2005ರಲ್ಲಿ ಬೆಳ​ಗಾವಿ ಜಿಲ್ಲೆಯ ಬೊಂಬಾ​ರಗ ಎನ್ನುವ ಹಳ್ಳಿ​ಯ​ಲ್ಲಿ ನಡೆದ ಈ ಪ್ರೇಮ ಕತೆ​ಯನ್ನು ಈಗ ತೆರೆ ಮೇಲೆ ತರು​ತ್ತಿ​ದ್ದಾರೆ ಮುತ್ತು​ರಾಜ್‌ ರೆಡ್ಡಿ. ಚಿತ್ರದ ಹೆಸರು ‘ಮಾಂಜ್ರಾ’.

ಈ ನೈಜ ಕತೆ​ಗೆ ಸಂಬಂಧಿ​ಸಿದ ಶಂಕರ್‌ ಅವ​ರನ್ನು ಚಿತ್ರದ ಪತ್ರಿ​ಕಾ​ಗೋ​ಷ್ಟಿಗೆ ಕರೆ​ತಂದು ಚಿತ್ರ​ತಂಡ ಪರಿ​ಚ​ಯಿ​ಸಿತು. ವೇದಿಕೆ ಮೇಲೆ ಕೂರಿ​ಸಿ​ದರೂ ಫೋಸ್ಟ​ರ್‌​ನಲ್ಲಿ ನೋಡು​ತ್ತಲೇ ಇದ್ದ ಶಂಕ​ರ್‌ಗೆ ಏನು ನೆನ​ಪಾ​ಯಿತೋ ಗೊತ್ತಿಲ್ಲ, ವೇದಿಕೆ ಮೇಲಿಂದ ದಿಢೀರ್‌ ಎಂದು ಇಳಿದು ಹೋದರು.

ಈ ವಾರವೂ 11 ಸಿನಿಮಾ ರಿಲೀಸ್‌;ಬಿಡುಗಡೆಯ ಅತಿವೃಷ್ಟಿಯಲ್ಲಿ ಒಳ್ಳೆಯ ಸಿನಿಮಾಗಳು ಕಾಣೆ!

ಹುಡುಗಿ ಕೆಳ ಜಾತಿಗೆ ಸೇರಿ​ದಾಕೆ. ಹುಡುಗ ಮೇಲ್ಜಾ​ತಿ​ಯ​ವನು. ಇವರ ಪ್ರೀತಿಗೆ ಜಾತಿ ಅಡ್ಡ ಬಂದು ಹುಡು​ಗನ ಕಡೆ​ಯ​ವರೇ ಹುಡು​ಗಿ​ಯನ್ನು ಏನೋ ಮಾಡಿ​ದ್ದಾರೆ ಎಂಬು​ದು ಸದ್ಯಕ್ಕೆ ಆ ಊರಿ​ನಲ್ಲಿ ಇರುವ ಅನು​ಮಾನ. ಮೇಲ್ಜಾತಿ ಹುಡು​ಗ​ನನ್ನು ಪ್ರೀತಿ​ಸಿದ ಹುಡುಗಿ ಕೊಲೆಯೋ, ಆತ್ಮ​ಹ​ತ್ಯೆಯೋ ತಿಳಿ​ಯದು. ಆಕೆ ತೀರಿ​ಕೊಂಡಿ​ದ್ದಾಳೆ.

ನಿಖಿಲ್ ರೇವತಿಗೆ ಹಾಕಿರುವ ಉಂಗುರದ ಬೆಲೆ ಇಷ್ಟೊಂದಾ?

ಈಗಲೂ ಅದೇ ಹಳ್ಳಿ​ಯಲ್ಲಿ ಮೂಲ ಕತೆಯ ನಾಯ​ಕಿಯ ಹೆತ್ತ​ವರು ವಾಸಿ​ಸು​ತ್ತಿದ್ದಾರೆ. ಅದೇ ಮನೆ​ಯಲ್ಲಿ ಚಿತ್ರೀ​ಕ​ರಣ ಮಾಡಿ​ದ್ದಾರೆ. ಜತೆಗೆ ಚಿತ್ರ​ದಲ್ಲಿ ಶಂಕರ್‌ ಅವ​ರನ್ನೂ ತೋರಿ​ಸಿ​ದ್ದಾರೆ. ಹೀಗೆ ಜಾತಿ ವಿಚಾ​ರಕ್ಕೆ ನಿಗೂ​ಢ​ವಾಗಿ ಸಾವು ಕಂಡ ಹುಡುಗಿ, ಮಾನ​ಸಿಕ ಅಸ್ವ​ಸ್ಥ​ನಾದ ಶಂಕರ್‌ ಕತೆ ಬಹು​ತೇ​ಕ​ರಿಗೆ ಗೊತ್ತಿಲ್ಲ. ಈ ಅನ್‌ ಟೋಲ್ಡ್‌ ಪ್ರೇಮ ಕತೆ​ಯನ್ನು ತೆರೆ ಮೇಲೆ ತರು​ತ್ತಿ​ದ್ದಾರೆ. ಈ ರಿಯಲ್‌ ಕತೆಗೆ ರಂಜಿತ್‌ ಸಿಂಗ್‌ ಹಾಗೂ ಅಪೂರ್ವ ಜೋಡಿ​ಯಾ​ಗಿ​ದ್ದಾರೆ. ಚಿತ್ರೀ​ಕ​ರಣ ಮುಗಿದ್ದು, ಆಡಿಯೋ ಬಿಡು​ಗಡೆ ಮಾಡಿ​ಕೊಂಡಿ​ರುವ ಈ ನೈಜ ಕತೆಯ ‘ಮಾಂಜ್ರಾ’ ಸಿನಿಮಾ ಸದ್ಯ​ದಲ್ಲೇ ತೆರೆ ಮೇಲೆ ಬರ​ಲಿದೆ.

"