ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹವಾ/ ಪ್ರೊಫೈಲ್ ಪಿಕ್ಚರ್ ಬದಲಾಯಿಸಿದ ದಾಸ/ ಅಭಿಮಾನಿಗಳಿಂದ ಭರಪೂರ ಪ್ರತಿಕ್ರಿಯೆ/ ಒಡೆಯನ ಲುಕ್ ಸೃಷ್ಟಿಸಿದ ಹವಾ

ಬೆಂಗಳೂರು[ಸೆ. 20] ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುಂದಿನ ಚಿತ್ರ ಒಡೆಯದ ಲುಕ್ ನಲ್ಲಿ ದರ್ಶನ್ ಶೇರ್ ಮಾಡಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ.

Add Asianetnews Kannada as a Preferred SourcegooglePreferred

ಫೇಸ್ ಬುಕ್ ಮತ್ತು ಟ್ವಿಟರ್ ಎರಡರಲ್ಲಿಯೂ ದರ್ಶನ್ ತಮ್ಮ ಪ್ರೊಫೈಲ್ ಪಿಕ್ಚರ್ ಬದಲು ಮಾಡಿದ್ದಾರೆ. ಅಭಿಮಾನಿಗಳು ಕೆಲವೇ ಕ್ಷಣಗಳಲ್ಲಿ ಶೇರ್ ಮಾಡಿಕೊಂಡಿದ್ದು ದಾಖಲೆ ಬರೆದಿದ್ದಾರೆ.

ಎಂಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ದರ್ಶನ್ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೀಪ್ ಮೇಲೆ ಕುಳಿತು ತೆಗೆಸಿರುವ ಫೋಟೋ ಸೋಶಿಯಲ್ ಮೀಡಿಯಾದ ಬ್ರ್ಯಾಂಡ್ ಆಗಿ ಬದಲಾಗುತ್ತಿದೆ.