‘ಬಂಗಾರದ ಮನುಷ್ಯ ’ ಚಿತ್ರದಲ್ಲಿ ಅಣ್ಣಾವ್ರ ಹೆಸರು ರಾಜೀವ ಎಂದು. ಅದೇ ಹೆಸರನ್ನು ಟೈಟಲ್ ಮಾಡಿಕೊಂಡು ಅಂದು ಡಾ. ರಾಜ್ ಕುಮಾರ್ ಅವರು ರೈತರ ಬಗ್ಗೆ ತೋರಿದ ಕಾಳಜಿಯನ್ನು
ಮತ್ತೊಮ್ಮೆ ಇಲ್ಲಿ ತೋರಿಸುವುದು ಚಿತ್ರ ತಂಡದ ಆಶಯ.

ರಾಜು ತಾಳಿಕೋಟೆ ‘ಕೈ-ಚೇಷ್ಟೆಗೆ’ ಬುಸುಗುಟ್ಟಿದ ‘ನಾಗಿಣಿ’

ಮಯೂರ್ ಪಟೇಲ್ ಅವರು ಮತ್ತೆ ಸಿನಿಮಾ ಕಡೆ ಮುಖ ಮಾಡಬೇಕು ಎಂದುಕೊಂಡಿದ್ದಾಗ ಈ ಕತೆ ಕೇಳಿ ರೀ ಕಂ ಬ್ಯಾಕ್ ಗೆ ಇದು ಹೇಳಿ ಮಾಡಿಸಿದ ಹಾಗಿದೆ ಎಂದು ಒಪ್ಪಿಕೊಂಡರಂತೆ. ‘ಮತ್ತೆ ಬೆಳ್ಳಿ ತೆರೆಗೆ ರಾಜೀವ ಮೂಲಕ ಎಂಟ್ರಿ ಕೊಡುತ್ತಿದ್ದೇನೆ. ಇಲ್ಲಿ ಕತೆ ಮತ್ತು ಹಾಡುಗಳೇ ಹೀರೊ. ಇಂತಹ ಚಿತ್ರದ ಮೂಲಕ ನಾನು ಮತ್ತೆ ಬರುತ್ತಿರುವುದು ಖುಷಿ ಕೊಟ್ಟಿದೆ. ನನಗೆ ಕಾಲು ಪೆಟ್ಟಾಗಿತ್ತು. ಎಲ್ಲವನ್ನೂ ಸರಿ ಮಾಡಿಕೊಂಡು ಬರಲು ಇಷ್ಟು ಸಮಯ ಬೇಕಾಯಿತು. ರೈತರ ಕುರಿತಾದ ಈ ಚಿತ್ರದಲ್ಲಿ ಮೂರು ಶೇಡ್‌ಗಳಲ್ಲಿ ನಾನು
ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಹೇಳಿಕೊಂಡರು ಮಯೂರ್.

ರವಿ ಸ್ಥಾನವೇ ಬದಲು, ಬೆಳಗೆರೆ ಬಿಗ್ ಬಾಸ್ ಕಂಟೆಸ್ಟಂಟ್ ಅಲ್ಲವೇ ಅಲ್ಲ!

ಅಕ್ಷತಾ ಚಿತ್ರದ ನಾಯಕಿ. ಇದು ಅವರಿಗೆ ಹತ್ತನೇ ಚಿತ್ರ. ‘ರೈತರು ಇಂದು ತುಂಬಾ ಕಷ್ಟಪಡುತ್ತಿದ್ದಾರೆ. ಅವರ ಕಷ್ಟಕ್ಕೆ ನಾವು ಸಣ್ಣ ದನಿಯಾಗಿದ್ದೇವೆ. ಅವರನ್ನು ಸರಿಯಾದ ರೀತಿಯಲ್ಲಿ ಗೌರವಿಸಬೇಕು ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಮಯೂರ್ ಪಟೇಲ್ ಪುನರಾಗಮನದ ಚಿತ್ರದಲ್ಲಿ ನಾನು ನಾಯಕಿಯಾಗಿ ನಟಿಸುತ್ತಿರುವುದಕ್ಕೆ ನನಗೆ ಸಂತೋಷ ಇದೆ’ ಎಂದು ಹೇಳುವ ಅಕ್ಷತಾ ಚಿತ್ರದಲ್ಲಿ ಸಾದಾಸೀದ ಹಳ್ಳಿಯ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

'ನನ್ನ ಕಂಡರೆ ನಿಮಗೆ ಏನನಿಸುತ್ತೆ?BB ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ!

