ನಟಿ ದಿಶಾ ಮದನ್ ಇತ್ತೀಚಿಗೆ ಶೇರ್ ಮಾಡಿಕೊಂಡ ಇನ್‌ಸ್ಟಾಗ್ರಾಂ ರೀಲ್ಸ್ ವಿಡಿಯೋ ವೈರಲ್. ಪತಿ-ಪತ್ನಿಯ ಇಷ್ಟ ಕಷ್ಟಗಳು ಏನೆಂದು ತಿಳಿಸುವ ವೀಡಿಯೋ ಇದು...
ಸೋಷಿಯಲ್ ಮೀಡಿಯಾ ಸ್ಟಾರ್, ಫ್ರೆಂಚ್ ಬಿರಿಯಾನಿ ಚಿತ್ರದ ನಟಿ ದಿಶಾ ಮದನ್ ಕೆಲವು ದಿನಗಳಿಂದ ಯಾವುದೇ ರೀಲ್ಸ್ (ಟಿಕ್‌ಟಾಕ್ ರೀತಿ) ವಿಡಿಯೋಗಳನ್ನು ಅಪ್ಲೋಡ್ ಮಾಡಿರಲಿಲ್ಲ. ಇನ್ ಆ್ಯಕ್ಟೀವ್ ಆಗಿರಲು ಕಾರಣಗಳಿದ್ದು ನೆಟ್ಟಿಗರಲ್ಲಿ ಕ್ಷಮೆ ಯಾಚಿಸಿದ್ದಾರೆ. ಇನ್ನು ಮುಂದೆ ತಪ್ಪದೇ ಫೋಟೋ ಹಾಗೂ ವಿಡಿಯೋ ಅಪ್ಲೋಡ್ ಮಾಡುವುದಾಗಿ ಮಾತು ಕೊಟ್ಟಿದ್ದಾರೆ. ಈ ಸಮಯದಲ್ಲಿ ಶೇರ್ ಮಾಡಿಕೊಂಡ ಫ್ಯಾಮಿಲಿ ವಿಡಿಯೋ ದೊಡ್ಡ ಸದ್ದು ಮಾಡುತ್ತಿದೆ.
ಕಿರುತೆರೆ ನಟಿ ದಿಶಾ ಮದನ್ ಪುತ್ರ ವಿಹಾನ್ ಬರ್ತಡೇ; ಕಲರ್‌ಫುಲ್ ಫೋಟೋಗಳು!
ಹೌದು! ಫ್ಯಾಮಿಲಿ ಎಡಿಷನ್ ಎಂಬ ವಿಡಿಯೋದಲ್ಲಿ ಎರಡು ಆಯ್ಕೆಗಳಿರುತ್ತವೆ. ಪತಿ ಪತ್ನಿ ಇಬ್ಬರಿಗೆ ಯಾವುದು ಬೇಕೆಂದು ಆಯ್ಕೆ ಮಾಡಿಕೊಂಡು ಅತನ ಕಡೆ ನಡೆಯಬೇಕು. ವಿಡಿಯೋದಲ್ಲಿರುವ ಆಯ್ಕೆಗಳು ಎಲ್ಲರ ಗಮನ ಸೆಳೆದಿದ್ದು ಮಕ್ಕಳು ಎಷ್ಟು ಬೇಕೆಂಬ ಗೊಂದಲ.....
