ಬೆಂಗಳೂರು (ಜ. 18)  ಕೊರೋನಾ  ಆತಂಕ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿಯೇ ಸ್ಯಾಂಡಲ್ ವುಡ್ ಅಭಿಮಾನಿಗಳಿಗೊಂದು ಶುಭ ಸಮಾಚಾರ ಸಿಕ್ಕಿದೆ. ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ  ಫೆ.  19ಕ್ಕೆ ರಿಲೀಸ್ ಆಗಲಿದೆ.

ನಟ ಧ್ರುವ ಸರ್ಜಾ ಅವರೇ ಲೈವ್ ಬಂದಿ ಅಭಿಮಾನಿಗಳ ಜತೆ ವಿಚಾರ ಹಂಚಿಕೊಂಡಿದ್ದಾರೆ. ದಿನಾಂಕ ಘೋಷಣೆ ಮಾಡಿದ್ದಾರೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ವೀಕ್ಷಣೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಪೊಗರು ಸಿನಿಮಾದ ಹೈಲೈಟ್ಸ್ ಯಾವುದು?

ಕೊರೋನಾ ಭಯ ದೂರವಾಗುತ್ತಿರುವ ಕಾರಣ ಚಿತ್ರಮಂದಿರದಲ್ಲಿಯೇ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಮಾಸ್ ಸಿನಿಮಾದ ಜತೆ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿ ಮುಖ್ಯ ಪಾತ್ರಧಾರಿ ಎಂದು ಧ್ರುವ  ಹೇಳಿದ್ದಾರೆ.

ಪೊಗರು ಸಿನಿಮಾದ ಹಾಡು ಈಗಾಗಲೇ ಸಖತ್ ಹಿಟ್ ಆಗಿದೆ. ಡ್ಯಾನ್ಸ್ ಕೂಡ ಮೋಡಿ ಮಾಡಿದ್ದು ವಿಶೆಷವಾಗಿ ಮಕ್ಕಳನ್ನು ಸೆಳೆದಿದೆ.