ಸ್ಯಾಂಡಲ್‌ವುಡ್‌ ಡೈನಾಮಿಕ್ ಪ್ರಿನ್ಸ್‌, ಚಾಕೋಲೆಟ್ ಬಾಯ್ ಪ್ರಜ್ವಲ್ ದೇವರಾಜ್‌ ಹಾಗೂ ಪತ್ನಿ ರಾಗಿಣಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಸ್ಟಾರ್ ಕಪಲ್ ಅಭಿಮಾನಿಗಳ ಜೊತೆ ಮಾಹಿತಿ ಹಂಚಿ ಕೊಂಡಿದ್ದಾರೆ ಹಾಗೂ ಜಾಗೃತರಾಗಿರುವಂತೆ ಮನವಿ ಮಾಡಿ ಕೊಂಡಿದ್ದಾರೆ. 

'ಪ್ರಜ್ವಲ್ ಮತ್ತು ನನಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ವೈದ್ಯರು ಸೂಚಿಸಿರುವ ಔಷಧಿ ಹಾಗೂ ಸರಿಯಾದ ರೀತಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೀವಿ. ನಿಮ್ಮಲ್ಲರ ಪ್ರೀತಿ ಹಾಗೂ ಹಾರೈಕೆಯಿಂದ ನಾವು ಬೇಗ ಗುಣಮುಖರಾಗುತ್ತೇವೆ,' ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಇಬ್ಬರೂ ಕೈ ಕೈ ಹಿಡಿದು ಒಬ್ಬರನ್ನೊಬ್ಬರು ನೋಡುತ್ತಾ ನಿಂತಿದ್ದಾರೆ.

ಸ್ನೇಹಿತರು ಹಾಗೂ ಕನ್ನಡ ಚಿತ್ರರಂಗದ ಆಪ್ತರು ಯಾವುದೇ ತೊಂದರೆ ಇಲ್ಲದೆ ಗುಣ ಮುಖರಾಗುವಂತೆ ಕಾಮೆಂಟ್ ಮಾಡಿ, ಧೈರ್ಯ ನೀಡಿದ್ದಾರೆ.  ಇನ್‌ಸ್ಪೆಕ್ಟರ್ ವಿಕ್ರಂ ಯಶಸ್ಸಿನಲ್ಲಿರುವ ಪ್ರಜ್ವಲ್ ತಮ್ಮ ಮುಂದಿನ ಚಿತ್ರದ ಮಾತುಕತೆಯಲ್ಲಿ ಬ್ಯುಸಿಯಾಗಿದ್ದರು. 'ಲಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಕಾಲಿಟ್ಟ ರಾಗಿಣಿ, ಕಥಕ್ ಡ್ಯಾನ್ಸರ್ ಆಗಿಯೂ ಸದಾ ಬ್ಯುಸಿ ಇರುವ ಕಲಾವಿದೆ.