Asianet Suvarna News Asianet Suvarna News

ಹಾಯ್ ಫ್ರೆಂಡ್ಸ್ ನಮ್ಮ ಫಸ್ಟ್‌ನೈಟ್ ವಿಡಿಯೋಗೆ ಸ್ವಾಗತ ಎಂದ ವ್ಲಾಗರ್ ಜೋಡಿ

ವ್ಲಾಗ್ ಮಾಡೋ ಹುಚ್ಚು ಹೆಚ್ಚಾದ್ರೆ ಏನಾಗುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಯುವಕನೋರ್ವ ತನ್ನ ಮೊದಲ ರಾತ್ರಿ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್‌  ಮಾಡಿಕೊಂಡಿದ್ದಾನೆ.

newly married couple shares first night video mrq
Author
First Published Jul 8, 2024, 2:35 PM IST

ಕಳೆದ ಐದಾರು ವರ್ಷಗಳಿಂದ ವ್ಲಾಗ್, ರೀಲ್ಸ್ ಮಾಡೋದು ಹೆಚ್ಚಾಗಿದೆ. ಕುಂತರೂ, ನಿಂತರೂ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತದೆ. ಲೈಕ್ಸ್, ಕಮೆಂಟ್‌ಗಾಗಿ ಇಂದಿನ ಯುವ ಸಮುದಾಯ ಖಾಸಗಿತನವನ್ನು ಉಳಿಸಿಕೊಳ್ಳುತ್ತಿಲ್ಲ. ಯಾವುದಾದ್ರೂ ಹೊಸ ವಸ್ತು ತಂದರೂ ಅನ್‌ಬಾಕ್ಸಿಂಗ್ ಹೆಸರಿನಲ್ಲಿ ಅದನ್ನೂ ವಿಡಿಯೋ ಮಾಡಿಕೊಳ್ಳುತ್ತಾರೆ. ಇದೀಗ ವ್ಲಾಗ್ ಮಾಡೋ ಹುಚ್ಚು ಹೆಚ್ಚಾದ್ರೆ ಏನಾಗುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಯುವಕನೋರ್ವ ತನ್ನ ಮೊದಲ ರಾತ್ರಿ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್‌  ಮಾಡಿಕೊಂಡಿದ್ದಾನೆ.

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ? 

ಯುವಕ ಪತ್ನಿಯನ್ನು ಕರೆದು ಎಲ್ಲರಿಗೂ ಹಾಯ್ ಹೇಳುವಂತೆ ಹೇಳುತ್ತಾನೆ. ಆಗ ಆಕೆ ಹಾಯ್ ಅಂತಾಳೆ. ಯುವಕ ಹೇಗಾಯ್ತು ನಮ್ಮ ಫಸ್ಟ್‌ನೈಟ್ ಅಂತ ಕೇಳ್ತಾನೆ. ಅದಕ್ಕೆ ಪತ್ನಿ ಇನ್ನು ಎಲ್ಲಿ ಆಗಿದೆ. ಈಗ ಆಗಬೇಕೆಂದು ಹೇಳಿ ನಗುತ್ತಾಳೆ. ನಂತರ ಯುವಕ ಈಗ ನಮ್ಮ ಮೊದಲ ರಾತ್ರಿ ನಡೆಯಲಿದೆ ಎಂದು ಕ್ಯಾಮೆರಾವನ್ನು ಕೋಣೆಯತ್ತ ತಿರುಗಿಸುತ್ತಾನೆ. ಇಲ್ಲಿ ನೋಡಿ ಗುಲಾಬಿ ಹೂಗಳಿಂದ ಮಂಚವನ್ನು ಎಷ್ಟು ಚೆನ್ನಾಗಿ ಅಲಂಕರಿಸಿದ್ದಾರೆ ಅಲ್ಲವಾ? ನನ್ನ ಪತ್ನಿ ಜಾಹ್ನವಿಗಿಂತ ಏನು ಚೆನ್ನಾಗಿಲ್ಲ ಎಂದು ಮಡದಿಯ ಕೆನ್ನೆಗೆ ಮುತ್ತಿಡುತ್ತಾನೆ. ಮುತ್ತಿಡುವ ವೇಳೆ ವಿಡಿಯೋ ಬ್ಲರ್ ಮಾಡಲಾಗಿದೆ. 

