Asianet Suvarna News Asianet Suvarna News

ಚಿಕ್ಕಮಗಳೂರಿನ ಮುತ್ತೋಡಿಯಲ್ಲಿ ದರ್ಶನ್ ಸಫಾರಿ

ಚಿಕ್ಕಮಗಳೂರಿನಲ್ಲಿ ರಾಬರ್ಟ್ | ಮುತ್ತೋಡಿ ರಕ್ಷಿತಾರಣ್ಯದಲ್ಲಿ ದರ್ಶನ್ ಸಫಾರಿ

Actor Darshan safari in Muthodi Wildlife Sanctuary dpl
Author
Bangalore, First Published Apr 17, 2021, 5:50 PM IST
  • Facebook
  • Twitter
  • Whatsapp

ಚಿಕ್ಕಮಗಳೂರು(ಎ.17): ಮುತ್ತೋಡಿಯ ರಕ್ಷಿತಾರಣ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಭದ್ರಾ ಅಭಯಾರಣ್ಯದ ಮುತ್ತೋಡಿಗೆ ಭೇಟಿ ನೀಡಿದ್ದಾರೆ.

ಸಫಾರಿ, ವೈಲ್ಡ್ ಫೋಟೋಗ್ರಫಿ ಇಷ್ಟಪಡೋ ದರ್ಶನ್ ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ ಚಾಲೆಂಜಿಂಗ್ ಸ್ಟಾರ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ.

ಬಾಸ್ ಈಸ್ ಬ್ಯಾಕ್ ! ಮತ್ತೆ ಸಫಾರಿ ಶುರು ಮಾಡಿದ ದರ್ಶನ್

ಸ್ನೇಹಿತರ ಜೊತೆ ಮುತ್ತೋಡಿಗೆ ಆಗಮಿಸಿದ ನಟ ದರ್ಶನ್ ನಿನ್ನೆ ರಾತ್ರಿ ಬಂದು ಇಂದು ಮಧ್ಯಾಹ್ನ ಸಫಾರಿ ಮುಗಿಸಿ ತೆರಳಿದ್ದಾರೆ. ಚಿಕ್ಕಮಗಳೂರು ‌ಜಿಲ್ಲೆಯ ಭದ್ರಾ ಅಭಯಾರಣ್ಯದ ಮುತ್ತೋಡಿಯಲ್ಲಿ ನಟ ದರ್ಶನ್ ಕಂಡು ಜನ ಖುಷಿಯಾಗಿದ್ದಾರೆ.

ನಟ ಸಫಾರಿ ಹೋಗ್ತಿರೋದು ಇದೇ ಮೊದಲಬಾರಿ ಅಲ್ಲ. ಬಹಳಷ್ಟು ಸಲ ದರ್ಶನ್ ಸಫಾರಿ ಹೋದಾಗ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ತಾವೇ ಸ್ವತಃ ಕ್ಯಾಮೆರಾ ಹಿಡಿದು ವೈಲ್ಡ್ ಫೋಟೋಗ್ರಫಿಯನ್ನೂ ಮಾಡ್ತಾರೆ ದರ್ಶನ್.

Follow Us:
Download App:
  • android
  • ios