ನೆಪೋಟಿಸಂ ಅನುಕೂಲತೆಗಳನ್ನು ಒಪ್ಪಿಕೊಂಡ್ರೆ ಚರ್ಚೆಗಳು ನಿಲ್ಲುತ್ತವೆ; ಹೇಳೇ ಬಿಟ್ರು ಹಿತಾ ಚಂದ್ರಶೇಖರ್!

ಸಿನಿಮಾರಂಗದಲ್ಲಿ 'ನೆಪೋಟಿಸಮ್' ಎನ್ನುವುದೆಲ್ಲ ಇದೆ ಎಂಬ ಮಾತನ್ನು ನೀವು ಸಾಕಷ್ಟು ಬಾರಿ ಕೇಳಿರುತ್ತೀರಿ. ನೆಪೋಟಿಸಂ ಇದೆ ಅಥವಾ ಇಲ್ಲ ಎಂಬ ಬಗ್ಗೆ ಆಗಾಗ ಚರ್ಚೆನಡೆಯುತ್ತಲೇ ಇರುತ್ತದೆ. ಅದಕ್ಕೆ ಕೊನೆಯೇ ಇಲ್ಲವೇನೋ ಎಂಬಷ್ಟು ಭಾರೀ ಚರ್ಚೆಗಳು ನಡೆಯುತ್ತಲೇ ಇರುತ್ತವೆ. 

Accept Nepotism and its merits then talks stops against this says star kid hitha chandrashekar srb

ಸಿನಿಮಾರಂಗದಲ್ಲಿ 'ನೆಪೋಟಿಸಮ್' ಎನ್ನುವುದೆಲ್ಲ ಇದೆ ಎಂಬ ಮಾತನ್ನು ನೀವು ಸಾಕಷ್ಟು ಬಾರಿ ಕೇಳಿರುತ್ತೀರಿ. ನೆಪೋಟಿಸಂ (Nepotism) ಇದೆ ಅಥವಾ ಇಲ್ಲ ಎಂಬ ಬಗ್ಗೆ ಆಗಾಗ ಚರ್ಚೆನಡೆಯುತ್ತಲೇ ಇರುತ್ತದೆ. ಅದಕ್ಕೆ ಕೊನೆಯೇ ಇಲ್ಲವೇನೋ ಎಂಬಷ್ಟು ಭಾರೀ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಬಾಲಿವುಡ್ ಸಿನಿಯಂಗಳದಲ್ಲಿ ಈ ನೆಪೋಟಿಸಂ ಸೌಂಡ್‌ ಮಾಡುವುದು ಹೆಚ್ಚು. ಈ ಬಗ್ಗೆ ಸ್ಟಾರ್ ಕಿಡ್ ಆಗಿರುವ ಕನ್ನಡದ ನಟಿ ಹಿತಾ ಚಂದ್ರಶೇಖರ್ (Hitha Chandrashekhar) ಅವರು ಮಾತನಾಡಿದ್ದಾರೆ. 

ಹಾಗಿದ್ದರೆ ನಟಿ ಹಿತಾ ಚಂದ್ರಶೇಖರ್ ಈ ಬಗ್ಗೆ ಏನು ಹೇಳಿದ್ದಾರೆ ಕೇಳಿ.. 'ನಾವು ಸ್ಟಾರ್ ಕಿಡ್ ಆಗಿರುವ ಮೂಲಕ ನಮಗೆ ಸಿಕ್ಕ ಸವಲತ್ತುಗಳನ್ನು ನಾವು ಒಪ್ಪಿಕೊಂಡಾಗ ಮಾತ್ರ ಈ ನೆಪೋಟಿಸಂ ಬಗ್ಗೆ ಮಾತು ಕಡಿಮೆಯಾಗಲು ಅಥವಾ ನಿಲ್ಲಲು ಸಾಧ್ಯ. ಏಕಂದರೆ ನನ್ನ ವಿಷಯವನ್ನೇ ತೆಗೆದುಕೊಂಡರೂ ನಾನು ಸ್ಟಾರ್ ಕಿಡ್ ಆಗಿರುವುದರಿಂದ ನನಗೆ ಬೇಸಿಕ್ ಎಜ್ಯುಕೇಶನ್ ಆಗಲೀ, ಲೈಫ್‌ಗೆ ಬೇಕಾದ ಯಾವುದೇ ಸೌಲಭ್ಯ ಕೇಳಿದ ತಕ್ಷಣ ದೊರೆತಿದೆ. ನನ್ನ ಅಪ್ಪ-ಅಮ್ಮ ನನಗೆ ಯಾವುದರಲ್ಲಿ ಕೊರತೆ ಮಾಡಿಲ್ಲ. ನಾನು ಸಿಹಿಕಹಿ ಚಂದ್ರು ಹಾಗೂ ಗೀತಾ (Sihi kahi Chandru and Geetha) ಸ್ಟಾರ್ ದಂಪತಿ ಮಗಳು. 

