ಆನ್‌ಲೈನ್ ಮೂಲಕ ಮಾಡಿದ ಪಾವತಿ ವಿಫಲಗೊಂಡಿದೆ. ಇಷ್ಟೇ ನೋಡಿ ಈತನ ಅಕ್ರಮ ಸಂಬಂಧವೇ ಬಯಲಾಗಿದೆ. ಇಷ್ಟೇ ಅಲ್ಲ ಎರಡು ಕುಟುಂಬದಲ್ಲಿ ಕೋಲಾಹಲವೇ ಎದ್ದಿದೆ. ಪಾವತಿ ಫೇಲ್ಯೂರ್‌ನಿಂದ ವ್ಯಕ್ತಿಯ ಅಕ್ರಮ ಸಂಬಂಧ ಬಯಲಾಗಿದ್ದು ಹೇಗೆ? ಏನಿದು ಪ್ರಕರಣ?

ಗೌಂಗ್ಡಾನ್ (ಆ.22) ಪತ್ನಿಗೆ ಒಂದು ಸಣ್ಣ ಅನುಮಾನ ಕೂಡ ಬರದ ರೀತಿಯಲ್ಲಿ ಸೀಕ್ರೆಟ್ ಆಗಿ ತನ್ನ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇತ್ತ ತನ್ನ ಪತ್ನಿಗೆ, ಅತ್ತ ಗೆಳತಿಯ ಪತಿಗೆ ಯಾವುದೇ ಸುಳಿವೇ ಇರಲಿಲ್ಲ. ಕೆಲ ತಿಂಗಳಿನಿಂದ ಈ ಸಂಬಂಧ ಹೀಗೆ ಮುಂದುವರಿದಿದೆ. ಮನೆಯಲ್ಲಿ ಮುದ್ದಿನಗಂಡ, ಹೊರಗಡೆ ಅಕ್ರಮ ಸಂಬಂಧ. ಹೀಗೆ ಎಲ್ಲವೂ ಯಾವುದೇ ಅಡ್ಡಿ ಆತಂಕವಿಲ್ಲದೆ ಸಾಗಿತ್ತು. ಆದರೆ ಮೆಡಿಕಲ್ ಶಾಪ್‌ನಲ್ಲಿ ಮಾಡಿದ ಆನ್‌ಲೈನ್ ಪೇಮೆಂಟ್ ವಿಫಲಗೊಂಡಿದೆ. ಸಿಸ್ಟಮ್ ಎರರ್ ಕಾರಣದಿಂದ ಪಾವತಿ ಆಗಿಲ್ಲ. ಇಷ್ಟೇ ನೋಡಿ, ಈತನ ಅಕ್ರಮ ಸಂಬಂಧ ಬಯಲಾಗಿದೆ. ಪತ್ನಿ ರಂಪಾಟ ಮಾಡಿದ್ದರೆ, ಅತ್ತ ಆಕೆಯ ಗಂಡ ಕೆರಳಿ ಕೆಂಡವಾಗಿದದಾನೆ. ಈ ಫೆಲ್ಯೂರ್ ಪಾವತಿಯಿಂದ ಅಕ್ರಮ ಸಂಬಂಧ ಬಯಲಾಗಿದ್ದೇ ರೋಚಕ.

