Asianet Suvarna News Asianet Suvarna News

real love : 13 ವರ್ಷದ ಹಿಂದೆ ಸುನಾಮಿಯಲ್ಲಿ ಸಮಾಧಿಯಾದ ಪತ್ನಿ, ದಿನಾಲೂ ಈಜಿ ಪತ್ನಿಗಾಗಿ ಹುಡುಕಾಟ

ಪತ್ನಿ ಸತ್ತು 13 ವರ್ಷವಾದ್ರೂ ಅವಳಿಗಾಗಿ ಪತಿ ಕಾಯ್ತಿದ್ದಾನೆ. ಸುನಾಮಿಯಲ್ಲಿ ಸಾವನ್ನಪ್ಪಿದ ಪತ್ನಿ ಶವಕ್ಕಾಗಿ ಹುಡುಕಾಟ ನಡೆಸ್ತಿದ್ದಾನೆ. ಸತತ 9 ವರ್ಷಗಳಿಂದ ಸಮುದ್ರಕ್ಕಿಳಿಯುತ್ತಿರುವ ಈತನ ಪ್ರೀತಿ ವರ್ಣಿಸಲು ಪದವಿಲ್ಲ.
 

yasuo takamatsu unyielding search for his wife lost in tsunami roo
Author
First Published Aug 24, 2024, 1:05 PM IST | Last Updated Aug 26, 2024, 9:15 AM IST

ಪ್ರೀತಿಸಿದ ವ್ಯಕ್ತಿ (loved one) ಸಾಯ್ತಾನೆಯೇ ವಿನಃ ಪ್ರೀತಿ ಸಾಯೋದಿಲ್ಲ. ತಮ್ಮ ಜೀವಕ್ಕಿಂತ ಹೆಚ್ಚಾಗಿ ಸಂಗಾತಿಯನ್ನು ಪ್ರೀತಿಸುವ ಜನರು, ಅವರ ಸಾವಿನ ನಂತ್ರವೂ ಅವರ ನೆನಪಿನಲ್ಲೇ ಜೀವನ ನಡೆಸ್ತಾರೆ.  ಅನೇಕ ಬಾರಿ ಪ್ರೀತಿಸಿದ ವ್ಯಕ್ತಿ ಅಪಘಾತ, ಸುನಾಮಿ (Tsunami) , ಭೂಕಂಪದಲ್ಲಿ ನಾಪತ್ತೆಯಾಗಿರ್ತಾರೆ. ಅವರ ಮೃತದೇಹ ಸಿಕ್ಕಿರೋದಿಲ್ಲ. ಈ ಸಮಯದಲ್ಲಿ ಅವರ ಸಾವನ್ನು ಬಲವಾಗಿ ನಂಬೋದು ಕಷ್ಟ. ಯಾವಾಗ್ಲೂ, ಎಲ್ಲಿಂದಲೋ ಅವರು ಬರಬಹುದು, ಮಿರಾಕಲ್ ಆಗ್ಬಹುದು ಎಂದೇ ಮನಸ್ಸು ಕೂಗಿ ಹೇಳಿರುತ್ತದೆ. ಅವರನ್ನು ಒಂದು ಬಾರಿ ನೋಡಲು ಕಣ್ಣು ಕಾತರಿಸುತ್ತಿರುತ್ತದೆ. ಜಪಾನ್‌ (Japan) ವ್ಯಕ್ತಿ ಕೂಡ ಕಳೆದ 13 ವರ್ಷಗಳಿಂದ ತನ್ನ ಪತ್ನಿಗಾಗಿ ಕಾಯ್ತಿದ್ದಾರೆ. 

