ಬಹಭಾಷಾ ನಟಿ ಪ್ರಣಿತಾ ಸುಭಾಷ್ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ ನಿನ್ನೆ ನಡೆದ ಘಟನೆಗಳನ್ನು ನಾನು ಖಂಡಿಸುತ್ತೇನೆ. ಪೊಲೀಸ್ ಸ್ಟೇಷನ್ ಹಾಗೂ ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡನಾರ್ಹ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಘಟನೆ ಖಂಡಿಸಿ ಬಹುಭಾಷಾ ನಟಿ ಮಾಡಿರುವ ಟ್ವೀಟ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಪ್ರಣೀತಾ ಕನ್ನಡದಲ್ಲಿಯೇ ಟ್ವೀಟ್ ಮಾಡಿರುವುದು ಮೆಚ್ಚುಗೆಗೆ  ಪಾತ್ರವಾಗಿದೆ.

ಬೆಂಗಳೂರು ಗಲಭೆಗೆ ನಾನಾ ಬಣ್ಣ, ನಿಲ್ಲದ ರಾಜಕೀಯ ಕೆಸರೆರಚಾಟ

ನಿಮ್ಮ ಸಾಮಾಜಿಕ ಕಳಕಳಿಗೆ  ಅಭಿನಂದನೆಗಳು ಮೇಡಂ ಮತ್ತು ಬೆಂಗಳೂರು ಮತ್ತು ಡಿಜೆ ಹಳ್ಳಿ ಇವ ನಮ್ಮ ಕರ್ನಾಟಕ ಪ್ರಾಂತ್ಯಗಳು ನನ್ನ ಕೋರಿಕೆ ಏನೆಂದರೆ ನಿಮ್ಮ ಅಭಿಪ್ರಾಯವನ್ನು ಕನ್ನಡದಲ್ಲಿ ವ್ಯಕ್ತಪಡಿಸಿದ್ದಾರೆ ತುಂಬಾ ಜನಕ್ಕೆ ಅರಿವಾಗುತ್ತದೆ ಮತ್ತು ಅನುಕೂಲ ಎನ್ನುವುದು ನನ್ನ ಅನಿಸಿಕೆ ಎಂದು ಯೆಂಕು ಯಾದ್‌ಗಿರಿ ಎಂಬವರು ಪ್ರತಿಕ್ರಿಯಿಸಿದ್ದಾರೆ.

ಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ರಾಜಧಾನಿಯ ಕಾವಲ್ ಬೈರಸಂದ್ರದಲ್ಲಿ ಮಂಗಳವಾರ ರಾತ್ರಿ ವ್ಯಾಪಕ ಹಿಂಸಾಚಾರ ನಡೆದಿತ್ತು. 

'ಪೊಲೀಸ್ ಠಾಣೆಗೆ ಕಲ್ಲು ಹೊಡೆಯಿರಿ ಎಂದು ಇಸ್ಲಾಂ ಧರ್ಮ ಹೇಳಿಲ್ಲ'

ಇದೊಂದು ಪೂರ್ವ ನಿಯೋಜಿತ ಕೃತ್ಯವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ದಾಂಧಲೆ ಹಿಂದೆ ಯಾರ ಕೈವಾಡವಿದ್ದರೂ ಅವರ ವಿರುದ್ಧ ಕಾನೂನಾತ್ಮಕ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.