ಸ್ಯಾಂಡಲ್ ವುಡ್ ಪ್ರತಿಭಾವಂತ ನಟ ಅರುಣ್ ಸಾಗರ್. ಇವರು ಏನೇ ಮಾಡಿದ್ರೂ ಅದರಲ್ಲಿ ಏನಾದರೂ ಹೊಸತನ ಇದ್ದೇ ಇರುತ್ತದೆ. ಬಿಗ್ ಬಾಸ್ ನಲ್ಲಿ ಇವರ ಪ್ರತಿಭೆಯನ್ನು ನೋಡಿದ್ದೇವೆ. ಇವರಂತೆ ಇವರ ಮಗನೂ ಕೂಡಾ ಪ್ರತಿಭಾವಂತ. ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಇರುವ ಸೂರ್ಯ ಸಾಗರ್ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. 

 

ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಮಾಕ್ಸ್ ಮೌಥಾಯ್ ಎನ್ನುವ ವಿದೇಶಿ ಕ್ರೀಡೆಯಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಸ್ಪರ್ಧೆ ಥಾಯ್ಲೆಂಡ್ ನ ಪಟಾಯಲ್ಲಿ ನಡೆದಿತ್ತು. ವಿವಿಧಿ ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. ಭಾರತವನ್ನು ಸೂರ್ಯ ಸಾಗರ್ ಪ್ರತಿನಿಧಿಸಿದ್ದರು. 

ಥಾಯ್ ಫೈಟರ್ ಅರ್ಪಿಂಗ್ ಚಿತಾಂಗ್ ವಿರುದ್ಧ ಸೂರ್ಯ ಗೆಲುವು ಸಾಧಿಸಿದ್ದಾರೆ. ಮೂರು ವರ್ಷಗಳಿಂದ ಮೈಸೂರಿನ ವಿಕ್ರಮ್ ನಾಗರಾಜ್ ಬಳಿ ತರಬೇತಿ ಪಡೆಯುತ್ತಿದ್ದಾರೆ. 

ಇವರ ಸಾಧನೆಗೆ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ.