Asianet Suvarna News Asianet Suvarna News

ನಾನು ಯಾವ ರಾಜೀ ಸಂಧಾನಕ್ಕೆ ಹೋಗಿರಲಿಲ್ಲ: ನೆಲಮಂಗಲದಲ್ಲಿ ನಟ ವಿನೋದ್ ರಾಜ್ ಸ್ಪಷ್ಟನೆ

'ನಾನು ನನ್ನ ತಾಯಿಯವರ ಮಾತಿನಂತೆ ಯಾವತ್ತೂ ಬದುಕಲು ಇಷ್ಟಪಡುತ್ತೇನೆ. ನೋವಿನಲ್ಲಿರುವವರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕಾನೂನು ಇದೆ. ಹಾಗೇ, ಮೇಲೊಬ್ಬ ದೇವರಿದ್ದಾನೆ ಎಂದು ನಂಬಿರುವವರು ನಾವು' ಎಂದಿದ್ದಾರೆ ನಟ ವಿನೋದ್ ರಾಜ್.

i did not meet anyone for compromise in kannada senior actor vinod raj srb
Author
First Published Jul 29, 2024, 1:18 PM IST | Last Updated Jul 29, 2024, 1:18 PM IST

ಅಶ್ಲೀಲ ಮೆಸೇಜ್ ಕಳುಹಿಸಿ ಕೊಲೆಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್‌ನಲ್ಲಿ ಕನ್ನಡದ ಸ್ಟಾರ್ ನಟ ದರ್ಶನ್ (Darshan) ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿ ಇರುವುದು ಗೊತ್ತೇ ಇದೆ. ಕೆಲ ದಿನಗಳ ಹಿಂದೆ ಜೈಲಿನಲ್ಲಿ ನಟ ದರ್ಶನ್ ಅವರನ್ಜು ಭೇಟಿಯಾಗಿ ಮಾತುಕತೆ ನಡೆಸಿದ್ದರು ಹಿರಿಯ ನಟ ವಿನೋದ್ ರಾಜ್. ದರ್ಶನ್ ಭೇಟಿ ಬಳಿಕ ಅವರು ಮಾಧ್ಯಮಗಳ ಮುಂದೆ 'ಈ ಸ್ಥಿತಿಯಲ್ಲಿ ದರ್ಶನ್ ಭೇಟಿಯಾಗಿದ್ದು ಮನಸ್ಸಿಗೆ ತುಂಬಾ ನೋವಾಯ್ತು. ದರ್ಶನ್ ನಿರಪರಾಧಿ ಆಗಿದ್ದರೆ ಆದಷ್ಟು ಬೇಗ ಬಿಡುಗಡೆಯಾಗ್ಲೀ..ಎಂದಿದ್ದರು. 

ಬಳಿಕ ಅವರು ಮಾರನೆಯ ದಿನ ಕೊಲೆಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡಿದ್ದರು. ಅಲ್ಲಿ ಅವರು ಚಿತ್ರದುರ್ಗದ ಕೊಲೆಯಾದ ರೇಣುಕಾಸ್ವಾಮಿ ಮನೆಯಲ್ಲಿ ಆತನ ತಂದೆ-ತಾಯಿ, ಗರ್ಭಿಣಿ ಪತ್ನಿ ಹಾಗೂ ಆಪ್ತರ ಸಮ್ಮುಖದಲ್ಲಿ ಸಾಂತ್ವನದ ಮಾತುಗಳನ್ನು ಆಡಿ ಬಂದಿದ್ದರು. ಜೊತೆಗೆ, ರೇಣುಕಾಸ್ವಾಮಿ ಪತ್ನಿಗೆ ಸಾಂತ್ವನ ಹೇಳಿ ಒಂದು ಲಕ್ಷ ಚೆಕ್ ಸಹ ನೀಡಿ ಬಂದಿದ್ದರು ನಟ ವಿನೋದ್ ರಾಜ್. ಆದರೆ ಅದೀಗ ವಿವಾದ ಎಬ್ಬಿಸುತ್ತಿದೆ. 

ಕನ್ನಡಿಗರಿಗೆ ಕೆಲಸ ಕೊಡಲು ಹೋಗಿ ಪೆಟ್ಟು ತಿಂದ್ರಾ ಯಶ್‌-ಕೆವಿಎನ್ ಪ್ರೊಡಕ್ಷನ್ಸ್‌? ಏನಿದು ಸೆಟ್ ಪ್ರಾಬ್ಲಂ?

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಕೋಲಾಹಲವೇ ಎದ್ದುಬಿಟ್ಟಿದೆ. ಮೊದಲು ದರ್ಶನ್ ಅವರನ್ನು ಭೇಟಿಯಾಗಿ, ಬಳಿಕ  ವಿನೋದ್ ರಾಜ್‌ ಅವರು ದರ್ಶನ್ ಸಲಹೆಯಂತೆ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಿ ರಾಜೀ ಸಂಧಾನಕ್ಕೆ ಪ್ರಯತ್ನ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಆರೋಪವನ್ನು ಇದೀಗ ಹಿರಿಯ ನಟ ವಿನೋದ್ ರಾಜ್ ತಳ್ಳಿ ಹಾಕಿದ್ದಾರೆ. 

