ಶಿವಗಣೇಶ್‌ ನಿರ್ದೇಶನದ, ಆರ್ಯನ್‌ ಸಂತೋಷ್‌ ಹಾಗೂ ಅರ್ಚನಾ ನಟನೆಯ ಡಿಯರ್ ಸತ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. 

ಶಿವಗಣೇಶ್‌ ನಿರ್ದೇಶನದ, ಆರ್ಯನ್‌ ಸಂತೋಷ್‌ ನಾಯಕನಾಗಿರುವ ‘ಡಿಯರ್‌ ಸತ್ಯ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಈ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಚಿತ್ರದಲ್ಲಿ ನಾಯಕ ಫುಡ್‌ ಡೆಲಿವರಿ ಬಾಯ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಚಿತ್ರವನ್ನು ಫುಡ್‌ ಡೆಲಿವರಿ ಬಾಯ್‌್ಸಗೆ ಅರ್ಪಿಸಲಾಗಿದೆ.

‘ಈ ‘ಡಿಯರ್‌ ಸತ್ಯ’ ಚಿತ್ರದ ಕತೆ ಹಿಡಿದು ಸಾಕಷ್ಟುಜನರನ್ನು ಸಂಪರ್ಕಿಸಿದೆ. ಸಿನಿಮಾ ಮಾಡಲು ಯಾರು ಮುಂದೆ ಬರಲಿಲ್ಲ. ದೇವರ ಹಾಗೆ ಗಣೇಶ್‌ ಪಾಪಣ್ಣ, ಯತೀಶ್‌ ವೆಂಕಟೇಶ್‌ ಈ ಚಿತ್ರದ ನಿರ್ಮಾಣಕ್ಕೆ ಮುಂದಾದರು. ಎಲ್ಲಾ ತಂತ್ರಜ್ಞರ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ’ ಎಂದರು ಆರ್ಯನ್‌ ಸಂತೋಷ್‌.

'ಡಿಯರ್ ಸತ್ಯ' ಚಿತ್ರದ ನಟಿ ಅರ್ಚನಾ ಕೊಟ್ಟಿಗೆ ಜೊತೆ ಮಾತುಕತೆ!

‘ಇದೊಂದು ಮಾಸ್‌ ಪ್ರೇಮ ಕತೆಯ ಸಿನಿಮಾ’ ಎಂದರು ಶಿವಗಣೇಶ್‌. ಚಿತ್ರದ ನಾಯಕಿ ಅರ್ಚನಾ ಕೊಟ್ಟಿಗೆ, ಬಾಲು, ಕಾರ್ತಿಕ್‌ ಸುಬ್ರಹ್ಮಣ್ಯ, ನಿರ್ಮಾಪಕ ಗಣೇಶ್‌ ಪಾಪಣ್ಣ ಇದ್ದರು. ಪ್ರಮುಖರಾದ ಭಾ.ಮಾ.ಹರೀಶ್‌, ಭಾ.ಮಾ.ಗಿರೀಶ್‌ ಹಾಗೂ ಕರಿಸುಬ್ಬು ಚಿತ್ರತಂಡಕ್ಕೆ ಶುಭ ಕೋರಿದರು.

YouTube video player