ಸ್ಯಾಂಡಲ್‌ವುಡ್‌‌ನ ಗಿಣಿ ಮುಖದ ಚೆಲುವೆ ನಟಿ ಮೇಘನಾ ಗಾಂವ್ಕರ್ ಲಾಕ್‌ಡೌನ್‌ನಲ್ಲಿ AMA (Ask Me Anything) ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳ ಜೊತೆ ಮಾತನಾಡಿದ್ದರು. ಅಭಿಮಾನಿಗಳು ಕೇಳಿದ ಕೆಲವೊಂದು ತಮಾಷೆ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 

ಅಭಿಮಾನಿಗಳ ಪ್ರಶ್ನೆ: 

- 'ನಿಮ್ಮ ನೆಚ್ಚಿನ ನಟ ಯಾರು'
 ಸುದೀಪ್, ಯಶ್, ದರ್ಶನ್, ಶಿವಣ್ಣ, ಶಂಕರ್ ನಾಗ್ ಸರ್ , ವಿಷ್ಣು ಸರ್ ಇನ್ನೂ ತುಂಬಾ ಜನರಿದ್ದಾರೆ.

ನಟಿ ಮೇಘನಾಗೆ ಏರ್‌ಪೋರ್ಟ್‌ ಸಿಬ್ಬಂದಿ ಕಿರುಕಳ ; 'ಹಣ, ಸಮಯ ಹಾಗೂ ಎನರ್ಜಿ ವೇಸ್ಟ್‌'!

- ನಿಮ್ಮ ಫೇವರೆಟ್ ಲುಕ್ ಯಾವುದು?
ನನಗೆ ಇಳಕಳ್ ಸೀರಿ ಲುಕ್ ತುಂಬಾನೇ ಇಷ್ಟ.

- ನೀವು ಸೊಂಬೇರಿ ಆದಾಗ ಮಾಡುವ ಕೆಲಸ ಯಾವುದು?
ಮಲಗುವೆ. ಇಷ್ಟದ ಆಹಾರ ತಿನ್ನುವೆ ಹಾಗೂ ಸಖತ್ ಕಾಮಿಡಿ ವಿಡಿಯೋಗಳನ್ನು ನೋಡುವೆ.

- ಕರ್ನಾಟಕದಲ್ಲಿ ನಿಮಗೆ ಇಷ್ಟವಾದ ಜಾಗ?
ಬೆಂಗಳೂರು .

- ನೆಕ್ಸ್ಟ್ ಸೋಲೋ ಟ್ರಿಪ್ ಯಾವಾಗ?
ನಾನು ಮೊದಲು Istanbulಗೆ ಹೋಗಬೇಕು. ಮುಂದಿನ ವರ್ಷ ಹೋಗುವೆ. 

ಅಭಿಮಾನಿಗಳ ಜೊತೆ ಮಾತನಾಡುತ್ತ ಸಮಯ ಕಳೆದ ಮೇಘನಾ ಲಾಕ್‌ಡೌನ್‌ ಸಡಿಲಿಕೆ ನಂತರ ಕರ್ವ-3 ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.