ಸೋಷಲ್ ಮೀಡಿಯಾದಲ್ಲಿ ಇದೀಗ ಅಕ್ಕ-ತಂಗಿ ಬ್ಲೂಪರ್ಸ್ ಬಹಳ ಜನಪ್ರಿಯವಾಗುತ್ತಿದೆ. ಒಂದು ನಿಮಿಷಕ್ಕೂ ಕಡಿಮೆ ಅವಧಿಯ ಈ ಕಿರು ವೀಡಿಯೋಗಳಲ್ಲಿ ಅನೇಕ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಇದೀಗ ಕಿರುತೆರೆ ನಟಿಯರ ಸರದಿ.

ಮೇಘಾ ಶೆಟ್ಟಿ

‘ಜೊತೆ ಜೊತೆಯಲಿ’ ಸೀರಿಯಲ್ ನಟಿ ಮೇಘಾ ಶೆಟ್ಟಿ ತಂಗಿಯ ಜೊತೆಗೆ ಸಖತ್ ಬೋಲ್‌ಡ್ ಆಗಿ ಡಾನ್‌ಸ್ ಮಾಡಿದ್ದಾರೆ. ಈ ಹಿಂದೆ ‘ಕೇಳು ಶಿವ’ ಆಲ್ಬಂನಲ್ಲೂ ಬೋಲ್‌ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಮೇಘಾ ಈ ಬ್ಲೂಪರ್ಸ್‌ನಲ್ಲಿ ಮಾದಕವಾಗಿ ಸ್ಟೆಪ್ ಹಾಕಿದ್ದಾರೆ.

View post on Instagram

ಗೌತಮಿ ಜಾಧವ್

ಕಿರುತೆರೆಯ ನಂಬರ್ 1 ಸೀರಿಯಲ್ ‘ಸತ್ಯಾ’ದ ನಾಯಕಿ ಗೌತಮಿ ಜಾಧವ್ ಡ್ಯಾನ್‌ಸ್ನಲ್ಲಿ ಹಿಂದೆ ಬಿದ್ದಿಲ್ಲ. ‘ನಿನ್ನ ಗುಂಗಲ್ಲೇ.. ನನ್ನೇ ಮರೆತೆ ನಾ’ ಹಾಡಿಗೆ ಸ್ಟೆಪ್ ಹಾಕಿರೋ ವೀಡಿಯೋ ಹರಿಯಬಿಟ್ಟಿದ್ದಾರೆ. ಸೀರಿಯಲ್‌ನಲ್ಲಿ ರಗಡ್ ನಟನೆಗೆ ಹೆಸರಾದ ಗೌತಮಿ ಅವರ ಹೊಸ ಲುಕ್ ಗಮನಸೆಳೆದಿದೆ.

ಇನ್‌ಸ್ಟಾಗ್ರಾಮ್‌ ತುಂಬಾ ಅಕ್ಕ ತಂಗಿ ಸೆಲೆಬ್ರಿಟಿಗಳ ಡ್ಯಾನ್ಸ್ ವೈರಲ್ 

View post on Instagram

ಭವ್ಯಾ ಗೌಡ

‘ಗೀತಾ’ ಸೀರಿಯಲ್‌ನ ನಟಿ ಭವ್ಯಾ ಗೌಡ ಕೂಡ ಕನ್ನಡ ಹಾಡೊಂದಕ್ಕೆ ಕ್ಯೂಟ್ ಎಕ್‌ಸ್ಪ್ರೆಶನ್ ನೀಡಿ ಗಮನ ಸೆಳೆದಿದ್ದಾರೆ.

ಇನ್‌ಸ್ಟಾದ ಬ್ಲೂಫರ್ಸ್ ಟ್ರೆಂಡ್‌ಗೆ ನೀರೆರೆಯೋದ್ರಲ್ಲಿ ಸ್ಯಾಂಡಲ್‌ವುಡ್ ನಟಿಯರೂ ಹಿಂದೆ ಬಿದ್ದಿಲ್ಲ. ಕೆಲವು ದಿನಗಳ ಹಿಂದೆ ಶಾನ್ವಿ ಶ್ರೀವಾಸ್ತವ್ ತನ್ನ ತಂಗಿ ಜೊತೆಗೆ ತುಂಡುಡುಗೆಯಲ್ಲಿ ಬ್ಲೂಪರ್ಸ್ ಹರಿಯಬಿಟ್ಟಿದ್ದರು. ಸೋನು ಗೌಡ ಹಾಗೂ ನೇಹಾ ಗೌಡ ಸಹೋದರಿಯರು, ನಿರೂಪಕಿ ಚೈತ್ರಾ ವಾಸುದೇವ್ ಹಾಗೂ ಅವರ ತಂಗಿ ಚಂದನಾ ವಾಸುದೇವ್ ಮತ್ತಿತರರು ಬ್ಲೂಫರ್ಸ್ ಮೂಲಕ ಸದ್ದು ಮಾಡಿದ್ದ ಜಾಣೆಯರು.


View post on Instagram