ಮಧ್ಯಂತರ ಜಾಮೀನು ಸಿಕ್ಕ ಬಳಿಕ ನಟ ದರ್ಶನ್‌ ಆಪ್ತರ ಒಳಮಾತು ಬಹಿರಂಗ!

ಇದೀಗ ನಟ ದರ್ಶನ್ ಫ್ಯಾನ್ಸ್ ಭಾರೀ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ತಮ್ಮತಮ್ಮ ಮನೆಗಳ ಮೇಲೆ ದರ್ಶನ್ ಫ್ಲೆಕ್ಸ್ ಹಾಕುತ್ತಿದ್ದಾರೆ, ಡಿ ಬಾಸ್ ಅಭಿಮಾನಿಗಳ ಸಂಘದಲ್ಲಿ, ಸಂಬಂಧಿಸಿದ ಕಟ್ಟಡಗಳ ಮೇಲೆ ನಟ ದರ್ಶನ್ ಕಟ್‌ಔಟ್ ನಿಲ್ಲಿಸಿ..

actor darshan thoogudeepa fans and welwishers celebrates interim bail srb

ಕನ್ನಡದ ಸ್ಟಾರ್ ನಟ ದರ್ಶನ್ (Darshan) ಅವರಿಗೆ ಮಧ್ಯಂತರ ಜಾಮೀನು ಮಂಜೂರು ಆಗುತ್ತಿದ್ದಂತೆ, ಸಹಜವಾಗಿ ದರ್ಶನ್ ಕುಟುಂಬ, ಆಪ್ತರು ಹಾಗು ಅಭಿಮಾನಿಗಳು ಭಾರೀ ಸಂತೋಷ ಅನುಭವಿಸುತ್ತಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಸೇರಿದಂತೆ, ಹಲವರು ಈ ಬಗ್ಗೆ ಖುಷಿ ಹಂಚಿಕೊಂಡಿದ್ದು, ಫ್ಯಾನ್ಸ್ ಖುಷಿ ಮುಗಿಲು ಮುಟ್ಟಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalaksmi Darshan) ಅವರು ಕಾಮಾಕ್ಯ ಶಕ್ತಿಪೀಠದ ಫೋಟೋವನ್ನು ಹಂಚಿಕೊಂಡು ಧನ್ಯವಾದವನ್ನು ಅರ್ಪಿಸಿದ್ದಾರೆ.

ನಟಿ ರಕ್ಷಿತಾ ಪ್ರೇಮ್ 'ಇವತ್ತು ಅತ್ಯಂತ ಖುಷಿಯ ದಿನ..' ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಂತಸ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಹಾಗೇ, ನಟ ದರ್ಶನ್ ಆಪ್ತರು 'ನಮಗೆಲ್ಲರಿಗೂ ಈ ದೀಪಾವಳಿಗೆ ದರ್ಶನ್ ಜೈಲಿನಲ್ಲಿ ಇರೋದಿಲ್ಲ, ಹೊರಜಗತ್ತಿನಲ್ಲೇ ದೀಪಾವಳಿ ಹಬ್ಬ ಆಚರಿಸುತ್ತಾರೆ ಎಂದು ಸ್ಟ್ರಾಂಗ್‌ ಆಗಿ ಅನ್ನಿಸುತ್ತಿತ್ತು. ಅದೀಗ ನಿಜವಾಗಿದೆ. ದೇವರ ಆಶೀರ್ವಾದ ಹಾಗೂ ಅಭಿಮಾನಿಗಳ ಹಾರೈಕೆ ಫಲಿಸಿದೆ..ಇದು ದೀಪಾವಳಿ ಗಿಫ್ಟ್' ಎಂದಿದ್ದಾರೆ. 

ಇವತ್ತು ಅತ್ಯಂತ ಖುಷಿಯ ದಿನ; ದರ್ಶನ್ ಗೆ ಬೇಲ್ ಸಿಕ್ಕ ಬೆನ್ನಲ್ಲೇ ಪೋಸ್ಟ್ ಹಾಕಿದ ರಕ್ಷಿತಾ ಪ್ರೇಮ್!

ಇದೀಗ ನಟ ದರ್ಶನ್ ಫ್ಯಾನ್ಸ್ ಭಾರೀ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ತಮ್ಮತಮ್ಮ ಮನೆಗಳ ಮೇಲೆ ದರ್ಶನ್ ಫ್ಲೆಕ್ಸ್ ಹಾಕುತ್ತಿದ್ದಾರೆ, ಡಿ ಬಾಸ್ ಅಭಿಮಾನಿಗಳ ಸಂಘದಲ್ಲಿ, ಸಂಬಂಧಿಸಿದ ಕಟ್ಟಡಗಳ ಮೇಲೆ ನಟ ದರ್ಶನ್ ಕಟ್‌ಔಟ್ ನಿಲ್ಲಿಸಿ ಸಂಭ್ರಮ ಪಡುತ್ತಿದ್ದಾರೆ. ಡಿ ಬಾಸ್‌ಗೆ ಜೈ ಎನ್ನುವ ಘೋಷಣೆ ಮುಗಿಲು ಮುಟ್ಟಿದೆ. ಅನಾರೋಗ್ಯ ಸಮಸ್ಯೆಯಿಂದ ನರಳುತ್ತಿರುವ ನಟ ದರ್ಶನ್‌ಗೆ ಚಿಕಿತ್ಸೆಗೆಂದು ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ ಕೋರ್ಟ್. 

