ಬೆಂಗಳೂರು (ಫೆ. 26): ಕೋಟೆನಾಡು ಚಿತ್ರದುರ್ಗಕ್ಕೂ ಸಿನಿಮಾಲೋಕಕ್ಕೂ ಅವಿನಾಭಾವ ನಂಟು. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ನಾಗರಹಾವು’ ಚಿತ್ರ ಬಂದ ನಂತರ ಅದು ಇನ್ನಷ್ಟುಆಕರ್ಷಣೀಯ ತಾಣವಾಯಿತು. ಕೋಟೆ ರಕ್ಷಿಸಿದ ಓಬವ್ವ ಮನೆಮಾತಾದಳು.

ಅಂದಿನಿಂದ ಇಂದಿನವರೆಗೂ ಓಬವ್ವ ಕನ್ನಡಿಗರ ಮನಸ್ಸಿಂದ ಆಚೆ ಹೋಗಿಲ್ಲ. ಇದೀಗ ಓಬವ್ವ ನಂತರ ಸಿದ್ದಾಂಬೆ ಕನ್ನಡಿಗರ ಮನಸ್ಸೊಳಗೆ ಬರಲು ಸಿದ್ಧವಾಗಿದ್ದಾರೆ. ಆ ಪಾತ್ರ ಮಾಡಿರುವುದು ಹರಿಪ್ರಿಯಾ. ‘ಬಿಚ್ಚುಗತ್ತಿ’ ಚಿತ್ರದಲ್ಲಿ.

ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್‌ ಕಮಾಲ್‌; 'ಬಿಚ್ಚುಗತ್ತಿ' ಬಗ್ಗೆ ನೀವೇ ಕೇಳಿ!

ಚಿತ್ರದುರ್ಗ ಕತೆಗಳನ್ನು ಕೊಟ್ಟಊರು. ಚಿತ್ರದುರ್ಗದ ಚರಿತ್ರೆ ಇಟ್ಟುಕೊಂಡು ಅನೇಕ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಿವೆ. ದರ್ಶನ್‌ ಅಭಿನಯದ ‘ರಾಜವೀರ ಮದಕರಿ ನಾಯಕ’ ಸುದ್ದಿಯಲ್ಲಿದೆ. ಅದು ತೆರೆ ಮೇಲೆ ಬರುವ ಮೊದಲೇ ಹರಿಪ್ರಿಯಾ ಹಾಗೂ ರಾಜವರ್ಧನ್‌ ಅಭಿನಯದ ‘ಬಿಚ್ಚುಗತ್ತಿ’ ಸಿನಿಮಾ ಮನಸ್ಸು ತುಂಬಲಿದೆ.

"

ಸದ್ಯಕ್ಕೀಗ ಮಹಿಳಾ ಪ್ರಧಾನ ಕತೆಗಳ ಜತೆಗೆ ವಿಭಿನ್ನ ಪಾತ್ರಗಳಲ್ಲಿ ಗಮನ ಸೆಳೆದಿರುವ ನಟಿ ಹರಿಪ್ರಿಯಾ ಇಲ್ಲಿ ಭರಮಣ್ಣ ನಾಯಕನ ಹೆಂಡತಿ ಸಿದ್ದಾಂಬೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದಲ್ಲಿ ಅಭಿನಯಿಸಲು ಅವರು ಕತ್ತಿವರಸೆ, ಕುದುರೆ ಸವಾರಿ ಕಲಿತು ಅಭಿನಯಿಸಿದ್ದಾರೆ. ಚಿತ್ರದಲ್ಲಿನ ಅವರ ನಿಲುವು, ಕಣ್ಣು ನೋಡಿದರೆ ಒಂದು ಪವರ್‌ಫುಲ್‌ ಪಾತ್ರ ಎಂಬುದರಲ್ಲಿ ಅನುಮಾನವಿಲ್ಲ.

'ಬಿಚ್ಚುಗತ್ತಿ'ಯಲ್ಲಿ ಹರಿಪ್ರಿಯಾ ಲುಕ್‌ಗೆ ಅಭಿಮಾನಿಗಳು ಫಿದಾ!

ಬಿಚ್ಚುಗತ್ತಿ ಹರಿಸಂತು ನಿರ್ದೇಶನದ ಚಿತ್ರ. ಸಾಹಿತಿ ಬಿ.ಎಲ್‌. ವೇಣು ಅವರ ‘ದಳವಾಯಿ ಮುದ್ದಣ್ಣ’ ಕಾದಂಬರಿ ಆಧರಿಸಿ ತೆರೆಗೆ ಬರುತ್ತಿರುವ ಚಿತ್ರ. ಪ್ರಮುಖವಾಗಿ ಇದು ಚಿತ್ರದುರ್ಗದ ಪಾಳೇಗಾರ ಬಿಚ್ಚುಗತ್ತಿ ಭರಮಣ್ಣ ನಾಯಕನ ಕುರಿತ ಸಿನಿಮಾ. ಹಿರಿಯ ನಟ ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್‌, ಬಾಹುಬಲಿ ಚಿತ್ರದ ಖ್ಯಾತಿಯ ಪ್ರಭಾಕರ್‌ ಇದರ ಪ್ರಮುಖ ಪಾತ್ರಧಾರಿಗಳು.

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"