ಕನ್ನಡ ಚಿತ್ರರಂಗದ ರೊಮ್ಯಾಂಟಿಕ್ ಹಾಗೂ ಇಂಟ್ರೆಸ್ಟಿಂಗ್‌ ಕಪಲ್‌ ಎಂದೇ ಗುರುತಿಸಿಕೊಂಡ ಜಗ್ಗೇಶ್‌ ಮತ್ತು ಪರಿಮಳಾ ಇಂದು 36ನೇ ವಿವಾಹ ವಾರ್ಷಿಕೋತ್ಸವವನ್ನೂ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ.

8 ವರ್ಷ ಹಿಂದೆ ಭೇಟಿಯಾದ ದೇವರ ಮಗನಿಗೆ ವೀಲ್‌ಚೇರ್‌ ನೀಡಿದ 'ನಾಯಕ'!

ಇಂದು ಜನತಾ ಕರ್ಫ್ಯೂ ಪ್ರಯುಕ್ತ ಮನೆಯಲ್ಲೇ  ಬಿಸಿ ಪಕೋಡ ಮಾಡಿಕೊಂಡು ಸಮಯ ಕಳೆದಿದ್ದಾರೆ. 'Ha ha ಇವತ್ತು ನನ್ನ ಚೀಟ್‌ ಸನ್ಯಾಕ್ಸ್‌. ತುಂಬಾ ದಿನಗಳ ನಂತರ ಜಗ್ಗಿ ಕೈಯ ರುಚಿ ಪಕೋಡ ಸವಿಯುತ್ತಿದ್ದೇನೆ. ನನ್ನ ಅತ್ತೆಗೆ ಜಗ್ಗೇಶ್‌ ಮಾಡುವ ಅಡುಗೆ ಅಂದ್ರೆ ತುಂಬಾ ಇಷ್ಟ' ಎಂದು ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಸಾಮಾನ್ಯವಾಗಿ ನಟ-ನಟಿಯರು ಧಾಂ ಧೂಂ ಅಂತ ಮದುವೆ ಆಗ್ತಾರೆ. ಆದ್ರೆ ಜಗ್ಗೇಶ್ ಮದುವೆ ಕಥೆಯೇ ವಿಭಿನ್ನ. ಚಿತ್ರಕಥೆಯಂತೆ ಇವರ ಲೈಫ್‌ನಲ್ಲೂ ಲವ್‌, ಫೈಟ್‌ ಪೊಲೀಸ್‌, ಕೋರ್ಟ್ ಕೇಸ್‌ ಎಲ್ಲವನ್ನೂ ಎದುರಿಸಿದವರರು. ಇತ್ತೀಚಿಗೆ ಪರಿಮಳ ಅವರು ಮದುವೆಯಾದ ಬಳಿಕ ಜಗ್ಗೇಶ್‌ಗೆ ನೀಡಿದ ಮೊದಲ ಗಿಫ್ಟ್‌ ಪ್ರೇಮ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದದ್ದರು.

ಸಕ್ಕರೆ ಕಾಯಿಲೆ ರೋಗಿಗಳಿಗೆ ಪರಿಮಳಾ ಜಗ್ಗೇಶ್ ನೆರವು, ಸೋ ಸ್ವೀಟ್!

ಕಳೆದ ವಾರ ಜಗ್ಗೇಶ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದು, ಇದೀಗ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಎಲ್ಲವೂ ಕೊರೋನಾ ಭೀತಿಯಲ್ಲಿ ಸಿಂಪಲ್ ಆಗಿಯೇ ಆಗುತ್ತಿದೆ. ಏನೇ ಇರಲಿ ಈ ಜೋಡಿ ಬಾಳು ಹಸನಾಗಿರಲಿ ಎಂಬುವುದು ಸುವರ್ಣನ್ಯೂಸ್.ಕಾಮ್ ಶುಭ ಹಾರೈಕೆ.