ಬೆಂಗಳುರು (ಏ. 12): ವರನಟ ಡಾ.ರಾಜ್ ಅಗಲಿ ಇಂದಿಗೆ 13 ವರ್ಷ.  ಇಂದು‌ ಡಾ.ರಾಜ್ ಕುಮಾರ್ ಪುಣ್ಯತಿಥಿ.  ಕುಟುಂಬದವರು ಕಂಠೀರವದಲ್ಲಿರುವ ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. 

ಬಗೆ ಬಗೆಯ ಹೂವುಗಳಿಂದ  ಡಾ.ರಾಜ್ ಹಾಗು ಪಾರ್ವತಮ್ಮ ನವರ ಸಮಾಧಿಯನ್ನು ಅಲಂಕಾರ ಮಾಡಲಾಗಿದೆ.  ಅಣ್ಣಾವ್ರಿಗೆ ನಮಿಸಲು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಸ್ಮಾರಕಕ್ಕೆ ಬಂದ ಅಭಿಮಾನಿಗಳಿಗೆ ಪ್ರಸಾದ ವಿನಿಮಯ ವ್ಯವಸ್ಥೆ ಮಾಡಲಾಗಿದೆ.  

ಅಪ್ಪಾಜಿ ಪುಣ್ಯತಿಥಿ ಅಂಗವಾಗಿ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಕವಲುದಾರಿ ಸಿನಿಮಾ ಬಿಡುಗಡೆ ಮಾಡಲಾಗಿದೆ. 

ಏಪ್ರಿಲ್ ತಿಂಗಳು ಬಂದರೆ ರಾಜ್ ಮಾಸ ಬಂದಂತೆ.  ಆ ದಿನ ನೆನೆಸಿಕೊಂಡರೆ ಮೈ ನಡುಗುತ್ತದೆ.  ಕಳೆದ ವರ್ಷ ಅಮ್ಮನ ಮನೆ ಸಿನಿಮಾ ಮಾಡಿ ಅಮ್ಮನಿಗೆ ಅರ್ಪಸಿದ್ದೆ.  ಈ ವರ್ಷ "ಅಪ್ಪನ ಅಂಗಿ " ಅನ್ನೋ ಸಿನಿಮಾ ಮಾಡಿ ಅಪ್ಪಾಜಿಗೆ ಅರ್ಪಿಸುತ್ತಿದ್ದೇನೆ.  ಮಾಧ್ಯಮದವರ ಜೊತೆ ಸೇರಿ ಈ ಸಿನಿಮಾ ಮಾಡುವ ಯೋಚನೆಯಲ್ಲಿದ್ದೇವೆ. ಎರಡು ವರ್ಷದಿಂದ ನನ್ನ ದೇಹದ ಅರ್ಧಭಾಗ ಕೆಲಸ ಮಾಡ್ತಾಯಿರಲಿಲ್ಲ . ಅಪ್ಪಾಜಿ ಆಶೀರ್ವಾದದಿಂದ ಮೂರು ಸಿನಿಮಾ ಮಾಡ್ತಾಯಿದೀನಿ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು.  

"