ನಟ ದರ್ಶನ್-ರೇಣುಕಾಸ್ವಾಮಿ ಫ್ಯಾಮಿಲಿ, ಎರಡೂ ಭೇಟಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ವಿನೋದ್ ರಾಜ್!
ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗುವ ಮೊದಲು ನಟ ವಿನೋದ್ ರಾಜ್ ಅವರು ಜೈಲಿಗೆ ಹೋಗಿ ನಟ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ದರ್ಶನ್ ಭೇಟಿ ಬಳಿಕ ವಿನೋದ್ ರಾಜ್ ಅವರು ಮಾತನಾಡಿ 'ನಟ ದರ್ಶನ್ ಅವರನ್ನು ಆ ಪರಿಸ್ಥಿತಿಯಲ್ಲಿ ನೋಡಿ ಮನಸ್ಸಿಗೆ ತುಂಬಾ ಬೇಸರವಾಯ್ತು' ಎಂದಿದ್ದಾರೆ.
ಇತ್ತೀಚೆಗೆ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಮನೆಗೆ ಹೋಗಿ, ಅವರ ಪೋಷಕರು ಹಾಗು ಗರ್ಭಿಣಿ ಪತ್ನಿಯನ್ನು ಭೇಟಿಯಾಗಿ ಬಂದಿದ್ದಾರೆ ಹಿರಿಯ ನಟ ವಿನೋದ್ ರಾಜ್. ಅಶ್ಲೀಲ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬವನ್ನು ವಿನೋದ್ ರಾಜ್ ಮಾತನಾಡಿಸಿ ಬಂದಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪಿಗಳಾಗಿ ನಟ ದರ್ಶನ್, ಸ್ನೇಹಿತೆ ಪವಿತ್ರಾ ಗೌಡ ಹಾಗು ಅವರ 15 ಸಹಚರರು ಜೈಲಿನೊಳಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗುವ ಮೊದಲು ನಟ ವಿನೋದ್ ರಾಜ್ ಅವರು ಜೈಲಿಗೆ ಹೋಗಿ ನಟ ದರ್ಶನ್ (Actor Darshan) ಅವರನ್ನು ಭೇಟಿಯಾಗಿದ್ದಾರೆ. ದರ್ಶನ್ ಭೇಟಿ ಬಳಿಕ ವಿನೋದ್ ರಾಜ್ ಅವರು ಮಾತನಾಡಿ 'ನಟ ದರ್ಶನ್ ಅವರನ್ನು ಆ ಪರಿಸ್ಥಿತಿಯಲ್ಲಿ ನೋಡಿ ಮನಸ್ಸಿಗೆ ತುಂಬಾ ಬೇಸರವಾಯ್ತು' ಎಂದಿದ್ದಾರೆ. ಜೊತೆಗೆ, 'ನನ್ನ ಅಮ್ಮ ನೋವಿನಲ್ಲಿ ಇದ್ದವರಿಗೆ ಸಾಂತ್ವನ ಹೇಳು, ಕೈಲಾದಷ್ಟು ಸಹಾಯ ಮಾಡು' ಎಂದಿದ್ದಾರೆ ಎಂದೂ ನಟ ವಿನೋದ್ ರಾಜ್ ಹೇಳಿದ್ದಾರೆ.
ಏನೆಂದು ಹೆಸರಿಡಲಿ, ಈ ಚೆಂದ ಅನುಭವಕೆ..? ಸುದೀಪ್-ದರ್ಶನ್ ಮಧ್ಯೆ ಇಲ್ಲದ ಸ್ನೇಹಕ್ಕೆ ಹೀಗಂತಾರೆ ಆಪ್ತರು!
