ಗಿರೀಶ್ ನಿರ್ದೇಶನದ ‘ಒಂದ್ ಕತೆ ಹೇಳ್ಲಾ’ ಚಿತ್ರ ಹಲವು ಪ್ರಥಮಗಳ ಮೂಲಕ ಕುತೂಹಲ ಮೂಡಿಸಿದೆ. ದಕ್ಷಿಣ ಭಾರತ ಚಿತ್ರೋದ್ಯಮದಲ್ಲೇ ಮೊದಲ ‘ಹಾರರ್ ಆ್ಯಂಥಾಲಜಿ’ ಚಿತ್ರ ಎನ್ನುವ ಹೆಗ್ಗಳಿಕೆ ಇದರದ್ದು.

‘ಒಂದು ಕತೆಯಲ್ಲಿ ಐದು ಉಪಕತೆಗಳು. ಆ ಐದು ಉಪಕತೆಗಳಿಗೂ ಪ್ರತ್ಯೇಕ ಪಾತ್ರಧಾರಿಗಳು. ಅದರೊಳಗಿನ ಒಂದು ಉಪಕತೆಯಲ್ಲಿ ನಾನು ನಾಯಕಿ. ಕಡಿಮೆ ಅವಧಿಯಲ್ಲಿ ಬಂದು ಹೋಗುವ ಪಾತ್ರವಾದರೂ, ಮನಸಲ್ಲಿ ಉಳಿದುಕೊಳ್ಳಬಹುದಾದ ಪಾತ್ರವದು. ಎಂಟ್ರಿಯಲ್ಲೇ ಇಂತಹದೊಂದು ಪಾತ್ರ ಸಿಕ್ಕಿದೆ ಎನ್ನುವ ಖುಷಿಯಿದೆ’ ಪ್ರಣತಿಗೆ. 

ಬಿಕಾಂ ಪದವಿ ಮುಗಿಸಿ, ತಮ್ಮ ಆಸೆಯಂತೆ ಆಯ್ಕೆ ಮಾಡಿಕೊಂಡಿದ್ದು ಮಾಧ್ಯಮ ಕ್ಷೇತ್ರ. ಶಿವ ಮೊಗ್ಗದ ಲೋಕಲ್ ಚಾನೆಲ್‌ವೊಂದರಲ್ಲಿ ನಿರೂಪಕಿ ಆಗಿದ್ದರು. ಅದೇ ನಂಟಿನ ಮೂಲಕ ನಟಿ ಆಗಬೇಕೆಂದು ಬೆಂಗಳೂರಿಗೆ ಬಂದರು. ಒಂದಷ್ಟು ತರಬೇತಿ ಪಡೆದು ಸಿನಿಮಾ ಕನಸು ನನಸಾಗಿಸಿಕೊಂಡಿದ್ದಾರೆ.