ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿ ವರ್ಷವುರುಳಿದೆ. ಚಿರುವಿನ ನಗು, ಚಿರು ಸಿನಿಮಾ...ಚಿರುವನ್ನು ಮಿಸ್ ಮಾಡಿಕೊಳ್ಳುವವರು ಸಾಕಷ್ಟು ಮಂದಿ ಇದ್ದಾರೆ. ಜೂನಿಯರ್ ಚಿರು ಜೊತೆ ಬ್ಯುಸಿಯಾಗಿರುವ ಮೇಘನಾ ರಾಜ್‌ ಚಿರು ಬಗ್ಗೆ ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಜೂ. ಚಿರುಗೆ 7ನೇ ತಿಂಗಳು: ಫ್ಯಾನ್ಸ್ ಸೃಷ್ಟಿಸಿದ ಫೋಟೋ ವೈರಲ್! 

ಮೇಘನಾ ಮಾತು:
'ಜೂನ್ 6, 2020ರಂದು ನಾನು ಬೇಗ ನಿದ್ರೆ ಮಾಡಿದ್ದೆ. ಚಿರು ಎದ್ದಿದ್ದರು. ರಾತ್ರಿ ಒಂದು ಕ್ಷಣ ನಾನು ಎದ್ದು ಚಿರು ನೋಡಿದೆ. ಅವರು ನನ್ನನ್ನೇ ನೋಡುತ್ತಿದ್ದರು. ಯಾಕೆ ಅಂತ ನಾನು ಕೇಳಿದೆ. ಅವರು 'Nothing' ಅಂತ ಹೇಳಿದ್ದರು. ಅವರ ಮುಖದಲ್ಲಿದ್ದ ನಗುವನ್ನು ನಾನು ಪ್ರತಿದಿನವೂ  ನೆನಪಿಸಿಕೊಳ್ಳುವೆ. ನನ್ನ ಪುತ್ರನಿಗೆ 7 ತಿಂಗಳು ತುಂಬಿವೆ. ಮೊದಲ ಬಾರಿ ತಂದೆ ಸ್ಮಾರಕದ ಬಳಿ ಕರೆದುಕೊಂಡು ಹೋಗುತ್ತಿರುವೆ. ನೋಡು ಹಾಗೂ ತುಂಟಾಟ ಮಾಡುವುದರಲ್ಲಿ ಸೇಮ್ ಚಿರಂಜೀವಿ ರೀತಿಯೇ. ತಂದೆ ಎಂನ್ನುವುದಕ್ಕೆ ಸಂತೋಷವಿದೆ. ಅದರಲ್ಲೂ ಜೀವಕ್ಕೆ ಜೀವ ಕೊಟ್ಟು ನಿಲ್ಲುವ ಸ್ನೇಹಿತರು ಸಿಕ್ಕಿದ್ದಾರೆ,' ಎಂದು ಮೇಘನಾ ರಾಜ್‌ ಮಾತನಾಡಿದ್ದಾರೆ.

'ಚಿರು ಬಗ್ಗೆ ತುಂಬಾ ಜನ ನನ್ನ ಜೊತೆ ಮಾತನಾಡುತ್ತಾರೆ. ಸ್ನೇಹಿತರು ಹಾಗೂ ಕುಟುಂಬದವರು ಕೂಡ. ಆದರೆ ಮಾತನಾಡುವಾಗ ಅವರು ಅಳುವುದು ನನಗೆ ಇಷ್ಟ ಆಗುವುದಿಲ್ಲ. ಮನಸ್ಸಿನಲ್ಲಿ ನೋವಿದೆ. ಆದರೆ ಚಿರು ಬಗ್ಗೆ ಮಾತನಾಡುವಾಗ ಒಳ್ಳೆಯ ವಿಚಾರಗಳನ್ನು ಮಾತ್ರ ಹಂಚಿಕೊಳ್ಳವುದಕ್ಕೆ ಇಷ್ಟ ಪಡುವೆ. ಚಿರು ಜೊತೆ ಯಾರ ಬಳಿಯೂ ಬೇಸರದ ಸಂಗತಿಗಳಿಲ್ಲ. ಯಾರನ್ನೂ ಬೇಜಾರಿನಿಂದ ನೋಡಿಲ್ಲ. ಬಹುಶಃ ಚಿರು ಅತ್ತಿರುವುದು ನನ್ನ ಬಳಿ ಮಾತ್ರ ಅನಿಸುತ್ತದೆ. ಸದಾ ನಗ್ ನಗ್ತಾ ಇದ್ದ ವ್ಯಕ್ತಿ. ಚಿರುಗೆ ಪ್ರೆಷರ್ ಹಾಕಿದರೆ ಇಷ್ಟವಾಗುತ್ತಿಲಿಲ್ಲ, ಸದಾ ತನ್ನ ಮನಸ್ಸಿನ ಮಾತುಗಳನ್ನು ಕೇಳಿಯೇ ಮುನ್ನಡೆಯುತ್ತಿದ್ದರು. ಲೈಫ್‌ನ ಕಿಂಗ್ ಸೈಜ್‌ನಲ್ಲಿ ನಡೆಸುತ್ತಿದ್ದರು, ಯಾರನ್ನೋ ಮೆಚ್ಚಿಸುವುದಕ್ಕೆ ತನ್ನ ಸ್ಟ್ಯಾಂಡರ್ಡ್ ಕಡಿಮೆ ಮಾಡಿಕೊಳ್ಳುತ್ತಿರಲಿಲ್ಲ,' ಎಂದಿದ್ದಾರೆ ಮೇಘನಾ.