ಸುನಾಮಿಯಲ್ಲಿ ಕೈ ತಪ್ಪಿ ಹೋದ ಪತ್ನಿ : 13 ವರ್ಷದ ಹಿಂದೆ ಜಪಾನಿನಲ್ಲಿ ಕಾಣಿಸಿಕೊಂಡಿದ್ದ ಸುನಾಮಿಗೆ ಯಸುವೊ ತಕಮಾಟ್ಸು ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದಾರೆ. ದುರಂತದ ನಂತರ ಯುಕೊ ಟಕಮಾಟ್ಸು ಮತ್ತೆ ಕಾಣಿಸಲಿಲ್ಲ. ಕಳೆದ 13 ವರ್ಷಗಳಿಂದ ಪತ್ನಿಯ ಹುಡುಕಾಟ ನಡೆಸ್ತಿದ್ದಾರೆ ಯಸುವೊ ತಕಮಾಟ್ಸು. ಪ್ರತಿ ವಾರ ತನ್ನ ಪತ್ನಿ ಹುಡುಕಲು ಹೀಗ್ತಾರೆ ಇವರು. 

viral post : ಶಿಕ್ಷಕಿ ದೊಡ್ಡ ಬ್ರೆಸ್ಟ್ ಬಗ್ಗೆ ಪಾಲಕರ ಕಂಪ್ಲೇಂಟ್ : ಮುಚ್ಚಿಡೋದು ಕಷ್ಟ ಎಂದ ಟೀಚರ್

ಮಾರ್ಚ್ 11, 2011 ರಂದು ಜಪಾನಿನ ಚಿತ್ರಣವೇ ಬದಲಾಗಿತ್ತು. ನೀರಿನೊಳಗೆ ಸಂಭವಿಸಿದ ಭಾರೀ ಭೂಕಂಪಕ್ಕೆ ಸುಮಾನಿಯುಂಟಾಯ್ತು. ಇದು ವಿನಾಶಕ್ಕೆ ನಾಂದಿಯಾಯ್ತು. 40.5 ಮೀಟರ್ ಎತ್ತರದ ಅಲೆಗಳು ಸುಮಾರು 20 ಸಾವಿರ ಜನರ ಪ್ರಾಣವನ್ನು ತೆಗೆದುಕೊಂಡವು.  2500ಕ್ಕೂ ಹೆಚ್ಚು ಜನರು ನಾಪತ್ತೆಯಾದ್ರು. 

ಈ ಸಮಯದಲ್ಲಿ ಯುಕೊ ಟಕಾಮಾಟ್ಸು ಕೂಡ ನಾಪತ್ತೆಯಾದ್ರು. ಯುಕೊ ಟಕಾಮಾಟ್ಸು, 77 ಬ್ಯಾಂಕ್‌ನ ಒನಗಾವಾ ಶಾಖೆಯಲ್ಲಿ ಕೆಲಸ ಮಾಡ್ತಿದ್ದರು. 47 ವರ್ಷದ ಯುಕೊ, ಸುನಾಮಿ ಬರುವ ಸಮಯದಲ್ಲೂ ಬ್ಯಾಂಕ್ ನಲ್ಲಿದ್ದರು. ಕೊನೆಯದಾಗಿ ಅಲ್ಲಿಂದಲೇ ಅವರು ಪತಿಗೆ ಇಮೇಲ್ ಕಳುಹಿಸಿದ್ದರು. ನೀವು ಆರಾಮಾಗಿದ್ದೀರಾ? ನಾನು ಮನೆಗೆ ಬರಲು ಬಯಸ್ತೇನೆ ಎಂದು ಇಮೇಲ್ ಮಾಡಿದ್ದರು. ನಂತ್ರ ಅವರ ಬಗ್ಗೆ ಸುಳಿವು ಸಿಗ್ಲಿಲ್ಲ. ಯುಕೋ ಮನೆಗೆ ಬರುವ ಆಸೆ ಈಡೇರಲೇ ಇಲ್ಲ. ಸುನಾಮಿ ಸಂಭವಿಸಿದ ಒಂದು ತಿಂಗಳ ನಂತರ ಪಾರ್ಕಿಂಗ್ ಸ್ಥಳದಲ್ಲಿ ಯುಕೋ ಫೋನ್  ಪತ್ತೆಯಾಗಿತ್ತು. ಗುಲಾಬಿ ಬಣ್ಣದ ಫ್ಲಿಪ್ ಫೋನ್‌ನಲ್ಲಿ ಟಕಾಮಾಟ್ಸು ಬರೆದ ಮೆಸ್ಸೇಜ್ ಸಿಕ್ಕಿತ್ತು. ಇದನ್ನು 3:25 ಕ್ಕೆ ಬರೆಯಲಾಗಿತ್ತು. ಅದ್ರಲ್ಲಿ ದೊಡ್ಡ ಸುನಾಮಿ ಎಂದು ಬರೆಯಲಾಗಿತ್ತು. ಟಕಮಾಟ್ಸು ಅವರು 3. 25 ರವರೆಗೆ ಜೀವಂತವಾಗಿದ್ದಾರೆ ಎಂದು ಇದ್ರಿಂದ ಊಹಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಯಸುವೊ ತಕಮಾಟ್ಸು.

