಿ ದೇವಿಯ ಆರಾಧನೆ, ಪೂಜೆ ಜೋರಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. 

ಬಿಗ್ ಬಾಸ್ ಕಿಚ್ಚ ಸುದೀಪ್ ಸಂಭಾವನೆ ರಿವೀಲ್

ಸ್ಯಾಂಡಲ್ ವುಡ್ ನಲ್ಲೂ ಸಂಭ್ರಮ ಭರ್ಜರಿಯಾಗಿಯೇ ಇದೆ. ಸ್ಯಾಂಡಲ್ ವುಡ್ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಅಮಿತಾಬಚ್ಚನ್ ಜೊತೆ ನವರಾತ್ರಿ ಆಚರಿಸಿದ್ದಾರೆ. 

ಶಿವಾಜಿ ಪ್ರಭು, ಅಖಿಲ್ ಅಕ್ಕಿನೇನಿ, ಮುಮ್ಮಟ್ಟಿ ಶಿವಣ್ಣಗೆ ಸಾಥ್ ನೀಡಿದ್ದಾರೆ. ಕೇರಳದ ತ್ರಿಶೂರ್ ನಲ್ಲಿ ಕಲ್ಯಾಣ್ ಜ್ಯುವೆಲರ್ಸ್ ಮನೆಯಲ್ಲಿ ತಾರೆಯರೆಲ್ಲರೂ ಸಮಾಗಮಗೊಂಡಿದ್ದಾರೆ. ದುರ್ಗಾ ಪೂಜೆಗೆ ಎಲ್ಲರೂ ಬಂದಿದ್ದರು. 

ಶಿವಣ್ಣ ಅಭಿಮಾನಿಗಳಿಗೆ ನವರಾತ್ರಿ ಶುಭಾಶಯಗಳನ್ನು ತಿಳಿಸುತ್ತಾ, ನವರಾತ್ರಿ ಸಂಭ್ರಮ ನನ್ನ ಕಲ್ಯಾಣ್ ಕುಟುಂಬದವರೊಂದಿಗೆ. Happy Navarathri ಎಂದು ವಿಶ್ ಮಾಡಿದ್ದಾರೆ. 

View post on Instagram