ನಿಖಿಲ್ ಕುಮಾರಸ್ವಾಮಿ ಚಿತ್ರದಲ್ಲಿ ಯಾವ ಪಾತ್ರಕ್ಕೆ ದುನಿಯಾ ವಿಜಯ್ ಎಂಟ್ರಿ?
ಲೈಕಾ ಪ್ರೊಡಕ್ಷನ್ ಮುಂಬರುವ ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿದ್ದು, ಬೇರೆ ಭಾಷೆಗಳಿಗೂ ಡಬ್ ಆಗುವ ಸಂಭವ ಇದ್ದೇ ಇದೆ. ಆದರೆ, ಈ ಚಿತ್ರದಲ್ಲಿ ದುನಿಯಾ ವಿಜಯ್ ಯಾವ ಪಾತ್ರ ಪೋಷಿಸಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.

ಲೈಕಾ ಪ್ರೊಡಕ್ಷನ್ ನಿರ್ಮಾಣ, ನಿಖಿಲ್ ಕುಮಾರಸ್ವಾಮಿ ನಟನೆಯ ಮುಂಬರುವ ಚಿತ್ರಕ್ಕೆ ದುನಿಯಾ ವಿಜಯ್ ಎಂಟ್ರಿಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ನಿಖಿಲ್ ಕುಮಾರಸ್ವಾಮಿ ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರು ಲಕ್ಷ್ಮಣ್. ಈ ಮೊದಲು ಲಕ್ಷ್ಮಣ್ ಬೋಗನ್, ಭೂಮಿ, ರೋಮಿಯೋಮತ್ತು ಜ್ಯೂಲಿಯೆಟ್ ಚಿತ್ರಗಳನ್ನು ನಿರ್ದೇಶಿಸಿದ್ದು, ಇದೀಗ ಅವರು ತಮ್ಮ ಮೊದಲ ಕನ್ನಡ ಸಿನಿಮಾ ನಿರ್ದೇಶನಕ್ಕೆ ಹೆಜ್ಜೆಯಿಟ್ಟಿದ್ದಾರೆ.
ತಮಿಳಿನಲ್ಲಿ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ಸಂಸ್ಥೆ, ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ಮಿಸುವ ಘೋಷಣೆ ಮಾಡಿದೆ. ಇದು ಭಾರೀ ಬಜೆಟ್ ಚಿತ್ರವಾಗಿದ್ದು, ನಿಖಿಲ್ ಕುಮಾರಸ್ವಾಮಿ ನಾಯಕತ್ವ ಫಿಕ್ಸ್ ಆಗಿದೆ. ಜತೆಯಲ್ಲಿ ರಂಗಬಲಿ ಖ್ಯಾತಿಯ ಯುಕ್ತಿ ಥರೇಜಾ ನಟಿಸಲಿದ್ದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
ಮದುವೆಯಲ್ಲಿ ಆಲಿಯಾ ಭಟ್ ಲೆಹಂಗಾ ಬದಲು ಸೀರೆ ಉಟ್ಟಿದ್ದ ಗುಟ್ಟು ರಟ್ಟು
ಲೈಕಾ ಪ್ರೊಡಕ್ಷನ್ ಮುಂಬರುವ ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿದ್ದು, ಬೇರೆ ಭಾಷೆಗಳಿಗೂ ಡಬ್ ಆಗುವ ಸಂಭವ ಇದ್ದೇ ಇದೆ. ಆದರೆ, ಈ ಚಿತ್ರದಲ್ಲಿ ದುನಿಯಾ ವಿಜಯ್ ಯಾವ ಪಾತ್ರ ಪೋಷಿಸಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಕನ್ನಡದಲ್ಲಿ ಹೀರೋ ಆಗಿಯೇ ಸಾಕಷ್ಟು ಚಿತ್ರ ಮಾಡಿರುವ ದುನಿಯಾ ವಿಜಯ್, ಲೈಕಾ ಪ್ರೊಡಕ್ಷನ್‌ನಲ್ಲಿ ದ್ವಿಭಾಷಾ ಚಿತ್ರವಾದ್ದರಿಂದ ನಿಖಿಲ್ ಎದುರು ವಿಲನ್ ಆಗುವ ಸಾಧ್ಯತೆ ಇದೆಯೇ? ಗೊತ್ತಿಲ್ಲ ಎಂಬುದೇ ಉತ್ತರ. ಏಕೆಂದರೆ, ಯಾವುದನ್ನೂ ಊಹಿಸಲು ಅಸಾಧ್ಯ., ಕಾದು ನೋಡುವುದೊಂದೇ ದಾರಿ.
ಏನೋ ಇದೆ ಅಂತಿದಾರೆ 'ಸುರಸುಂದ್ರ' ಅವಿನಾಶ್ ಬಿಗ್ ಬಾಸ್ ಸೀಕ್ರೆಟ್..!