ಹಿಂದೆ ಕಿರುಚಿತ್ರಗಳನ್ನು ಮಾಡಿಕೊಂಡಿದ್ದ ಪ್ಲೈಯಿಂಗ್ ಕಿಂಗ್ ಮಂಜು ಅವರು ಮೊದಲ ಬಾರಿಗೆ ‘ರಾಜೀವ’ ಮೂಲಕ ದೊಡ್ಡ ಪರದೆಯ ನಿರ್ದೇಶಕನ ಸ್ಥಾನಕ್ಕೇರುತ್ತಿದ್ದಾರೆ. ಹಿಂದೆ ಮಾಡಿದ್ದ  ಕಿರುಚಿತ್ರಗಳನ್ನು ನೋಡಿದ ನಿರ್ಮಾಪಕರಾದ ರಮೇಶ್ ಮತ್ತು ಕಿರಣ್ ಅವರು ಮಂಜು ಪ್ರತಿಭೆಗೆ ಜೈ ಎಂದು ಬಂಡವಾಳ ಹೂಡಿದ್ದಾರೆ. ಐಎಎಸ್ ಮಾಡಿರುವ ಯುವಕ ಕೆಲವು ಘಟನೆಗಳಿಂದ ಪ್ರೇರಿತರಾಗಿ ಹಳ್ಳಿಗೆ ಬಂದು ತನ್ನ ಹಳ್ಳಿಯನ್ನು ಬದಲಾಯಿಸುವ ಕತೆಗೆ ಒಳ್ಳೆಯ ಚಿತ್ರಕತೆ ಮಾಡಿ ಏಳು ತಿಂಗಳಲ್ಲಿ ಶೂಟಿಂಗ್ ಮುಗಿಸಿರುವ ಮಂಜು ತಮ್ಮ ತಂಡದೊಂದಿಗೆ ಚಿತ್ರದ ಟ್ರೇಲರ್ ಮತ್ತು ಆರು ಹಾಡುಗಳನ್ನು ಬಿಡುಗಡೆ ಮಾಡಿಕೊಂಡರು. ಇದಕ್ಕೆ ರಾಘವೇಂದ್ರ ರಾಜ್‌ಕುಮಾರ್, ಶಾಸಕ ಸತೀಶ್ ರೆಡ್ಡಿ, ಡಿ.ಎಸ್. ವೀರಯ್ಯ, ಭುವನ್ ಪೊನ್ನಣ್ಣ, ಲಹರಿ ವೇಲು ಮೊದಲಾದವರು ಸಾಥ್ ನೀಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಿಚ್ಚ ಸುದೀಪ್ ಚಿತ್ರ ತಂಡವನ್ನು ಎವಿ ಮೂಲಕ ಹರಸಿದರು. ಸಂಗೀತ ನಿರ್ದೇಶಕ ರೋಹಿತ್ ಸೋವರ್ ಅವರಿಗೂ ಇದು ಮೊದಲ ಸಿನಿಮಾ. ಇನ್ನು ಚಿತ್ರಕ್ಕೆ ಕತೆ ಬರೆದಿರುವುದು ಸ್ವತಃ ನಿರ್ಮಾಪಕರಾಗಿರುವ ರಮೇಶ್ ಅವರು. ತಾವೇ ಬರೆದ ಕತೆಯನ್ನು ಆಪ್ತರೆಲ್ಲಾ ಮೆಚ್ಚಿಕೊಂಡಾಗ ಅದನ್ನೊಂದು ಡಾಕ್ಯುಮೆಂಟರಿ ರೂಪಕ್ಕೆ ಇಳಿಸುವ ಚಿಂತನೆ ಬಂದಿದೆ. ಆಗ ಮತ್ತಷ್ಟು ಆಪ್ತರು ಇದನ್ನು ಸಿನಿಮಾ ಮಾಡಿ ಎಂದು ಸಲಹೆ ನೀಡಿದ್ದ ಕಾರಣ ರಮೇಶ್ ಅವರ ರಾಜೀವ ಕತೆ ಸಿನಿಮಾವಾಗಿ ರೂಪುಗೊಂಡಿದೆ.