ಏರ್ಪೋರ್ಟ್‌ನಲ್ಲಿ ಸೆಕ್ಸ್ ಟಾಯ್ ಇದೆಯಾ ಅಂತ ಕೇಳಿದ್ರು, ವಿಚಿತ್ರ ಘಟನೆ ಹಂಚಿಕೊಂಡ ಮಹಿಳೆ

ಪತ್ನಿ ಜಾಹ್ಮವಿ ಫಸ್ಟ್‌ನೈಟ್‌ಗೆ ರೆಡಿಯಾಗಿದ್ದಾಳೆ. ಆನಂತರ ಯಾಕಿಷ್ಟು ದೊಡ್ಡದಾದ ಮೂಗುತಿ ಹಾಕಿಕೊಂಡಿದ್ದೀಯಾ ಎಂದು ಗಂಡ ಕೇಳುತ್ತಾನೆ. ಮನೆಯಲ್ಲಿ ಅತ್ತಿಗೆ ಹೇಳಿದ್ದರಿಂದ ಹಾಕೊಂಡೆ. ಈಗ ನಾನು ಬೆಡ್‌ ಮೇಲೆ ಕುಳಿತುಕೊಳ್ಳಲೇ ಎಂದು ಪತ್ನಿ ಕೇಳುತ್ತಾಳೆ. ಅದಕ್ಕೆ ಉತ್ತರವಾಗಿ ಗಂಡ, ದುಪ್ಪಟ್ಟಾ ಹಾಕಿಕೊಂಡು ಕುಳಿತುಕೊ ಎಂದು ಹೇಳುತ್ತಾನೆ. ಇದೀಗ ಈ 31 ಸೆಕೆಂಡ್‌ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸುತ್ತಿದೆ.

ಜುಲೈ 4ರಂದು ಡೈರಿ ಮಿಲ್ಕ್ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಇದುವರೆಗೂ 5 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲ ಪಡ್ಡೆ ಹುಡುಗರು ಮುಂದುವರಿದ ವಿಡಿಯೋಗಾಗಿ ಕಾಯುತ್ತಿದ್ದೇವೆ. ಆದಷ್ಟು ಬೇಗ ಅಪ್‌ಡೇಟ್ ನೀಡಿ, ನಾವು ಕಾಯುತ್ತಿದ್ದೇವೆ ಎಂದು ಜೋಡಿಯ ಕಾಲೆಳೆದಿದ್ದಾರೆ. ಕೆಲ ಪ್ರಬುದ್ಧರೂ ಸಹ ವಿಡಿಯೋ ನೋಡಿ ಜೋಡಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಖಾಸಗಿ ಕ್ಷಣಗಳು ರಹಸ್ಯವಾಗಿ ಇರಬೇಕೇ ಹೊರತು, ಸಾರ್ವಜನಿಕ ವಿಷಯದಲ್ಲಿ ಚರ್ಚೆ ಆಗಬಾರದು. ಇಂದಿನ ಯುವ ಸಮುದಾಯ ಜನಪ್ರಿಯತೆಗೆ ಏನೆಲ್ಲಾ ಮಾಡ್ತಾರೆ ಎಂಬುಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

18 ತುಂಬಿದವರಿಗೆ ತಿಂಗಳಿಗೆ 30 ಅಶ್ಲೀಲ ಚಿತ್ರ ವೀಕ್ಷಣೆ ಮಾತ್ರ,ಏನಿದು ಪೋರ್ನ್ ಪಾಸ್‌ಪೋರ್ಟ್ ನಿಯಮ?

Latest Videos
Follow Us:
Download App:
  • android
  • ios