* ಸಂಚಾರಿ ವಿಜಯ್ ಇನ್ನಿಲ್ಲ ಎಂಬ ಸುದ್ದಿ ಪ್ರಕಟಣೆ ಅನಿವಾರ್ಯ* ಅಂಗಾಂಗ ದಾನ ಮಾಡಲು ಮುಂದಾದ ಕುಟುಂಬ* ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಟ* ಸ್ಯಾಂಡಲ್ ವುಡ್ ನೋವನ್ನು ತಡೆದುಕೊಳ್ಳಲೇಬೇಕು

ಬೆಂಗಳೂರು(ಜೂ. 14) ಭಾರವಾದ ಮನಸ್ಸಿನಿಂಲೇ ಈ ಸುದ್ದಿ ಬರೆಯಬೇಕಾಗಿದೆ. ನಟ ಸಂಚಾರಿ ವಿಜಯ್ ಮಂಗಳವಾರ ನಸುಕಿನ ಜಾವ ಪ್ರಾಣ ಬಿಡಲಿದ್ದಾರೆ. ಕನ್ನಡ ಚಿತ್ರರಂಗ ಅಧಿಕೃತವಾಗಿ ಅತ್ಯುತ್ತಮ ನಟ, ಒಳ್ಳೆಯ ಮನುಷ್ಯನನ್ನು ಕಳೆದುಕೊಳ್ಳಲಿದೆ.

ಬೈಕ್ ಅಪಘಾತದದಲ್ಲಿ ಗಂಭೀರ ಗಾಯಗೊಂಡಿದ್ದ ವಿಜಯ್ ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆ. ದೇಹದ ಉಳಿದ ಅಂಗಗಳು ಕೆಲಸ ಮಾಡುತ್ತಲೇ ಇವೆ. ಸ್ನೇಹಿತರು ಮತ್ತು ಕುಟುಂಬದ ತೀರ್ಮಾನದಂತೆ ಅಂಗಾಂಗ ದಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಂಚಾರಿ ವಿಜಯ್ ಅಪ್ನಿಯಾ ‌ಟೆಸ್ಟ್ ಮಾಡಿದ್ದೇವೆ. ಮಧ್ಯಾಹ್ನ ಹಾಗೂ ಸಂಜೆ ಎರಡೂ ಟೆಸ್ಟ್ ನಲ್ಲಿ ಪಾಸಿಟಿವ್‌ ಆಗಿದೆ. ಹಾಗಾಗಿ ಈ ಪರಿಸ್ಥಿತಿಯಲ್ಲಿ ಏನು ಹೇಳಲು ಅಸಾಧ್ಯ. ಜೀವ ಸಾರ್ಥಕತೆ ತಂಡದಿಂದ ಅಂಗಾಂಗ ದಾನ ಕುರಿತು ‌ಮುಂದಿನ ಪ್ರಕ್ರಿಯೆ ‌ನಡೆಯಲಿದೆ ಎಂದು ಡಾ.ಅರುಣ್ ನಾಯ್ಕ್ ತಿಳಿಸಿದ್ದಾರೆ.

ಬದುಕಿ ಬರುವ ಆಸೆಯೊಂದು ಮೂಡಿತ್ತು

ಲಿವರ್, ಎರಡು ಕಿಡ್ನಿ,‌ ಎರಡು ಕಣ್ಣು ಸದ್ಯ ಟ್ರಾನ್ಸ್ ಪ್ಲಾಂಟ್ ಮಾಡಲಾಗುತ್ತದೆ. ಹಾರ್ಟ್‌ನ ಟಿಶ್ಯು ವಾಲ್ವ್ ಕೂಡ ಟ್ರಾನ್ಸ್ ಪ್ಲಾಂಟ್ ಗೆ ಹೋಗಲಿದೆ. ಬೆಳಿಗ್ಗೆ ಕುಟುಂಬದವರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ ಎಂದಿದ್ದಾರೆ.

ಅಂತಿಮ ದರ್ಶನ; ಮಂಗಳವಾರ ಬೆಳಿಗ್ಗೆ 8-10 ಗಂಟೆವರೆಗೂ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸರ್ಕಾರದ ಕಡೆಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಬಳಿಕ ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಬೈಕ್ ನಲ್ಲಿ ಪ್ರಯಾಣಿಸುವಾಗ ಸುರಕ್ಷಿತ ಹೆಲ್ಮೆಟ್ ಬಳಸಿ ಎಂಬ ಸಂದೇಶವನ್ನು ಮತ್ತೊಮ್ಮೆ ನೀಡುತ್ತಿದ್ದೇವೆ.