ವಿಡಿಯೋ ಹೀಗಿದೆ:
ವಿಡಿಯೋ ಆರಂಭವಾಗುತ್ತಿದ್ದಂತೆ ಮೊದಲು ಬಂದ ಆಯ್ಕೆ ಪ್ರೈಡ್ ರೈಸ್ / ಬಿರಿಯಾನಿ ಎಂದು. ಅದಕ್ಕೆ ದಿಶಾ ಪ್ರೈಡ್ ರೈಸ್ ಪಿಕ್ ಮಾಡಿದರೆ, ಪತಿ ಬಿರಿಯಾನಿ ಕಡೆ ನಡೆದಿದ್ದಾರೆ. ನಾಯಿ ಬೇಕಾ ಅಥವಾ ಬೆಕ್ಕು ಬೇಕಾ ಎಂದರೆ ಇಬ್ಬರು ನಾಯಿ ಬೇಕು ಎಂದಿದ್ದಾರೆ. ಎರಡು ಮಕ್ಕಳು ಬೇಕಾ ಅಥವಾ 5 ಮಕ್ಕಳು ಬೇಕಾ ಎಂಬ ಪ್ರಶ್ನೆಗೆ ಪತಿ ಶಶಾಂಕ್ ಎರಡೆಂದರೆ ದಿಶಾ ಮಾತ್ರ ಮೊದಲ ಮಗ ವಿಹಾನ್‌ನನ್ನು ಹಿಡಿದುಕೊಂಡು 5 ಮಕ್ಕಳ ಆಯ್ಕೆ ಕಡೆ ನಡೆದಿದ್ದಾರೆ ಆದರೆ ತಕ್ಷಣವೇ ಪತಿ ಶಶಾಂಕ್ ಮೊದಲ ಪುತ್ರನನ್ನು ತನ್ನ ಕಡೆ ಕರೆದುಕೊಂಡು ಹೋಗಿದ್ದಾರೆ. ಪ್ರಯಾಣಿಸುವಾಗ ವಿಮಾನ ಬೇಕಾ ಅಥವಾ ರೋಡ್ ಟ್ರಿಪ್ ಮಾಡುತ್ತೀರಾ ಎಂಬ ಪ್ರಶ್ನೆಗೆ ಶಶಾಂಕ್ ರೋಡ್ ಟ್ರಿಪ್ ಬೇಕು, ಎಂದರೆ ದಿಶಾ ವಿಮಾನ ಎಂದಿದ್ದಾರೆ. ಪಾರ್ಟಿ ಅಥವಾ ಮನೆಯಲಿರುವುದಾ ಎಂಬ ಗೊಂದಲಕ್ಕೆ ಶಶಾಂಕ್ ಪಾರ್ಟಿ ಎಂದಿದ್ದಾರೆ. ಆದರೆ, ದಿಶಾ ಪತಿಯನ್ನು ಎಳೆದು ಮನೆಯಲ್ಲಿರುವುದನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ದಾಂಪತ್ಯದಲ್ಲಿ ಫ್ಯಾನ್ ಬೇಕು, ಬೇಡ ಎನ್ನುವ ಚರ್ಚಯಿಂದ ಹತ್ತು ಹಲವು ವಿಷಯಗಳಿಗೆ ಗಂಡ-ಹೆಂಡಿರ ನಡುವೆ ಮೂಡುವ ಗೊಂದಲಗಳಲ್ಲಿ ಈ ಜೋಡಿ ನವಿರಾಗಿ ಹೇಳಿದೆ.
ವೈರಲ್ ಆಯ್ತು ಕಿರುತೆರೆ ನಟಿ ಬೇಬಿ ಬಂಪ್ ಫೋಟೋಸ್!
ದಿಶಾ ಮಾಡುವ ಪ್ರತಿಯೊಂದೂ ವಿಡಿಯೋನೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತದೆ. ಪತಿ ಶಶಾಂಕ್ ಜೊತೆ ಮಾಡುತ್ತಿರುವ ಮೊದಲ ವಿಡಿಯೋ ಇದು ಅಲ್ಲವಾದರೂ, ಪುತ್ರನ ಜೊತೆ ಇವೆಲ್ಲಾ ಹೊಸತು. ಒಟ್ಟಾರೆ ದಿಶಾ ಮಾತ್ರ ತಮ್ಮ ಫಾಲೋವರ್ಸ್‌ಗೆ ಎಂಟರ್ಟೇನ್ಮೆಂಟ್ ಕಂಟೆಂಟ್ ನೀಡುತ್ತಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 7, 2020, 1:08 PM IST