2020ರಲ್ಲಿ ಸಹಿಸಿಕೊಂಡ ಕಹಿ ನೋವನ್ನು ಮರೆಯಲೇ ಬೇಕು. ಜನರಿಗೆ ಮನೋರಂಜನೆ ನೀಡಬೇಕೆಂದು 2021 ಅನ್ನು ಕನ್ನಡ ಚಿತ್ರರಂಗ ವಿಭಿನ್ನವಾಗಿ ಆರಂಭಿಸಿದೆ. ಹೊಸ ವರ್ಷ ಆಗಮಿಸುತ್ತಿದ್ದಂತೆ ಗಾಂಧಿ ನಗರದಲ್ಲಿ ಸಿನಿಮಾ ರಿಲೀಸ್‌ ಬಗ್ಗೆ ದೊಡ್ಡ ಚರ್ಚೆ ಹುಟ್ಟು ಹಾಕಿತ್ತು. ಫೆಬ್ರವರಿ, ಮಾರ್ಚ್‌, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸ್ಟಾರ್ ಸಿನಿಮಾಗಳಿಗೆ ದಿನಾಂಕ ಫಿಕ್ಸ್ ಆಗಿವೆ. ಇವೆಲ್ಲಾ ಓಕೆ ಫೆಬ್ರವರಿ 5 ಏನಿದೆ ಸ್ಪೆಷಲ್? 

ತೆರೆಗೆ ಅಪ್ಪಳಿಸಲಿರುವ 'ಶ್ಯಾಡೋ' ಮತ್ತು 'ರಾಮಾರ್ಜುನ';500 ಥಿಯೇಟರ್‌ಗಳಲ್ಲಿ 'ಇನ್ಸ್‌ಪೆಕ್ಟರ್‌ ವಿಕ್ರಂ' 

ಹೌದು! ಪ್ರಜ್ವಲ್ ದೇವರಾಜ್‌ ಅಭಿನಯದ 'ಇನ್ಸ್‌ಪೆಕ್ಟರ್ ವಿಕ್ರಂ' ಹಾಗೂ ಬಿಗ್‌ಬಾಸ್ ಚಂದನ್ ಆಚಾರ್ ಅಭಿನಯದ  'ಮಂಗಳವಾರ ರಜಾದಿನ' ಚಿತ್ರಗಳು ಬಿಡುಗಡೆಯಾಗುತ್ತಿವೆ. ಅರೇ ಇದಕ್ಕೂ ಡಿ ಬಾಸ್‌ ಹಾಗೂ ಕಿಚ್ಚಗೆ ಏನು ಸಂಬಂಧ ಅಂತ ಗೊಂದಲಕ್ಕೆ ಒಳಗಾಗಬೇಡಿ. 

ಪ್ರಜ್ವಲ್ 'ಇನ್ಸ್‌ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ 'ಮಂಗಳವಾರ ರಜಾದಿನ' ಚಿತ್ರದಲ್ಲಿ ನಟ ಚಂದನ್‌ ಸುದೀಪ್‌ಗೆ ಒಮ್ಮೆಯಾದರೂ ಕೇಶ ವಿನ್ಯಾಸ ಮಾಡಬೇಕೆಂಬ ಕನಸು ಕಾಣುತ್ತಾರೆ. ಚಿತ್ರದ ಕೊನೆಯ ಹಂತದಲ್ಲಿ ಸುದೀಪ್ ಸರ್ಪ್ರೈಸ್‌ ವಿಸಿಟ್ ಕೊಡಲಿದ್ದಾರೋ ಇಲ್ವವೋ ಎಂದು ಕಾದು ನೋಡಬೇಕಿದೆ.  ಬಹಳ ವರ್ಷಗಳ ನಂತರ ದಚ್ಚು ಹಾಗೂ ಕಿಚ್ಚ ಭಾಗವಾಗಿ ಅಭಿನಯಿಸಿರುವ ಚಿತ್ರಗಳು ತೆರೆ ಕಾಣುತ್ತಿರುವುದು ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಅಲ್ಲವೇ?