ಪತ್ನಿಗಾಗಿ ಡೈವಿಂಗ್ ಕಲಿತ ಯಸುವೊ ತಕಮಾಟ್ಸು : ಸುನಾಮಿ ಅಪ್ಪಳಿಸಿ ಪತಿ, ಪತ್ನಿಯನ್ನು ಬೇರೆ ಮಾಡಿದ ಸಮಯದಲ್ಲಿ ಯಸುವೊ ತಕಮಾಟ್ಸುಗೆ 53 ವರ್ಷ ವಯಸ್ಸಾಗಿತ್ತು. ಈಗ 65 ವರ್ಷವಾಗಿದೆ. ಪತ್ನಿಯ ಮೃತದೇಹವಾದ್ರೂ ಸಿಗ್ಬಹುದು ಎನ್ನುವ ಆಸೆ ಯಸುವೊ ತಕಮಾಟ್ಸು ಅವರದ್ದು. ಹಾಗಾಗಿಯೇ ಪ್ರತಿ ವಾರ ಸಮುದ್ರಕ್ಕೆ ಇಳಿದು ಪತ್ನಿಯ ಮೃತದೇಹದ ಹುಡುಕಾಟ ನಡೆಸ್ತಾರೆ. ಮೊದಲು ಯಸುವೊ ತಕಮಾಟ್ಸುಗೆ ಡೈವಿಂಗ್ ಬರ್ತಿರಲಿಲ್ಲ. 2013ರಲ್ಲಿ ಡೈವಿಂಗ್ ಕಲಿತು, ಲೈಸೆನ್ಸ್ ಪಡೆದಿರುವ ಯಸುವೊ ತಕಮಾಟ್ಸುಗೆ ಈಗ ಪತ್ನಿ ಹುಡುಕಾಟ ಮುಖ್ಯ ಕೆಲಸವಾಗಿದೆ. 

Sadguru Talks: ಶಾಶ್ವತವಾದ ಆರ್ಗ್ಯಾಸಂ ಸಾಧಿಸುವುದು ಹೇಗೆ? ಸದ್ಗುರು ಹೇಳ್ತಾರೆ ಕೇಳಿ

ಆಪ್ತರನ್ನು ಕಳೆದುಕೊಂಡ ನೋವು ಎಷ್ಟೇ ಇದ್ರೂ ಸಮಯ ಕಳೆದಂತೆ ಅವರನ್ನು ಜನರು ಮರೆಯುತ್ತಾರೆ. ಅವರಿಲ್ಲದೆ ಜೀವನ ನಡೆಸಲು ಕಲಿಯುತ್ತಾರೆ. ಆದ್ರೆ ಯಸುವೊ ತಕಮಾಟ್ಸುಗೆ ಪತ್ನಿಯನ್ನು ಮರೆಯಲು ಸಾಧ್ಯವಾಗ್ತಿಲ್ಲ. ಒಂದೆರಡು ದಿನ ಪತ್ನಿ ಶವಕ್ಕೆ ಹುಡುಕಾಟ ನಡೆಸಿ ನಿರಾಶೆಯಾದವರಲ್ಲ ಯಸುವೊ ತಕಮಾಟ್ಸು. ಬರೋಬ್ಬರಿ 9 ವರ್ಷಗಳಿಂದ ಪತ್ನಿ ಶವಕ್ಕಾಗಿ ಸಮುದ್ರದಲ್ಲಿ ಡೈವಿಂಗ್ ಮಾಡ್ತಾರೆ ಯಸುವೊ ತಕಮಾಟ್ಸು. ಸಾಯುವವರೆಗೂ ಇದನ್ನು ಮುಂದುವರೆಸ್ತೇನೆ ಎನ್ನುತ್ತಾರೆ ಯಸುವೊ. 

Latest Videos
Follow Us:
Download App:
  • android
  • ios