Asianet Suvarna News Asianet Suvarna News

ಹುಟ್ಟುಹಬ್ಬಕ್ಕೆ ಬೈಕ್ ಉಡುಗೊರೆ ನೀಡಿದ ಮಗ: ಭಾವುಕರಾದ ಅಪ್ಪ

ಇಲ್ಲೊಂದು ಕಡೆ ಮಗನೋರ್ವ ತನ್ನ ತಂದೆಯ ಹುಟ್ಟುಹಬ್ಬಕ್ಕೆ ಅವರಿಷ್ಟದ ಬೈಕೊಂದನ್ನು ಉಡುಗೊರೆಯಾಗಿ ನೀಡಿದ್ದು, ಮಗ ನೀಡಿದ ಉಡುಗೊರೆ ನೋಡಿ ಅಪ್ಪ ತುಂಬಾ ಭಾವುಕರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

son brought precious gift to father on his birthday watch father reaction viral video akb
Author
First Published Dec 13, 2022, 8:20 PM IST

ಸಾಮಾನ್ಯವಾಗಿ ಮಕ್ಕಳ ಏಳ್ಗೆಗಾಗಿ ಪೋಷಕರು ತಮ್ಮಿಂದ ಸಾಧ್ಯವಾಗುವ ಎಲ್ಲವನ್ನು ಮಾಡುತ್ತಾರೆ. ಯಾವುದೇ ಫಲಾಪೇಕ್ಷೆಗಳ ನಿರೀಕ್ಷೆ ಇಲ್ಲದೇ ಮಕ್ಕಳಿಗಾಗಿ ತಮ್ಮ ಕನಸುಗಳನ್ನೆಲ್ಲಾ ತ್ಯಾಗ ಮಾಡುತ್ತಾರೆ. ಆದರೆ ಎಲ್ಲಾ ಮಕ್ಕಳು ಪೋಷಕರ ಆಸೆಗಳನ್ನು ಈಡೇರಿಸುವತ್ತ ಗಮನ ಹರಿಸುವುದು ತುಂಬಾ ಕಡಿಮೆ. ಹಾಗೊಂದು ವೇಳೆ ಮಕ್ಕಳು ಪೋಷಕರ ಆಸೆ ಈಡೇರಿಸಿದರೆ ಪೋಷಕರಿಗಾಗುವ ಖುಷಿ ಅಷ್ಟಿಷ್ಟಲ್ಲ. ಅದೇ ರೀತಿ ಇಲ್ಲೊಂದು ಕಡೆ ಮಗನೋರ್ವ ತನ್ನ ತಂದೆಯ ಹುಟ್ಟುಹಬ್ಬಕ್ಕೆ ಅವರಿಷ್ಟದ ಬೈಕೊಂದನ್ನು ಉಡುಗೊರೆಯಾಗಿ ನೀಡಿದ್ದು, ಮಗ ನೀಡಿದ ಉಡುಗೊರೆ ನೋಡಿ ಅಪ್ಪ ತುಂಬಾ ಭಾವುಕರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. 2.7 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. 

usidbodypro ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ (Instagram Page) ಉಜ್ವಲ್ ಸಿದ್ನಗ್ ಎಂಬುವವರು ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡಿ ಅಪ್ಪನ ಬಗ್ಗೆ ಮಗ ಬರೆದುಕೊಂಡಿದ್ದು ಈ ಬರಹ ಹಾಗೂ ವಿಡಿಯೋ ಅನೇಕರನ್ನು ಭಾವುಕರನ್ನಾಗಿಸಿದೆ. ನಿಮ್ಮ ಬಗ್ಗೆ ವಿವರಿಸಲು ಪದಗಳೇ ಇಲ್ಲ. ನೀವು ನನ್ನ ಪಾಲಿನ ಸೂಪರ್ ಮ್ಯಾನ್ ನೀವು ನನ್ನ ಪಾಲಿನ ಎಲ್ಲವೂ ಆಗಿದ್ದೀರಾ ಎಂದು ಮಗ ಬರೆದುಕೊಂಡಿದ್ದಾನೆ. 

