Asianet Suvarna News Asianet Suvarna News

10 ವರ್ಷದಲ್ಲಿ ನಾನೆಂದೂ ನಿಮ್ಮನ್ನು ಮರೆತಿಲ್ಲ; ಸಾಹಸಸಿಂಹನನ್ನು ನೆನೆದ ಸುದೀಪ್

ಸ್ಯಾಂಡಲ್‌ವುಡ್‌ ಸಾಹಸ ಸಿಂಹನಿಗೆ 10 ನೇ ವರ್ಷದ ಪುಣ್ಯ ಸ್ಮರಣೆ | ವಿಷ್ಣುದಾದನನ್ನು ನೆನೆದ ಕಿಚ್ಚ ಸುದೀಪ್ | 'ಈ ಹತ್ತು ವರ್ಷದಲ್ಲಿ ನಾನು ನಿಮ್ಮನ್ನು ಮರೆತಿಲ್ಲ'  ಎಂದ ಸುದೀಪ್ 

Kannada actor Kiccha sudeep remembers Vishnuvardhan on his death anniversary
Author
Bengaluru, First Published Dec 30, 2019, 1:02 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್‌ ಭೌತಿಕವಾಗಿ ನಮ್ಮನ್ನಗಲಿದರೂ ಜನಮಾನಸದಲ್ಲಿ, ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ.  ಇಂದು ವಿಷ್ಣು ವರ್ಧನ್ 10 ನೇ ವರ್ಷದ ಪುಣ್ಯಸ್ಮರಣೆ. 

ಭಾಷಾ ಕಿಚ್ಚು: 'ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ಹರಿದ ಶಿವಸೇನೆ

ಅಭಿಮಾನಿಗಳು, ಕುಟುಂಬವರ್ಗದವರು ವಿಷ್ಣುವರ್ಧನ ಭಾವಚಿತ್ರಕ್ಕೆ ಪುಷ್ಮ ನಮನ ಸಲ್ಲಿಸಿದ್ದಾರೆ. ಕಿಚ್ಚ ಸುದೀಪ್ ಸಾಹಸ ಸಿಂಹನನ್ನು ನೆನೆಸಿಕೊಂಡಿದ್ದು ಹೀಗೆ. 

 

ಅಪ್ಪಾಜಿ..
ಇಂದು ನಿಮ್ಮ 10ನೇ ಪುಣ್ಯಸ್ಮರಣೆ! ಆದ್ರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ  ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು  ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ' ಎಂದಿದ್ದಾರೆ. 

7 ವರ್ಷಗಳ ನಂತರ ಬ್ರೇಕಿಂಗ್ ನ್ಯೂಸ್ ಕೊಟ್ರು ಕಿಚ್ಚ ಸುದೀಪ್!

ವಿಷ್ಣುವರ್ಧನ್- ಸುದೀಪ್ ಉತ್ತಮ ಬಾಂಧವ್ಯ ಹೊಂದಿದ್ದರು. 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸುದೀಪ್ ನಿರ್ದೇಶನದ 'ಶಾಂತಿ ನಿವಾಸ' ದಲ್ಲಿ ವಿಷ್ಣುವರ್ಧನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಷ್ಣುದಾದಾ 'ಜೇಷ್ಠ' ಚಿತ್ರಕ್ಕೆ ಸುದೀಪ್ ಹಿನ್ನಲೆ ಧ್ವನಿ ನೀಡಿದ್ದರು. 

 

Follow Us:
Download App:
  • android
  • ios