ದರ್ಶನ್ ಭೇಟಿ ಬಳಿಕ ನಟ ವಿನೋದ್ ರಾಜ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಿ ಅವರಿಗೂ ಸಾಂತ್ವನ ಹೇಳಿದ್ದಾರೆ. ತಮ್ಮ ಕೈಲಾದಷ್ಟು ಹಣದ ಸಹಾಯವನ್ನು ಚೆಕ್ ಕೊಡುವ ಮೂಲಕ ಮಾಡಿದ್ದಾರೆ. ಅಲ್ಲಿ ಕೂಡ, ಎಲ್ಲರೊಂದಿಗೆ ಮಾತನಾಡಿ, ಸಮಾಧಾನಮಾಡಿ ಬಂದಿದ್ದಾರೆ. ನಟ ವಿನೋದ್ ರಾಜ್ ಅವರ ಉದ್ದೇಶ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವದಾಗಿದೆ ಅಷ್ಟೇ. ಅವರ ಪ್ರಕಾರ, ಈಗ ದರ್ಶನ್ ಫ್ಯಾಮಿಲಿ ಹಾಗೂ ರೇಣುಕಾಸ್ವಾಮಿ ಎರಡೂ ಫ್ಯಾಮಿಲಿ ಕಷ್ಟದಲ್ಲಿವೆ.
ಈ ಬಗ್ಗೆ ನಟ ವಿನೋದ್ ರಾಜ್ ಅವರು 'ನಾನು ರೇಣುಕಾಸ್ವಾಮಿ ಕುಟುಂಬವನ್ನು ಸ್ವ ಇಚ್ಛೆಯಿಂದ ಭೇಟಿಯಾಗಿದ್ದಾನೆ. ಭೇಟಿಯಾಗಲು ನಟ ದರ್ಶನ್ ಅವರಾಗಲೀ ಅಥವಾ ಬೇರೆ ಯಾರೇ ಆಗಲಿ ಹೇಳಿಲ್ಲ. ನಮ್ಮ ಅಮ್ಮ ಬದುಕಿದ್ದಾಗ ನನಗೆ ಕೆಲವೊಂದು ಬುದ್ದಿಮಾತುಗಳನ್ನು ಹೇಳಿದ್ದರು. ನಾನು ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೇನೆ ಅಷ್ಟೇ. ಮಗನನ್ನು ಕಳೆದುಕೊಂಡು ರೇಣುಕಾಸ್ವಾಮಿ ಕುಟುಂಬ ನೋವಿನಲ್ಲಿದೆ. ಅದೇ ರೀತಿ ಆಗಬಾರದ ಘಟನೆಯಲ್ಲಿ ಸಿಕ್ಕಿಹಾಕಿಕೊಂಡು ದರ್ಶನ್ ಅವರ ಕುಟುಂಬವೂ ನೋವಿನಲ್ಲಿದೆ' ಎಂದಿದ್ದಾರೆ.
ವಿಷ್ಣು ಸರ್ ನಟಿಸಲ್ಲ ಅಂದ್ರೆ ನಾನೂ ನಟಿಸಲ್ಲ ಅಂದಿದ್ರಂತೆ ಜಯಲಲಿತಾ; ಮನಸ್ಸಿನಲ್ಲಿ ಏನಿತ್ತಂತೆ ಗೊತ್ತಾ?
ದರ್ಶನ್ ರಾಯಭಾರಿಯಾಗಿ ನಟ ವಿನೋದ್ ಮಾಜ್ ಅವರು ಕಾಂಪ್ರೋಮೈಸ್ ಮಾಡಲು ಹೋಗಿರಬಹುದು ಎಂಬ ಕೆಲವರ ಮಾತಿಗೂ ಉತ್ತರ ಕೊಟ್ಟವರಂತೆ ನಟ ವಿನೋದ್ ರಾಜ್ ಮಾತನಾಡಿದ್ದಾರೆ. ನಾನು ಸ್ವ ಇಚ್ಛೆಯಿಂದ ಹೋಗಿದ್ದು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ನಟ ವಿನೋದ್ ರಾಜ್ ಹಾಗೂ ಲೀಲಾವತಿ ಅವರಿಬ್ಬರ ವ್ಯಕ್ತಿತ್ವ ಹಾಗೂ ಮಾನವೀಯತೆ ಅರಿತಿರುವ ಜನರಿಗೆ ಅವರಿಬ್ಬರೂ ಏನೇ ಮಾಡಿದರೂ ಅಲ್ಲಿ ಮನುಷ್ಯತ್ವ ಮಾತ್ರ ಕೆಲಸ ಮಾಡಿರುತ್ತದೆ ಎಂಬುದು ಗೊತ್ತು!