ಗೋಲ್ಡನ್ ‌ಸ್ಟಾರ್ ಗಣೇಶ್ ಅಭಿನಯದ 99 ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.  99 ಚಿತ್ರ ಬಿಡುಗಡೆಗೆ ತಡೆ ಕೋರಿ ಹರೀಶ್ ಕುಮಾರ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.  

ಹರೀಶ್ ಕುಮಾರ್, ಲಕ್ಷ್ಮಿ ಫೈನಾನ್ಸ್ , ಪಲ್ಲವಿ ಚಿತ್ರ ಮಂದಿರದ ಮಾಲೀಕ.  ಗಂಗಾ ಚಿತ್ರದ ಫ್ರೀ ಪ್ರೊಡಕ್ಷನ್ ವೇಳೆ ಹರೀಶ್ ಕುಮಾರ್ ರಿಂದ ನಿರ್ಮಾಪಕ ರಾಮು 65 ಲಕ್ಷ ರೂ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ  ಹರೀಶ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಚಿತ್ರ ಬಿಡುಗಡೆಗೆ ತಡೆ‌ ನೀಡಲು ಕೋರ್ಟ್ ನಕಾರ ವ್ಯಕ್ತಪಡಿಸಿದ್ದು ನಿರ್ಮಾಪಕ ರಾಮುಗೆ ತುರ್ತು ನೋಟೀಸ್ ನೀಡಿದೆ. ಕೋರ್ಟ್ ನಾಳೆಗೆ ವಿಚಾರಣೆ ‌ಮುಂದೂಡಿದೆ.