ಅನಾರೋಗ್ಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ದರ್ಶನ್‌ಗೆ ಕೋರ್ಟ್‌ನಿಂದ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕರೂ ಇದು ಷರತ್ತುಬದ್ಧ! ಜಾಮೀನು ಪಡೆದು ಹೊರಗೆ ಹೋಗುವ ಮುನ್ನ 7 ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಬಳ್ಳಾರಿಯ ವಿಮ್ಸ್ ವೈದ್ಯರ ತಪಾಸಣೆಯ ನಂತರ ನಟ ದರ್ಶನ್‌ಗೆ ಬೆನ್ನು ಹುರಿಯಲ್ಲಿ ತೀವ್ರ ಸಮಸ್ಯೆ ಉಂಟಾಗಿದ್ದು, ಸಕಾಲಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ಪ್ಯಾರಾಲಿಸಿಸ್, ಸ್ಟ್ರೋಕ್ ಹಾಗೂ ನಂಬ್ನೆಸ್ (ಮರಗಟ್ಟುವಿಕೆ) ಕಾಯಿಲೆ ಬರಬಹುದು ಎಂದು ವೈದ್ಯರು ಕೊಟ್ಟ ವರದಿಯನ್ನು ಆಧರಿಸಿ ಜಾಮೀನು ನೀಡಲಾಗಿದೆ. 

ಕಿಚ್ಚ ಸುದೀಪ್ 'ಬಿಗ್ ಬಾಸ್ ಬಿಡೋ ಸೀಕ್ರೆಟ್' ಬಿಚ್ಚಿಟ್ಟ ನಟ ಪ್ರಥಮ್, ಹೀಗೆಲ್ಲಾ ಇದ್ಯ ವಿಷ್ಯ?

ನಟ ದರ್ಶನ್ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯೋದಕ್ಕೆ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಯಿತು. ಇನ್ನು ಕೋರ್ಟ್‌ನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ನೀಡಿದರೂ ನಿರಾಕರಣೆ ಮಾಡಲಾಗಿದ್ದು, ನಟ ದರ್ಶನ್ ಸೂಚಿಸಿದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು.

ಹೈಕೋರ್ಟ್‌ನಿಂದ ಬುಧವಾರ ನಟ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಪ್ರತಿ ವಾರವೂ ಚಿಕಿತ್ಸೆ ಪಡೆದಿರುವ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಇನ್ನು ಮಧ್ಯಂತರ ಜಾಮೀನು ಮಂಜೂರು ಮಾಡಿದ ಬೆನ್ನಲ್ಲಿಯೇ, ಕೋರ್ಟ್‌ನಿಂದ 7 ಷರತ್ತುಗಳನ್ನು ವಿಧಿಸಲಾಗಿದೆ.

ಜಯಲಲಿತಾ ಬಳಿಕ 'ವಿಜಯ' ಪರ್ವ'ನಾ; ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಿಗೆ ನಡುಕ..!

ನಟ ದರ್ಶನ್ ಮಧ್ಯಂತರ ಜಾಮೀನಿಗೆ ಕೊಟ್ಟ ಏಳು ಷರತ್ತುಗಳು: 

1. ಪಾಸ್ ಪೋರ್ಟ್ ಸರಂಡರ್
2. 2 ಲಕ್ಷ ರೂಪಾಯಿ ಬಾಂಡ್
3. ಇಬ್ಬರು ವ್ಯಕ್ತಿಗಳ ಶ್ಯೂರಿಟಿ
4. ಸಾಕ್ಷಿ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆದರಿಕೆ ಹಾಕಬಾರದು
5. ಒಂದು ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸ ಬೇಕು
6. ಸಾಕ್ಷಿ ನಾಶಕ್ಕೆ ಪ್ರಯತ್ನ ಮಾಡಬಾರದು
7. ಸಾಕ್ಷಿಗಳ ಸಂಪರ್ಕ ಮಾಡಬಾರದು
8. ಜಾಮೀನಿನ ದುರುಪಯೋಗ ಮಾಡಿಕೊಳ್ಳಬಾರದು

Latest Videos
Follow Us:
Download App:
  • android
  • ios