ಇಷ್ಟು ದಿನಗಳ ಕಾಲ ಬಿಗ್ ಬಾಸ್‌ ಸ್ಪರ್ಧಿ, ಗಾನ ಕೋಗಿಲೆ ಶ್ರುತಿ ಪ್ರಕಾಶ್ ಎಲ್ಲಿ ಮಿಸ್‌ ಆಗೋದ್ರು ಅಂತ ಪ್ರಶ್ನೆ ಮಾಡುತ್ತಿದ್ದ ನೆಟ್ಟಿಗರು, ಈಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿರುವ ಹೊಸ ಲುಕ್‌ ಫೋಟೋ ನೋಡಿ ಶಾಕ್ ಆಗಿದ್ದಾರೆ. ಡಿಫರೆಂಟ್‌ ಸ್ಟೈಲ್‌ನಲ್ಲಿ ಮಿಂಚುವ ಶ್ರುತಿಗೆ ನೆಟ್ಟಿಗರು ಕೇಳುತ್ತಿದ್ದಾರೆ ಈ ಪ್ರಶ್ನೆ...

ಎಲ್ಲೋದ್ರು ಬಿಗ್ ಬಾಸ್‌ ಶ್ರುತಿ ಪ್ರಕಾಶ್? ಈ ಫೋಟೋ ವೈರಲ್! 

ಪಿಂಕ್ ಹಾಗೂ ಹಳದಿ ಬಣ್ಣವಿರುವ ಬಾಂದಿನಿ ಸೀರೆ ತೊಟ್ಟ ಶ್ರುತಿ ಪ್ರಕಾಶ್‌ ಸೀರೆ ಮೇಲೋಂದು ಶರ್ಟ್‌ ಹಾಕಿಕೊಂಡಿದ್ದಾರೆ.  ಈ ಫೋಟೋವನ್ನು ಸ್ವತಃ ಶ್ರುತಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಎಲ್ಲೆಡೆ ವೈರಲ್ ಆಗುತ್ತಿರುವ ಈ ಪೋಟೋವನ್ನು ಟ್ರೋಲ್‌ ಪೇಜ್‌ವೊಂದರಲ್ಲಿ ಏನ್ ಹೇಳಿದ್ದಾರೆ ನೋಡಿ....

'ಹಳ್ಳಿ ಕಡೆ ಎಲ್ಲಾ ಕೆಲಸ ಮಾಡೋಕೆ ಮತ್ತೆ ಮನೆ ಕಟ್ಟೋ ಕೆಲಸ ಮಾಡೋರೂ ಈ ರೀತಿ ಸೀರೆ ಮೇಲೆ ಶರ್ಟ್‌ ಹಾಕೊಳ್ತಿದ್ದ್ರು. ಈಗ ಇದೇ ಟ್ರೆಂಡ್‌' ಎಂದು ಬರೆದಿದ್ದಾರೆ. ಕೆಲವರಿಗೆ ಇದನ್ನ ನೋಡಿದರೆ ಹೌದು ಎಂದು ಅನಿಸುತ್ತದೆ. ಕೆಲವೊಂದು ಬಿಲ್ಡರ್‌ಗಳು ಮಾತ್ರ ಕಾರ್ಮಿಕರಿಗೆ ಮಾರ್ಗ ಸೂಚನೆ ನೀಡಿರುತ್ತಾರೆ ಆದರೆ ಬಹುತೇಕ ಹೆಂಗಸರು ಕೆಲಸ ಮಾಡುವಾಗ ಹೀಗೆ ಸೀರೆ ಮೇಲೆ ಶರ್ಟ್ ಧರಿಸುತ್ತಾರೆ. ಮಲೆನಾಡಲ್ಲಂತೂ ಈ ರೀತಿ ಸಾಮಾನ್ಯವಾಗಿ ಎಲ್ಲ ಕೂಲಿ ಕೆಲಸ ಮಾಡೋರೂ ತೊಟ್ಟಿರುತ್ತಾರೆ.

ನಾನು ಏನನ್ನೂ ಪ್ಲ್ಯಾನ್ ಮಾಡುವುದಿಲ್ಲ: ಭೂಮಿ ಶೆಟ್ಟಿ

ಇಷ್ಟು ದಿನ ನಮ್ಮ ಕರ್ನಾಟಕ ಕ್ರಶ್‌ ಸಂಪ್ರದಾಯಿಕ ಉಡುಗೆಗೆ ಫಿದಾ ಆಗಿದ್ದ ಜನರು ಈ ಲುಕ್‌ ನೋಡಿ ಬೇಡ ಮೇಡಂ ನಾವು ಮಾತ್ರ ಹೀಗೆ ಹಾಕೋಳಲ್ಲ ಎಂದಿದ್ದಾರೆ.