ಲೈಟ್ ಆಗಿ ಸ್ಮೈಲ್ ಕೊಡುತ್ತಾ ಪಟಪಟ ಕನ್ನಡ ಮಾತನಾಡಿ, ಸ್ಟೇಟ್‌ ಕ್ರಶ್‌ ಆದ ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಸೆನ್ಸೇಷನಲ್‌ ಕ್ವೀನ್ ಆಗಿದ್ದಾರೆ. ಇತ್ತೀಚಿಗೆ ಮಹೇಶ್ ಬಾಬುಗೆ ಜೋಡಿಯಾಗಿ ಮಿಂಚಿರುವ 'ಸರಿಲೇರು ನೀಕವ್ವರು' ಚಿತ್ರದ ಟ್ರೈಲರ್‌ ರಿಲೀಸ್‌ ಅಗಿದ್ದು ವೀಕ್ಷಿಸಿದ ಸಿನಿ ಗಣ್ಯರು ಹಾಗೂ ಅಭಿಮಾನಿಗಳು ರಿಯಾಕ್ಷನ್‌ ಹೀಗಿದೆ...

ಎಷ್ಟೇ ಟ್ರೋಲ್ ಆದ್ರೂ ರಶ್ಮಿಕಾ ಕೈ ಬಿಡಲ್ಲ ಲಕ್ಕು; ಲಿಸ್ಟ್‌ನಲ್ಲಿರೋ ಹೀರೋಗಳು ಇವ್ರೆ!

ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ, 'ಒಳಗೆ ಸೇರಿದರೆ ಗುಂಡು...' ಎಂದೇ ಕನ್ನಡಿಗರ ಚಿತ್ರ ರಸಿಕರ ಮನ ಗೆದ್ದ ನಟಿ ಮಾಲಾಶ್ರೀ ರಾಮು ಟ್ಟಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 'ಈಗಷ್ಟೇ #SarileruNekkevvaru ಚಿತ್ರದ ಟ್ರೈಲರ್‌ ವೀಕ್ಷಿಸಿದೆ. ತುಂಬಾ ಇಷ್ಟವಾಯಿತು. ರಶ್ಮಿಕಾ ತುಂಬಾ ಕ್ಯೂಟ್ ಆ್ಯಂಡ್ prettyಯಾಗಿ ಕಾಣಿಸಿದ್ದಾರೆ. ನಿಮ್ಮನ್ನು ವಿಭಿನ್ನ ಪಾತ್ರಗಳಲ್ಲಿ ನೋಡುವುದಕ್ಕೆ ನನಗೆ ಸಂತೋಷ. ಚಿತ್ರ ವೀಕ್ಷಿಸಲು ಕಾತುರದಿಂದ ಕಾಯುತ್ತಿದೀನಿ. ಗುಡ್ ಲಕ್' ಎಂದು ಬರೆದುಕೊಂಡಿದ್ದಾರೆ. 

 

ಮಾಲಾಶ್ರೀ ಅವರ ವಿಶ್ವಾಸ ತುಂಬುವ ಮಾತುಗಳನ್ನು ಕೇಳಿದ ರಶ್ಮಿಕಾ ರೆಸ್ಪಾಂಡ್ ಮಾಡಿದ್ದಾರೆ. 'ಇದು ಸತ್ಯವಾಗ್ಲೂ ನಿಜಾನಾ? ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಗಿದೆ. ಥ್ಯಾಂಕ್ ಯು ಮೇಡಂ ' ಎಂದಿ ಪ್ರತಿಕ್ರಿಯೆ ನೀಡಿದ್ದಾರೆ. 

 

ಇನ್ನು ಒಂದೇ ದಿನದಲ್ಲಿ 9.5 M ವೀಕ್ಷಣೆ ಪಡೆದುಕೊಂಡ ಟ್ರೈಲರ್ ನೋಡಿ ಅಭಿಮಾನಿಗಳು ರಶ್ಮಿಕಾ ಅಭಿನಯಕ್ಕೆ 'ಓವರ್ ಆ್ಯಕ್ಟಿಂಗ್‌' ಎಂದು ಕಮೆಂಟ್ ಮಾಡಿದ್ದಾರೆ.