ತಮ್ಮ ಮನೆಯಿರುವ ನೆಲಮಂಗಲದಲ್ಲಿ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನಟ ವಿನೋದ್ ರಾಜ್, ದರ್ಶನ್ ಅವರನ್ಜು ಒಬ್ಬ ಕಲಾವಿದ ಎನ್ನುವ ಕಾರಣಕ್ಕೆ ಭೇಟಿ ಮಾಡಿದ್ದೆ. ಆದರೆ, ಚಿತ್ರದುರ್ಗಕ್ಕೆ ಹೋಗಿ ರೇಣುಕಾಸ್ವಾಮಿ ಮನೆಯವರನ್ನು ಹಾಗೂ ಅವರ ಗರ್ಭಿಣಿಯಾಗಿರುವ ಶ್ರೀಮತಿಯವರನ್ನು ಅನುಕಂಪದ, ಸಹಾಯಹಸ್ತ ಚಾಚುವ ದೃಷ್ಟಿಯಿಂದ ಭೇಟಿ ಮಾಡಿದ್ಧೇನೆ. ಹುಟ್ಟುವ ಮಗುವಿಗೆ ಒಂದು ಒಳ್ಳೆಯದು ಮಾಡುವ ಉದ್ದೇಶದಿಂದ ಸಣ್ಣ ನೆರವು ನೀಡಿದೆ ಅಷ್ಟೇ' ಎಂದಿದ್ದಾರೆ.  

ಅದನ್ನ ಬಿಟ್ಟು ನಾನು ಯಾವುದೇ ರಾಜೀ ಸಂಧಾನ ಮಾಡಿಲ್ಲ. ಅಲ್ಲಿ ಮಾತನಾಡುವಾಗ ಸಾಕಷ್ಟು ಜನರು ಇದ್ದರು. ಸಂದೇಹವಿದ್ದರೆ ಅಲ್ಲಿರುವ ಯಾರನ್ನಾದರೂ ಕೇಳಬಹುದು' ಎಂದು ಕ್ಲಾರಿಟಿ ಕೊಟ್ಟಿದ್ದಾರೆ ನಟ ವಿನೋದ್ ರಾಜ್. 'ನಾನು ನನ್ನ ತಾಯಿಯವರ ಮಾತಿನಂತೆ ಯಾವತ್ತೂ ಬದುಕಲು ಇಷ್ಟಪಡುತ್ತೇನೆ. ನೋವಿನಲ್ಲಿರುವವರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕಾನೂನು ಇದೆ. ಹಾಗೇ, ಮೇಲೊಬ್ಬ ದೇವರಿದ್ದಾನೆ ಎಂದು ನಂಬಿರುವವರು ನಾವು' ಎಂದಿದ್ದಾರೆ ನಟ ವಿನೋದ್ ರಾಜ್. 

ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಲು ಹೊರಟಿದ್ದಾರಾ ಸೃಜನ್-ಚಂದನ್ ಜೋಡಿ? ಇದೇನ್ ಗುರೂ..!

ಒಟ್ಟಿನಲ್ಲಿ, ನೋವಿನಲ್ಲಿರುವ ಜನರಿಗೆ ಸಹಾಯ ಮಾಡಲು ಹೋಗಿ ಸುಮ್ಮನೇ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡರೇ ನಟ ವಿನೋದ್ ರಾಜ್ ಎಂದು ಕೆಲವರು ಮಾತನಾಡುತ್ತಿದ್ದಾರೆ. ಹಿರಿಯ ನಟಿ ಲೀಲಾವತಿಯವರೂ ಕೂಡ ಅನೇಕ ಬಾರಿ ತಮ್ಮ ಮುಗ್ಧತೆ ಹಾಗೂ ಅನುಕಂಪಕ್ಕೆ ಬಹಳಷ್ಟು ಬೆಲೆ ತೆತ್ತಿದ್ದರು. ಈಗ ಅವರ ಮಗನೂ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ ಎನ್ನಿಸುತ್ತಿದೆ. 

ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ನಾವ್ಯಾರು, ಆದರೆ ನಮ್ಮಿಂದಾಗುವ ಸಹಾಯ ಎಲ್ಲರಿಗೂ ಮಾಡೋಣ ಎಂದು ಮರುಗುವ ಮನಸ್ಸೇ ಅವರಿಗೆ  ಮುಳುವಾಗುತ್ತಿದೆಯೇ? ಯಾರೇ ಆಗಿರಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವುದು ತಪ್ಪೇ? ಎಂದು ಹಲವರು ನಟ ವಿನೋದ್ ರಾಜ್ ಈಗ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವ ಸಂದರ್ಭ ನೋಡಿ ಕಾಮೆಂಟ್ ಮಾಡುತ್ತಿದ್ದಾರೆ. ಬೇರೆಯವರಿಗೆ ಒಳ್ಳೆಯದಾಗಲಿ ಎಂದು ಬಯಸುವ ಅವರಿಗೇ ಕೆಟ್ಟದ್ದು ಆಗದಿರಲಿ' ಎಂದು ಹಲವರು ಹಾರೈಸುತ್ತಿದ್ದಾರೆ. 

ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!

Latest Videos
Follow Us:
Download App:
  • android
  • ios