ಚಿತ್ರಮಂದಿರದ ಮುಂದೆ ದರ್ಶನ್ ಮಗನ 30 ಅಡಿ ಕಟೌಟ್!
ಯಜಮಾನ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೂ. ಚಾಲೆಂಜಿಂಗ್ ಸ್ಟಾರ್ ವಿನೀಶ್ 30 ಅಡಿ ಕಟೌಟ್ ನ್ನು ಚಿತ್ರಮಂದಿರದ ಮುಂದೆ ಹಾಕಿ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ.
ಯಜಮಾನ ಚಿತ್ರದಲ್ಲಿ ದರ್ಶನ್ ಮಗ ವಿನೀಶ್ ದರ್ಶನ್ ಜೊತೆ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಐರಾವತ ಚಿತ್ರದಲ್ಲಿ ತಂದೆಯೊಂದಿಗೆ ಪೊಲೀಸ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದ ವಿನೀಶ್ ಈಗ ಕೈಯಲ್ಲೊಂದು ಕೋಲು ಹಿಡಿದು ಖಡಕ್ ಹಳ್ಳಿ ಹೈದನಂತೆ ಕಾಣಿಸಿಕೊಂಡಿದ್ದಾರೆ.
ವಿನೀಶ್ ಕಾಣಿಸಿಕೊಂಡಿರುವ ಹಾಡು ಕೆಲ ತಿಂಗಳ ಹಿಂದೆ ಪ್ಯಾಲೇಸ್ ಮೈದಾನದಲ್ಲಿ ಚಿತ್ರೀಕರಣವಾಗಿದ್ದು ಶೂಟಿಂಗ್ ಸ್ಥಳಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡಾ ಬಂದಿದ್ದರು.
ದರ್ಶನ್ ಅಭಿಮಾನಿಗಳು ವಿನೀಶ್ ಫೋಟೋ ಹಾಕಿ ಹಾಲಿನ ಅಭಿಷೇಕ ಮಾಡಿದ್ದಾರೆ.
"