ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಇತ್ತ ವಿಜಯ್ ರಾಘವೇಂದ್ರ ಏರ್ಪೋರ್ಟ್‌ನಿಂದ ಕಾರ್ಗೋ ಟರ್ಮಿನಲ್‌ನತ್ತ ತೆರಳಿದ್ದಾರೆ. ಕಾನೂನು ಪ್ರಕ್ರಿಯೆ ಆರಂಭಗೊಂಡಿದ್ದು ಶೀಘ್ರದಲ್ಲೇ ಮೃತದೇಹ ಹಸ್ತಾಂತರ ಮಾಡಲಿದ್ದಾರೆ. ರಾತ್ರಿ 1 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಬೆಂಗಳೂರು(ಆ.08) ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹ ಬೆಂಗಳೂರಿಗೆ ಆಗಮಿಸಿದೆ. ಥಾಯ್ ಏರ್‌ವೇಸ್ ಮೂಲಕ ಬ್ಯಾಂಕಾಕ್‌ನಿಂದ ಹೊರಟ ವಿಮಾನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾ ನಿಲ್ದಾಣಕ್ಕೆ ಆಗಮಿಸಿದೆ. ಇತ್ತ ನಟ ವಿಜಯ್ ರಾಘವೇಂದ್ರ ಕೂಡ ಆಗಮಿಸಿ ಏರ್ಪೋಟ್‌ನಿಂದ ಹೊರಬಂದಿದ್ದಾರೆ. ಇತ್ತ ಸ್ಪಂದನಾ ಮೃತದೇಹ ಹಸ್ತಾಂತರದ ಕಾನೂನು ಪ್ರಕ್ರಿಯೆಗಳು ಮುಂದುವರಿದಿದೆ. 30 ರಿಂದ 40 ನಿಮಿಷಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು ಬಳಿಕ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಿದ್ದಾರೆ. ರಾತ್ರಿ 1 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ವಿಮಾನ ನಿಲ್ದಾಣದಿಂದ ಸ್ಪಂದನಾ ಮೃತದೇಹವನ್ನು ಮಲ್ಲೇಂಶ್ವರದಲ್ಲಿರುವ ಬಿಕೆ ಶಿವರಾಮ್ ನಿವಾಸಕ್ಕೆ ತರಲಾಗುತ್ತದೆ. ಪಾರ್ಥೀವ ಶರೀರ ತರಲು ಈಗಾಗಲೇ ಆ್ಯಂಬುಲೆನ್ಸ್ ವಿಮಾನ ನಿಲ್ದಾಣದಲ್ಲಿ ಸಿದ್ಧಗೊಂಡಿದೆ. ರಾತ್ರಿ 1 ಗಂಟೆಯಿಂದ ಮಲ್ಲೇಶ್ವಂರನಲ್ಲಿರುವ ಬಿಕೆ ಶಿವರಾಂ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಸ್ಪಂದನಾ ಸಾವಿಗೆ ಕಾರಣವಾಯ್ತು ಲೋ ಬಿಪಿ, ಇದು ಸೈಲೆಂಟ್ ಕಿಲ್ಲರ್!
ಥಾಯ್ ಏರ್‌ವೇಸ್‌ನ TG325 ವಿಮಾನ ಬ್ಯಾಂಕಾಕ್ ಸುವರ್ಣಭೂಮಿ ವಿಮಾನ ನಿಲ್ದಾದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಬೆಂಗಳೂರಿನತ್ತ ಹೊರಟಿತ್ತು. ಇದೀಗ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿ ಬಳಿ ಪತಿ ವಿಜಯ ರಾಘವೇಂದ್ರ, ಸ್ಪಂದನಾ ಮೃತದೇಹ ಸ್ವೀಕರಿಸಿದ್ದಾರೆ. ಕಾರ್ಗೋ ಟರ್ಮಿನಲ್‌ನಲ್ಲಿ ಮೃತದೇಹವನ್ನು ವಿಜಯ್ ರಾಘವೇಂದ್ರ ಸ್ವೀಕರಿಸಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಇದೀಗ ದೇವನಹಳ್ಳಿಯಿಂದ ಮಲ್ಲೇಶ್ವರಂ ವೈಯಾಲಿಕಾವಲ್‌ನ ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ.
ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹಾಗೂ ಇತರ ಕುಟುಂಬ ಸದಸ್ಯರು ಹಾಜರಿದ್ದಾರೆ. ಸಾರ್ವಜನಿಕ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇದೀಗ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಮಲ್ಲೇಂಶ್ವರ ಮನೆಯತ್ತ ಆಗಮಿಸುತ್ತಿದ್ದಾರೆ.
ನಮ್ದು ಲವ್ ಮ್ಯಾರೇಜ್ ಅಲ್ಲ ಪಕ್ಕಾ ಅರೇಂಜ್ಡ್ ಮ್ಯಾರೇಜ್; ವಿಜಯ್ ರಾಘವೇಂದ್ರ-ಸ್ಪಂದನಾ ಮ್ಯಾರೇಜ್ ಸ್ಟೋರಿ!
ಬ್ಯಾಂಕಾಕ್‌ನ ರಾಯಭಾರಿ ಕಚೇರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಎನ್‌ಓಸಿ ಪಡೆದು ಮೃತದೇಹವನ್ನು ಬೆಂಗಳೂರಿಗೆ ತರಲಾಗಿತ್ತು.ಇಂದು ರಾತ್ರಿಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಮಹ್ಯಾಹ್ನ 2 ರಿಂದ 3 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಂಜೆ 4 ಗಂಟೆ ಹೊತ್ತಿಗೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈಡಿಗ ಸಮುದಾಯದ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ.
ಸ್ಪಂದನಾ ಸ್ನೇಹಿತರು ಹಾಗೂ ಬಂಧುಗಳ ಜೊತೆ ವಿದೇಶ ಪ್ರವಾಸಕ್ಕೆ ಹೋಗಿದ್ದ ವೇಳೆಯಲ್ಲಿ ಹಠಾತ್ತನೆ ಇಹಲೋಕ ತ್ಯಜಿಸಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ರಾಜಕೀಯ ಮತ್ತು ಸಿನಿಮಾ ರಂಗದ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
