ನಟ ದರ್ಶನ್‌ ನಿರೀಕ್ಷೆಗೂ ಮೀರಿ ‘ರಾಬರ್ಟ್‌’ ಚಿತ್ರಕ್ಕೆ ಯಶಸ್ಸು ಕೊಟ್ಟಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ವಿಜಯ ಯಾತ್ರೆ ಆಚರಿಸುತ್ತಿದ್ದಾರೆ. 

ಮಾ.29ರಿಂದ ತುಮಕೂರು, ಚಿತ್ರದುರ್ಗ, ದಾವಣಗೆರೆಯಿಂದ ವಿಜಯ ಯಾತ್ರೆ ಆರಂಭವಾಗಲಿದೆ. ಮಾ.30ರಂದು ಧಾರವಾಡ, ಹುಬ್ಬಳ್ಳಿ, ಹಾವೇರಿಯಲ್ಲಿ ದರ್ಶನ್‌ ಸಿಗಲಿದ್ದಾರೆ. ಮಾ.31ರಂದು ಶಿವಮೊಗ್ಗ, ಹಾಸನ, ತಿಪಟೂರಿಗೆ ಭೇಟಿ ನೀಡಲಿರುವ ಅವರು ಏ.1ರಂದು ಗುಂಡ್ಲುಪೇಟೆ, ಮೈಸೂರು, ಮಂಡ್ಯ, ಮದ್ದೂರಿನಲ್ಲಿ ‘ರಾಬರ್ಟ್‌’ ಚಿತ್ರದ ವಿಜಯ ಯಾತ್ರೆ ನಡೆಸಲಿದ್ದಾರೆ.

ರಾಬರ್ಟ್ ಚಿತ್ರ ವಿಮರ್ಶೆ: ಹೀರೋಗಿಲ್ಲ ಶಾದಿಭಾಗ್ಯ, ರೊಮ್ಯಾನ್ಸ್‌ಗೆ ಅಡ್ಡಿ ಇಲ್ಲ 

ದರ್ಶನ್‌, ನಿರ್ದೇಶಕ ತರುಣ್‌ ಸುಧೀರ್‌, ನಾಯಕಿ ಆಶಾ ಭಟ್‌, ನಿರ್ಮಾಪಕ ಉಮಾಪತಿ ಸೇರಿದಂತೆ ಚಿತ್ರತಂಡ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

50 ಕೋಟಿ ಕ್ಲಬ್ ಸೇರಿದ ದರ್ಶನ್ ಸಿನಿಮಾ; ಗಳಿಕೆ ವಿಚಾರದಲ್ಲಿ ಫ್ಯಾನ್ಸ್ ವಾರ್! 

ಬಸ್‌ ಚಾಲಕನನ್ನು ಭೇಟಿ ಮಾಡಿದ ದರ್ಶನ್‌

ಈ ನಡುವೆ ನಟ ದರ್ಶನ್‌ 80 ವರ್ಷ ವಯಸ್ಸಿನ ಬಸ್‌ ಚಾಲಕನನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮಾ.22ರಂದು ಮೈಸೂರಿನ ತಿಲಕ್‌ ನಗರದಲ್ಲಿರುವ ಸುಂದರ್‌ ರಾಜ್‌ ಎಂಬುವವರನ್ನು ಭೇಟಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇವರು ದರ್ಶನ್‌ ಶಾಲೆಗೆ ಹೋಗುತ್ತಿದ್ದ ಬಸ್‌ನ ಚಾಲಕರು. ‘ಸಾರಥಿ ರಿಯಲ್‌ ಸಾರಥಿಯನ್ನು ಭೇಟಿ ಮಾಡಿದ ಕ್ಷಣ ಇದು. ನಾನು ಶಾಲೆಗೆ ಹೋಗುತ್ತಿದ್ದಾಗ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಾಗಿದ್ದವರು ಇವರು. ಎಲ್ಲರು ಸುಂದರ್‌ರಾಜ್‌ ಮಾಮ, ಸುಂದರ್‌ರಾಜ್‌ ಅಂಕಲ್‌ ಅಂತಲೇ ಕರೆಯುತ್ತಿದ್ವಿ. ಇವತ್ತು ಅವರ 80ನೇ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಅವರನ್ನು ಭೇಟಿ ಮಾಡಿ ಶುಭ ಕೋರಿದೆ’ ಎಂದು ನಟ ದರ್ಶನ್‌ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್‌