ಮಿಸ್ಟರ್ ಇಂಡಿಯಾ, ಬಾಡಿ ಬಿಲ್ಡರ್ ರವಿ ಈ ವರ್ಷ ಮದರ್ ತೆರೇಸಾ ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಕನ್ನಡ ಚಿತ್ರರಂಗದ ಕಲಾವಿದ, ಬಾಡಿ ಬಿಲ್ಡರ್ ಹಾಗೂ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಎವಿ ರವಿ ಅವರು ಈ ವರ್ಷದ ಮೆದರ್ ತೆರೇಸಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಜಿಮ್‌ ತೆರೆಯಲು ಪ್ರಧಾನಿಗೆ ಪತ್ರ ಬರೆದ ಬಾಡಿ ಬಿಲ್ಡರ್ ರವಿ!

ಬಾಲಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಸಾಕ್ಷಷ್ಟು ಹೆಸರು ಮಾಡಿರುವ ಜಿಮ್ ರವಿ ಜಿಮ್ ಮಾಲೀಕರ ಸಂಘದ ಅಧ್ಯಕ್ಷರು ಕೂಡ ಹೌದು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಸಂಘದಲ್ಲಿ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ನ್ಯಾಷನಲ್ ಕ್ರಿಸ್‌ ಕೌನ್ಸಿಲ್‌ಆಫ್‌ ಇಂಡಿಯಾ ಮತ್ತು ದಿ ನ್ಯೂಸ್ ಪೇಪರ್ಸ್‌ ಅಸೋಸಿಯೇಷನ್‌ ಆಫ್‌ ಕರ್ನಾಟಕ ಜಂಟಿಯಾಗಿ ಪ್ರಶಸ್ತಿ ನೀಡಿವೆ.

ಈ ಹಿಂದೆ ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ, ಮಿಸ್ಟರ್ ಇಂಡಿಯಾ ಪ್ರಶಸ್ತಿ, ಭಾರತ ಶ್ರೀ ಪ್ರಶಸ್ತಿ, ಭಾರತ ಶ್ರೇಷ್ಠ ಪ್ರಶಸ್ತಿ, ಕರ್ನಾಟಕ ಶ್ರೀ, ಕರ್ನಾಕಟ ಶ್ರೇಷ್ಟ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ರವಿ ಭಾಜನರಾಗಿದ್ದಾರೆ. ಸಮಾರಂಭದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ಆಪ್ತ ಕಲಾ ಬಂಧುಗಳಿಂದ ಶುಭಾಶಯಗಳು ಹರಿದು ಬರುತ್ತಿದೆ.

ಬಿಗ್ ಬಾಸ್ ರವಿಗೆ ಸಿಕ್ಕ ವರದಕ್ಷಣೆ ಎಷ್ಟು ವಿಭಿನ್ನ ನೋಡಿ! 

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಜಿಮ್ ಮಾಲೀಕರು ದೊಡ್ಡ ಪ್ರಮಾಣದಲ್ಲಿ ನಷ್ಟ ಎದುರಿಸಿದ್ದಾರೆ. ಅವರ ಪರ ನಿಂತು ಸರ್ಕಾರದಿಂದ ನೆರವು ಕೊಡಿಸಲು ಹಾಗೂ ಮತ್ತೆ ಸುರಕ್ಷಿತ ಕ್ರಮಗಳಿಂದ ಜಿಮ್ ತೆರೆಯಲು ಅನುಮತಿ ಪಡೆಯುವುದರಲ್ಲಿ ರವಿ ಅವರ ಶ್ರಮ ಅಪಾರ.