ಬೆಂಗಳೂರು (ಮಾ. 18): ದರ್ಶನ್ ವೈಲ್ಡ್ ಲೈಫ್ ಫೋಟೋವೊಂದನ್ನು ಶ್ರೀಮುರಳಿ ಉಡುಗೊರೆಯಾಗಿ ಪಡೆದಿದ್ದಾರೆ. 

ಮದಗಜ ನಿರ್ಮಾಪಕ ಉಮಾಪತಿ ಶ್ರೀ ಮುರಳಿಗೆ ದರ್ಶನ್ ತೆಗೆದ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.  ಕೆಲದಿನಗಳ ಹಿಂದೆ ಮೈಸೂರಿನಲ್ಲಿ 3 ದಿನಗಳ ಕಾಲ ನಡೆದ ಎಕ್ಸಿಬಿಷನ್ ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಅದರಿಂದ ಬಂದ ಲಾಭವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸುವುದಾಗಿ ಹೇಳಿದ್ದರು.

ಈ ಫೋಟೋ ಬೆಲೆ 10 ಸಾವಿರವಾಗಿದ್ದು ಶ್ರೀಮುರಳಿಗೆ ಬಹಳ ಇಷ್ಟವಾಗಿದೆಯಂತೆ. ಶ್ರೀಮುರಳಿ ಸದ್ಯ ’ಭರಾಟೆ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ’ಮದಗಜ’ ಶೂಟಿಂಗ್ ಆರಂಭವಾಗಲಿದೆ.