ಸ್ಯಾಂಡಲ್‌ವುಡ್‌ ಫೈಟಿಂಗ್ ಆಂಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್‌ ಈಗ ಸೋಷಿಯಲ್‌ ಮೀಡಿಯಾ ಸ್ಟಾರ್‌ ಕೂಡ ಹೌದು. ಜನ ಸೇವೆ ಹಾಗೂ ಹೆಣ್ಣು ಮಕ್ಕಳ ಸುರಕ್ಷಣೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಹುಚ್ಚ ವೆಂಕಟ್‌ ಈಗ ಮತ್ತೊಮ್ಮೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ..

ಕೊರೋನಾದಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ  ಸಹಾಯ ಮಾಡಲು ಮುಂದಾದ ವೆಂಕಟ್‌. ಬೀದಿಯಲ್ಲಿ ಪಾನಿಪೂರಿ ವ್ಯಾಪಾರ ಮಾಡುವವರಿಗೆ, ಮಾಂಸದಂಗಡಿ, ಮೀನಿನಂಗಡಿ ಹಾಗೂ ಇನ್ನಿತರರಿಗೆ ಫುಡ್‌ ಕಿಟ್ ವಿತರಣೆ ಮಾಡಿ ಸಹಾಯ ಮಾಡಿದ್ದರು. ಆದರೀಗ ಅವರೇ ಸಹಾಯ ಮಾಡಲು ಬೇಡುತ್ತಿರುವುದನ್ನು ನೋಡಿ ಜನರು ಶಾಕ್ ಆಗಿದ್ದಾರೆ.

ಮೀನುಗಾರರ ಕಷ್ಟದ ಬಗ್ಗೆ ಮಾತಾಡಿದ ಹುಚ್ಚ ವೆಂಕಟ್; ನಾವ್ ಹೇಳೋದಕ್ಕಿಂತ ಅವರ ಬಾಯಲ್ಲೇ ಕೇಳಿ.!

ಸದ್ಯ ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಪ್ರತಿ ಊರಿಗೆ ಹೋಗಿ ಹಣ ಬೇಕಾಗಿದೆ ನೆರವು ನೀಡಿ ಎಂದು ಜನರಲ್ಲಿ ಬೇಡಿಕೊಳ್ಳುತ್ತಿದ್ದಾರಂತೆ. ಅಷ್ಟೇ ಅಲ್ಲದೆ ರಂಗನಾಥ ಮೈದಾನದಲ್ಲಿ ಇಡೀ ರಾತ್ರಿ ಮಲಗಿ ಬೆಳಗ್ಗೆ ದೇವಾಲಯದ ಮುಂಭಾಗದ ಬೀದಿಗಳಲ್ಲಿ ಜನರಿಗೆ ಬೈಯುತ್ತಾ ಓಡಾಡಿದ್ದಾರೆ ಎನ್ನಲಾಗಿದೆ.  ಒಂದು ಹೊತ್ತು ಊಟಬೇಕೆಂದ ಕಾರಣಕ್ಕೆ ಜನರು ಊಟ ಕೊಡಿಸಿದ್ದಾರೆ. ವೆಂಕಟ್‌ ಸ್ವಭಾವ ತಿಳಿದುಕೊಂಡಿರುವ ಜನರು ಅವರ ತಂಟೆಗೆ ಹೋಗಿಲ್ಲ. 

ಕಣ್ಣೀರಿಟ್ಟಿದು ನಿಜಾನಾ?

ಹುಚ್ಚ ವೆಂಕಟ್‌ ಸ್ವಭಾವ ಅರಿತವರು ಸಾಮಾನ್ಯವಾಗಿ ಯಾರೂ ಅವರ ತಂಟೆಗೆ ಹೋಗುವುದಿಲ್ಲ ಆದರೆ ಅವರಲ್ಲಿ ಕೆಲವರಿಗೆ ಮಾತ್ರ ಗೊತ್ತು ಎಷ್ಟು ವೆಂಕಟ್ ಸೆನ್ಸಿಟಿವ್‌ ಎಂದು. ಊಟ ಕೊಡಿಸಿದ ಜನರ ಬಳಿ ಕಣ್ಣೀರಿಟ್ಟು ಊರಿಗೆ ಹೋಗಲು ಹಣವಿಲ್ಲವೆಂದು ಹಣ ಕೇಳಿದ್ದಾರೆ.  ಜನರು ಹಣ ಸಹಾಯ ಮಾಡಿ ಹೊರಡಲು ವ್ಯವಸ್ಥೆ ಮಾಡುವಾಗ ಯಾರೋ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೆಂಕಟ್‌ನನ್ನು ವಶಕ್ಕೆ ಪಡೆದುಕೊಂಡು ಶ್ರೀರಂಗಪಟ್ಟಣದಿಂದ ಹೊರಕ್ಕೆ ಕಳುಹಿಸಿದ್ದಾರೆ.

"