ಬೆಂಗಳೂರು (ಮಾ. 24): ಮಾಸ್ ಲೀಡರ್ ಚಿತ್ರದ ನಂತರ ಪ್ರಣಿತಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಎಲ್ಲಿ ಹೋದರು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಇದೀಗ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ಅದು ಶಾಲೆಯೊಂದರಲ್ಲಿ. ಅರೇ! ಇದೇನಿದು! ಸಿನಿಮಾ ಬಿಟ್ಟು ಶಾಲೆ ಸೇರಿದ್ರಾ ಎಂದು ಹುಬ್ಬೇರಿಸಬೇಡಿ. ಪ್ರಣಿತಾ ಒಂದೊಳ್ಳೆ ಉದ್ದೇಶಕ್ಕಾಗಿ ಶಾಲೆ ಮೆಟ್ಟಿಲೇರಿದ್ದಾರೆ.

ಪ್ರಣಿತಾ ಹಾಸನ ಜಿಲ್ಲೆಯ ಒಂದು ಹಳ್ಳಿಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದರು. ಹೋಳಿ ಹಬ್ಬವನ್ನು ಆ ಶಾಲೆಯ ಮಕ್ಕಳೊಂದಿಗೆ ಕಳೆದಿದ್ದಾರೆ. ಗೋಡೆಗಳ ಮೇಲೆ ವಿವಿಧ ಬಣ್ಣಗಳಿಂದ ಪೇಯಿಂಟ್ ಮಾಡಿದ್ದಾರೆ.  ಪ್ರಣಿತಾರ ಕೆಲಸಕ್ಕೆ ಎನ್ ಜಿಒ ಸಾಥ್ ನೀಡಿದೆ. 

ನಾಮಕಾವಸ್ತೆಗೆ ಪ್ರಣಿತಾ ಶಾಲೆಯನ್ನು ದತ್ತುಪಡೆದಿಲ್ಲ. ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ಕುಡಿಯುವ ನೀರು, ಸ್ವಚ್ಛತೆ, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿದ್ದಾರೆ.