ನನ್ನ ತಂದೆ (Father) ಯಾವಾಗಲೂ ನನ್ನ ತಾತನ (Grand Father) ಬಳಿ ಇದ್ದ ಬೈಕನ್ನು ಇಷ್ಟ ಪಡುತ್ತಿದ್ದರು ನನ್ನ ತಾತ ಸಬ್‌ ಇನ್ಸ್‌ಪೆಕ್ಟರ್ (Sub Inspector) ಆಗಿದ್ದರಿಂದ ಅವರು ನಿವೃತ್ತಿಯಾಗುತ್ತಿದ್ದಂತೆ ಬೈಕನ್ನು ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆ ಬೈಕ್‌ನ ಬೆಲೆ ಎಷ್ಟಿರಬಹುದು ಎಂದು ತಿಳಿಯುವ ಕಾರಣಕ್ಕೆ ನಾವು ಕಳೆದ ವರ್ಷ ಬೈಕ್ ಶೋರೂಮ್‌ವೊಂದಕ್ಕೆ ಹೋಗಿ ನೋಡುವವರೆಗೂ ನಮ್ಮ ಅಪ್ಪ ಆ ಆ ಬೈಕ್‌ನ್ನು ಎಷ್ಟು ಇಷ್ಟಪಡುತ್ತಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ನಮ್ಮ ತಂದೆ ಇದು ತುಂಬಾ ದುಬಾರಿ ಬೈಕ್ ಇದನ್ನು ನಾವು ಈಗ ಖರೀದಿಸಲು ಸಾಧ್ಯವಿಲ್ಲ ಎಂಬಂತೆ ನಿಂತಿದ್ದರು. 


ಅಂದು ನಾನು ಆ ಬೈಕ್ ಮೇಲೆ ನನ್ನ ಅಪ್ಪನಿಗೆ ಇದ್ದ ನಿಜವಾದ ಪ್ರೀತಿಯನ್ನು ನೋಡಿದ್ದೆ. ನನ್ನ ತಂದೆ ಆ ಬೈಕ್‌ಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕುತೂಹಲದಿಂದ ಶೂ ರೂಮ್‌ನ ಪ್ರತಿನಿಧಿಗಳ ಬಳಿ ಕೇಳುತ್ತಿರುವುದನ್ನು ನಾನು ಗಮನಿಸಿದೆ. ಈ ಬೈಕ್‌ನ್ನು ಅವರು ತುಂಬಾ ಇಷ್ಟಪಡುತ್ತಿದ್ದರು. ಇದೇ ಬೈಕ್‌ನ್ನು ತಂದೆಯ ತಂದೆ ಓಡಿಸುತ್ತಿದ್ದರು. ಹೀಗಾಗಿ ಅವರನ್ನು ಖುಷಿ ಪಡಿಸಲು ಅವರ ಪಾಲಿಗೆ ಇದಕ್ಕಿಂತ ದೊಡ್ಡ ಗಿಫ್ಟ್ (Gift) ಬೇರಿಲ್ಲ ಎಂಬುದನ್ನು ನಾನು ಅರ್ಥ ಮಾಡಿಕೊಂಡೆ. ಆತನ ಆಸೆ ಪೂರೈಸಲು ಸಹಾಯ ಮಾಡಿದ ದೇವರಿಗೆ ಧನ್ಯವಾದ. ಇವತ್ತು ನಾನೇನಾಗಿದ್ದೇನೋ ಅದಕ್ಕೆ ನಿಮ್ಮ ಬೆಂಬಲ ಕಾರಣ ಎಂದು ಯುವಕ ಬರೆದುಕೊಂಡಿದ್ದಾನೆ. 

ಈ ವಿಡಿಯೋ ನೋಡಿದ ಅನೇಕರು ಯುವಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಕನಸನ್ನು ಪೋಷಕರು ಪೂರೈಸುತ್ತಾರೆ. ಆದರೆ ಪೋಷಕರ ಕನಸು ಈಡೇರಿಸಿದ ಮಗನನ್ನು ನೋಡಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇತ್ತ ಮಗನ ಗಿಫ್ಟ್ ನೋಡಿ ಅಪ್ಪನೂ ಭಾವುಕರಾಗಿದ್ದು, ಮಗನನ್ನು ಬಾಚಿ ತಬ್ಬಿಕೊಂಡಿದ್ದಾರೆ. 
 

ಅಪ್ಪ ಗಾರ್ಡ್, ಮಗ ಟಿಟಿ: ಪಯಣಿಸುವಾಗ ಸಿಕ್ಕ ಅಪ್ಪ ಮಗನ ಫೋಟೋ ವೈರಲ್

ಯುದ್ಧ ವಿಮಾನವನ್ನು ಒಟ್ಟಿಗೆ ಹಾರಿಸಿ ಇತಿಹಾಸ ಬರೆದ ಅಪ್ಪ ಮಗಳು

ಅಪ್ಪ ಮಗಳ ಯರ್ರಾಬಿರ್ರಿ ಕುಣಿತಕ್ಕೆ ಚಿಂದಿ ಆಯ್ತು ಡಾನ್ಸ್‌ ಫ್ಲೋರ್

Follow Us:
Download App:
  • android
  • ios