ವ್ಯಕ್ತಿಗೆ ಶಾಪವಾದ ಮೆಡಿಕಲ್ ಶಾಪ್ ಹಾಗೂ ಆನ್‌ಲೈನ್ ಪೇಮೆಂಟ್

ಈ ಘಟನೆ ನಡೆದಿರುವುದು ಚೀನಾದ ಗೌಂಗ್ಡಾನ್ ಪ್ರಾಂತ್ಯದ ಯಾಂಗ್‌ಜಿಯಾಂಗ್‌ನಲ್ಲಿ. ವಾರದದಲ್ಲಿ 5 ದಿನ ಈ ವ್ಯಕ್ತಿ ಕಚೇರಿಗೆ ಕೆಲಸಕ್ಕೆ ತೆರಳುತ್ತಾನೆ. ಇನ್ನೆರಡು ದಿನ ರಜೆ. ಇದರ ನಡುವೆ ಅಕ್ರಮ ಸಂಬಂಧವನ್ನೂ ಇಟ್ಟುಕೊಂಡಿದ್ದಾನೆ. ಎಲ್ಲವನ್ನೂ ಗೌಪ್ಯವಾಗಿಟ್ಟಿದ್ದ. ಪತ್ನಿಗೆ ಯಾವುದೇ ಅನುಮಾನ ಬರದ ರೀತಿ ನೋಡಿಕೊಂಡಿದ್ದ. ಇದರ ನಡುವೆ ಈತ ಮೆಡಿಕಲ್ ಶಾಪ್‌ಗೆ ತೆರಳಿ ಗರ್ಭನಿರೋಧಕ ಮಾತ್ರ ಖರೀದಿಸಿದ್ದಾನೆ. ಈ ಮಾತ್ರೆಗೆ ಮೊಬೈಲ್ ಮೂಲಕ ಆನ್‌ಲೈನ್ ಪಾವತಿ ಮಾಡಿದ್ದಾನೆ. ಆದರೆ ಈ ಪಾವತಿ ಸಿಸ್ಟಮ್ ಎರರ್‌ನಿಂದ ಫೆಲ್ಯೂರ್ ಆಗಿದೆ.

200 ರೂಪಾಯಿ ವಿಫಲ ಪಾವತಿಯಿಂದ ಕುಟುಂಬದಲ್ಲಿ ಕೋಲಾಹಲ

ಮೆಡಿಕಲ್ ಶಾಪ್‌ನಲ್ಲಿ 15.8 ಯುಆನ್ ( ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 200 ) ನೀಡಿ ಗರ್ಭನಿರೋಧಕ ಮಾತ್ರೆ ಖರೀದಿಸಿದ್ದಾನೆ.ಆನ್‌ಲೈನ್ ಮೂಲಕ ಪಾವತಿ ಮಾಡಿ ಈತ ತನ್ನ ಪಾಡಿಗೆ ತೆರಳಿದ್ದಾನೆ. ಆದರೆ ಈ ಪಾವತಿ ಪೂರ್ಣಗೊಂಡಿರಲಿಲ್ಲ. ಮೆಡಿಕಲ್ ಸಿಬ್ಬಂದಿ ಪಾವತಿ ಪರಿಶೀಲಿಸಿದಾಗ ಫೆಲ್ಯೂರ್ ಎಂದು ಸಂದೇಶ ಬಂದಿದೆ. ಅಷ್ಟೊತ್ತಿಗೆ ಕೆಲವು ಸಮಯ ಕಳೆದುಹೋಗಿದೆ. ಇತ್ತ ಈ ವ್ಯಕ್ತಿ ಕೂಡ ತನ್ನ ಗೆಳತಿ ಬಳಿ ತೆರಳಿ ಕೆಲ ಹೊತ್ತು ಕಳೆದು ಮನೆಗೆ ಮರಳಿದ್ದಾನೆ.

ಮನೆಗೆ ಬಂದ ಈ ವ್ಯಕ್ತಿ ಪತ್ನಿ ಕುಟುಂಬದ ಜೊತೆ ಸಮಯ ಕಳೆದಿದ್ದಾನೆ. ಈತ ನಿದ್ದೆಗೆ ಜಾರುತ್ತಿದ್ದಂತೆ ಮೊಬೈಲ್ ಫೋನ್‌ಗೆ ಕರೆಯೊಂದು ಬಂದಿದೆ. ಪತಿ ನಿದ್ದೆ ಮಾಡಿದ್ದಾನೆ. ಹೀಗಾಗಿ ಕರೆ ಮಾಡಿದವರಲ್ಲಿ ತುರ್ತು ಅಗತ್ಯವಿದ್ದರೆ ಎಬ್ಬಿಸೋಣ, ಇಲ್ಲದಿದ್ದರೆ ನಾಳೆ ಮಾಡಲು ಹೇಳುತ್ತೇನೆ ಎಂದು ಪತ್ನಿ ಫೋನ್ ಕಾಲ್ ಸ್ವೀಕರಿಸಿದ್ದಾರೆ. ಮೆಡಿಕಲ್ ಸಿಬ್ಬಂದಿಗಳು ಕರೆ ಮಾಡಿ ನೀವು ಮಾಡಿದ ಪಾವತಿ ಆಗಿಲ್ಲ. ಫೆಲ್ಯೂರ್ ಆಗಿದೆ ಎಂದಿದ್ದಾರೆ. ಮೆಡಿಕಲ್‌ನಿಂದ ತಾನು ಯಾವುದೇ ಔಷದಿ ತರಲು ಹೇಳಿಲ್ಲ. ಮತ್ಯಾಕೆ ಮೆಡಿಕಲ್‌ನಲ್ಲಿ ಪಾವತಿ ಮಾಡಿದ್ದಾರೆ ಎಂದು ಯೋಚಿಸಿದ್ದಾರೆ. ಪತಿಗೆ ಏನಾದರು ಆರೋಗ್ಯ ಸಮಸ್ಯೆಯಾಗಿದೆಯಾ ಅನ್ನೋ ಆತಂಕವೂ ಕಾಡಿದೆ. ಹೀಗಾಗಿ ಮೆಡಿಕಲ್ ಸಿಬ್ಬಂದಿ ಬಳಿ ಏನು ಖರೀದಿಸಿದ್ದಾರೆ ಎಂದು ಪತ್ನಿ ಕೇಳಿದ್ದಾಳೆ. ಗರ್ಭನಿರೋಧಕ ಮಾತ್ರೆ ಖರೀದಿಸಿದ್ದಾರೆ ಅನ್ನೋ ಉತ್ತರ ಕೇಳಿ ಪತಿಯ ಕಳ್ಳಾಟವನ್ನು ಪತ್ನಿ ಊಹಿಸಿದ್ದಾರೆ.