ನಾನು ಜಗಳವಾಡುತ್ತೇನೆ, ನನ್ನಿಂದಾನೇ ಆಗೋದು, ಬೇರೆಯವರಿಂದ ಅಲ್ಲ; ಸತೀಶ್ ನೀನಾಸಂ ಹೇಳಿಕೆ ವೈರಲ್!

ಕೇಳಿದ್ದು ಕೇಳಿದಾಗ ದೊರಕಿ ನಾನು ಯಾವುದಕ್ಕಾಗಿಯೂ ದುಡಿದು ಗಳಿಸಬೇಕಾದ ಅನಿವಾರ್ಯತೆ ಇಲ್ಲದಿರುವ ಮೂಲಕ ನಾನು ನನ್ನ ಕೆರಿಯರ್ ಬಗ್ಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಯಿತು. ಅದೇ ನನ್ನ ಅಪ್ಪ-ಅಮ್ಮನ ಬಳಿ ಸಾಕಷ್ಟು ಹಣ ಇರದಿದ್ದರೆ, ಹೆಸರು ಅಂತಸ್ತು ಇರದಿದ್ದರೆ ನಾನು ಸ್ವತಃ ಅದಕ್ಕಾಗಿ ಕಷ್ಟ ಪಡಬೇಕಾಗುತ್ತಿತ್ತು. ಆದ್ದರಿಂದ ಯಾರೇ ಸ್ಟಾರ್ ಕಿಡ್ ಆಗಲೀ, ತಾವು ಚಿತ್ರರಂಗದ ಹಿನ್ನೆಲೆಯಿಂದ ಬಂದಿರುವ ಬಗ್ಗೆ ಹೆಮ್ಮೆ ಪಡಬೇಕು ಎನ್ನುವುದಕ್ಕಿಂತ ಹೌದು, ನನ್ನ ಬ್ಯಾಕ್‌ಗ್ರೌಂಡ್ ಇಲ್ಲೇ ಇರುವುದರಿಂದ ನನಗೆ ಅನುಕೂಲವಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು.

ನಾನು ಬೆಳೆದ ಎರಡೂ ಧರ್ಮಗಳಲ್ಲಿ ನಂಬಿಕೆ ಹೊಂದಿದ್ದೇನೆ; ನಟಿ ಮೇಘನಾ ರಾಜ್ ಮಾತಿನ ಮರ್ಮವೇನಿದೆ?

ಸ್ಟಾರ್ ಕಿಡ್‌ಗಳಿಗೆ ಬೇರೆಯವರಿಗಿಂತ ಖಂಡಿತವಾಗಿಯೂ ಅನುಕೂಲತೆಗಳು ಜಾಸ್ತಿ ಇವೆ. ಆದರೆ, ಅದೊಂದರಿಂದಲೇ ಮಕ್ಕಳೂ ಕೂಡ ದೊಡ್ಡ ಸ್ಟಾರ್ ಆಗಿ ಬೆಳೆದುಬಿಡಬಹುದು ಎನ್ನುವುದು ಸುಳ್ಳು. ಅದು ಮತ್ತೆ ಅವರ ಸಾಧನೆ-ಶ್ರದ್ಧೆಯ ಮೇಲೆ ಅವಲಂಬಿತ. ಆದರೆ, ಖಂಡಿತವಾಗಿಯೂ ಅನುಕೂಲಕರ ಎಂಬುದನ್ನು ಅಲ್ಲಗಳೆಯಬಾರದು. ಹಾಗೆ ನೆಪೋಟಿಸಂ ಇಲ್ಲವೇ ಇಲ್ಲ ಎಂದಾಗಲೇ ಅದರ ಬಗ್ಗೆ ಮಾತುಗಳು, ಚರ್ಚೆಗಳು ಶುರುವಾಗುವುದು, ಬೆಳೆಯುವುದು, ಅತಿರೇಕಕ್ಕೆ ಹೋಗುವುದು' ಎಂದಿದ್ದಾರೆ ಸಿಹಿ ಕಹಿ ಚಂದ್ರು-ಗೀತಾ ಸ್ಟಾರ್ ದಂಪತಿಗಳ ಕಿಡ್ ಹಿತಾ ಚಂದ್ರಶೇಖರ್. 

25 ದಿನ ಪೂರೈಸಿದ ದೀಕ್ಷಿತ್ ಶೆಟ್ಟಿಯ 'ಬ್ಲಿಂಕ್' ಸಿನಿಮಾ; ಪ್ರೇಕ್ಷಕರು ಅಪ್ಪಿಕೊಂಡು ಗೆಲ್ಲಿಸಿದರು ಎಂದ ಟೀಮ್!

Latest Videos
Follow Us:
Download App:
  • android
  • ios