*ಕನ್ನಡ ಸಿನಿಪ್ರೇಮಿಗಳು ಅಚ್ಚರಿಪಡೋ ಸುದ್ದಿ ಇದು*  ಕನ್ನಡ ಚಿತ್ರರಂಗವೆ ಬೆರಗಾಗೋ ಸುದ್ದಿ ಇದು*  400-500 ಕೋಟಿ ರೂಪಾಯಿಯ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾದ ಕನ್ನಡ ನಿರ್ಮಾಪಕ*  ರಾಜಮೌಳಿ ಮೀರಿಸುವ ನಿರ್ದೇಶಕರಿದ್ದರೆ ಹುಡುಕುತ್ತೇವೆ ಎಂದ ನಿರ್ಮಾಪಕ

ಬೆಂಗಳೂರು(ಆ. 13) ಕನ್ನಡ ಸಿನಿಪ್ರೇಮಿಗಳಿಗೆ ಒಂದು ಅಚ್ಚರಿ ಸುದ್ದಿ ಇದೆ ಕನ್ನಡ ಚಿತ್ರರಂಗವನ್ನೇ ಬೆರಗು ಮಾಡುವ ಸುದ್ದಿ ಇದು.

400-500 ಕೋಟಿ ರೂಪಾಯಿಯ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣಕ್ಕೆ ಕನ್ನಡ ನಿರ್ಮಾಪಕ ಮುಂದಾಗಿದ್ದಾರೆ. ರಾಜಮೌಳಿ ಮೀರಿಸೋ ನಿರ್ದೇಶಕರಿದ್ರೆ ಹುಡುಕುತ್ತೇವೆ ಎಂದು ಜಿಎಸ್ಆರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಗಾನ ಶ್ರವಣ್ ಸ್ವಾಮೀಜಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.

ಧ್ರುವ ಸರ್ಜಾ ಮುಂದಿನ ಚಿತ್ರದ ಬಗ್ಗೆ ಅಪ್ ಡೇಟ್

ಕಳೆದ ವರ್ಷ ಕೇರಳದ ಭಗವತಿ ಅಮ್ಮ ದೇವಸ್ಥಾನಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದ ಗಾನ ಶ್ರವಣ್ ಸ್ವಾಮೀಜಿ ಈಗ ಸಿನಿಮಾ ಸಾಹಸಕ್ಕೆ ಕೈಹಾಕಿದ್ದಾರೆ. ಈಗ ಕೃಷ್ಣರಾಜ 4 ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ 

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲೀಷ್ 6 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡೋ‌ಪ್ಲಾನ್ ಇದೆಯಂತೆ. ಮೈಸೂರಿನಲ್ಲಿ 640 ಎಕರೆ ಜಮೀನು ತಗೆದುಕೊಂಡು ಸೆಟ್ ಹಾಕಿ ಸಿನಿಮಾ ಶೂಟ್ ಮಾಡೋ ಪ್ಲಾನ್ ಇದೆ ಎಂದು ತಿಳಿಸಲಾಗಿದೆ.

ಕನ್ನಡದ ದೊಡ್ಡ ಸ್ಟಾರ್ ನಟರು, ತೆಲುಗು, ತಮಿಳು ಹಿಂದಿಯ ಸ್ಟಾರ್ ನಟರು ಚಿತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾ ನಿರ್ದೇಶಕರು ಯಾರು ಅಂತ ಇನ್ನೂ ಫೈನಲ್ ಆಗಿಲ್ಲ. ಗಾನ ಶ್ರವಣ ಸ್ವಾಮೀಜಿ ಬರೆದ ಕಥೆಯೇ‌ ಸಿನಿಮಾ‌ ಆಗುತ್ತಿದೆ. ಐತಿಹಾಸಿಕ ಸ್ಟೋರಿಯಾ ಸಿನಿಮಾ ಇದಾಗಿರಲಿದೆ ಎಂಬ ಮಾಹಿತಿ ಇದೆ.