ಫೋನ್ ಕಟ್ ಮಾಡಿದ ಬೆನ್ನಲ್ಲೇ ಪತಿಯ ಕಾಲರ್ ಹಿಡಿದು ಕೇಳಿದ್ದಾಳೆ. ಮೆಡಿಕಲ್‌ನಲ್ಲಿ ಗರ್ಭ ನಿರೋಧಕ ಮಾತ್ರೆ ಖರೀದಿಸಿ ಯಾರಿಗೆ ನೀಡಿದ್ದೀರಿ, ಜನ್ಮ ಜಾಲಾಡುತ್ತೇನೆ ಎಂದು ಗದರಿಸಿದ್ದಾಳೆ. ಆರಂಭದಲ್ಲಿ ಏನೂ ಇಲ್ಲ, ಹಾಗಲ್ಲ, ಹೀಗೆ ಎಂದು ಕತೆ ಹೇಳಿದರೂ ಪತ್ನಿ ಕೇಳಿಲ್ಲ. ಪೊಲೀಸರಿಗೆ ಕರೆ ಮಾಡುತ್ತೇನೆ, ನನಗೆ ಮೋಸ ಮಾಡುವ ಪತಿ ನನ್ನ ಬಳಿ ಇರಬೇಕು ಎಂದಿಲ್ಲ, ಜೈಲಲ್ಲಿದ್ದರೆ ಉತ್ತಮ ಎಂದಿದ್ದಾಳೆ. ಈ ವೇಳೆ ಪತಿ ಬಾಯ್ಬಿಟ್ಟಿದ್ದಾನೆ.

ಮೆಡಿಕಲ್ ಸಿಬ್ಬಂದಿ ವಿರುದ್ಧ ಪತಿಯ ಆಕ್ರೋಶ

ಮನೆಯಲ್ಲಿ ರಂಪಾಟ ಶುರುವಾಗಿದೆ. ಈ ವಿಚಾರ, ಈತನ ಗೆಳತಿಯ ಪತಿಗೂ ಗೊತ್ತಾಗಿದೆ. ಎರಡೂ ಕುಟುಂಬದಲ್ಲಿ ಕೋಲಾಹಲ. ಇದರ ನಡುವೆ ವ್ಯಕ್ತಿ ಮೆಡಿಕಲ್ ಸಿಬ್ಬಂದಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾನೆ. ಮೆಡಿಕಲ್ ಸಿಬ್ಬಂದಿ ನನ್ನ ಖಾಸಗೀತನಕ್ಕೆ ಧಕ್ಕೆ ತಂದಿದ್ದಾರೆ. ಮಡೆಕಲ್ ಸಿಬ್ಬಂದಿಯಿಂದ ಎರಡೂ ಕುಟುಂಬದ ನೆಮ್ಮದಿ ಹಾಳಾಯಿತು, ಸಂಬಂಧ ಹಾಳಾಯಿತು ಎಂದು ಆಕ್ರೋಶ ಹೊರಹಾಕಿದ್ದಾನೆ.