Asianet Suvarna News Asianet Suvarna News

ಹಿರಿಯರಲ್ಲಿ ಅಪಾಯಕಾರಿ ಕ್ವಾರಂಟೈನ್ ಬ್ಲೂಸ್: ಪಾರಾಗೋದು ಹೇಗೆ?

ಮನೆಯಲ್ಲೇ ಕ್ವಾರಂಟೈನ್ ಆಗಿರುವ ಹಿರಿಯರಿದ್ದರೆ ಅವರಿಗೆ ಕ್ವಾರಂಟೈನ್ ಬ್ಲೂಸ್ ಕಾಡಬಹುದು. ಅದರಿಂದ ಪಾರಾಗಲು ಏನು ಮಾಡಬೇಕು?

How to get rid of quarantine blues in senior citizens
Author
Bengaluru, First Published May 12, 2021, 5:19 PM IST

ಮನೆಯಲ್ಲಿರುವ ಅರವತ್ತಕ್ಕೂ ಹೆಚ್ಚು ವಯಸ್ಸಿನ ಹಿರಿಯರನ್ನು ಕ್ವಾರಂಟೈನ್ ಮಾಡೋದು ಅಂದರೆ ತುಂಬಾ ಕಷ್ಟ. ಇಂಥ ಸನ್ನಿವೇಶಗಳಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಮುಖ್ಯವೋ, ಅದೇ ರೀತಿ ನಿಮ್ಮ ಹಿರಿಯರ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಜೊತೆಗೆ ಹಿರಿಯರ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. 60, 70ಕ್ಕೂ ಹೆಚ್ಚು ವಯಸ್ಸಿನವರು ಒಂದು ರೀತಿಯಲ್ಲಿ ಮಕ್ಕಳಿದ್ದಂತೆ.

ಅವರಿಗೆ ಭಾವನೆಗಳ ಪಲ್ಲಟ ಬಹು ಬೇಗ. ಮೊದಲೇ ವೃದ್ಧಾಪ್ಯ. ಈಗ ಅದರ ಜೊತೆಗೆ ಕೊರೊನಾ ವೈರಸ್‌ನ ಆತಂಕವೂ ಸೇರಿಕೊಂಡರೆ ಇನ್ನಷ್ಟು ಇಳಿದುಹೋಗುತ್ತಾರೆ. ಜೊತೆಗೇ ಬೇರೆಲ್ಲರಿಂದಲೂ ದೂರವಿರಬೇಕು ಎಂಬ ಇನ್ನೊಂದು ಆತಂಕವೂ ಸೇರಿಕೊಂಡು ಅವರನ್ನು ಹಣಿದು ಹಾಕುತ್ತದೆ.

ಡಬಲ್ ಮಾಸ್ಕ್ ಧರಿಸುವುದು..ಸತ್ಯ-ಮಿಥ್ಯಗಳನ್ನು ತಿಳಿದುಕೊಳ್ಳಿ ...

ಇದನ್ನೇ ಕ್ವಾರಂಟೈನ್ ಬ್ಲೂಸ್ ಎನ್ನುತ್ತಾರೆ. ವಿಂಟರ್ ಬ್ಲೂಸ್ ಇದ್ದಂತೆ ಇದು ಕೂಡ ಮನುಷ್ಯನನ್ನು ಕೊಂದುಹಾಕುವ ಒಂಟಿತನ. ಹಿರಿಯ ದಂಪತಿಗಳು ಒಟ್ಟಿಗಿದ್ದರೆ ಕನಿಷ್ಠ ಪಕ್ಷ ಅಷ್ಟಾದರೂ ಮಾತನಾಡಿಕೊಂಡು ಜೊತೆಗಿರುತ್ತಾರೆ. ಒಬ್ಬೊಬ್ಬರೇ ಆಗಿದ್ದರೆ ಈ ಕ್ವಾರಂಟೈನ್ ಒಂಟಿತನದ ಮೂಲಕ ಕೊಂದೇ ಹಾಕುತ್ತದೆ.
ಇದರಿಂದ ಅವರನ್ನು ಪಾರು ಮಾಡಬೇಕಿದ್ದರೆ:

  • ಕ್ವಾರಂಟೈನ್ ಅವಧಿ ದೀರ್ಘವಾಗಿದ್ದಷ್ಟೂ ಅದರ ನೆಗೆಟಿವ್ ಎಫೆಕ್ಟ್ ಹೆಚ್ಚು. ಕ್ವಾರಂಟೈನ್ ಅವಧಿಯನ್ನು ಆದಷ್ಟು ಕಡಿತಗೊಳಿಸಿ. ಮನೆಯ ಆವರಣದಲ್ಲಿ ಅಥವಾ ಟೆರೇಸ್ ಗಾರ್ಡನ್ ಇದ್ದರೆ ಅದರಲ್ಲಿ ಅವರನ್ನು ಓಡಾಡಿಸಿ. ದಿನಕ್ಕೆ ಮೂರು ಅಥವಾ ನಾಲ್ಕು ಹೊತ್ತು, ಅವರಿಗೆ ಆಹಾರ ಒದಗಿಸುವ, ಮಾತ್ರೆ- ಔಷಧಿ ಒದಗಿಸುವ ಹೊಣೆ ನೀವೇ ಹೊತ್ತುಕೊಳ್ಳಿ. ಹಾಗೆ ಹೋದಾಗ ಅವರನ್ನು ಮಾತಾಡಿಸಿ ಅವರ ಒಂಟಿತನದಿಂದ ಆದಷ್ಟೂ ಪಾರು ಮಾಡಿ.
  • ಅಪ್ಪ- ಅಮ್ಮ ಅಥವಾ ಅಜ್ಜ ಅಜ್ಜಿಗೆ ಇಂಟರ್‌ನೆಟ್ ಕನೆಕ್ಷನ್ ಇರುವ ಮೊಬೈಲ್ ಅಥವಾ ಟ್ಯಾಬ್ ಕೊಡಿಸಿ, ಅವರ ಫೇವರಿಟ್ ಶೋಗಳನ್ನು ನೋಡಿಸುವ ವ್ಯವಸ್ಥೆ ಮಾಡಿ. ಹೊಸದಾದ ಹಾಗೂ ಮನಸ್ಸನ್ನು ಅರಳಿಸುವ ಕಾರ್ಯಕ್ರಮಗಳನ್ನು ಅವರಿಗೆ ಸಜೆಸ್ಟ್ ಮಾಡಿ. ಸಾಧ್ಯವಾದರೆ ನೀವೂ ಅವರ ಜೊತೆಗೆ ಅದನ್ನು ನೋಡಿ ಎಂಜಾಯ್ ಮಾಡಿ.

ಬೇಸರ ಬೇಡ: ಲಾಕ್‌ಡೌನ್‌ ದಿನಗಳನ್ನು ಹೀಗೆ ಹಸನಾಗಿಸಿಕೊಳ್ಳಿ..! ...

  • ಕ್ವಾರಂಟೈನ್ ಆಗಿರುವವರು ತುಂಬ ದೂರದಲ್ಲಿದ್ದರೆ, ನೀವು ಅವರಿಂದ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರೆ, ಕನಿಷ್ಠ ದಿನಕ್ಕೆ ಎರಡು ಅಥವಾ ಮೂರು ಸಲವಾದರೂ ಆಡಿಯೋ ಕಾಲ್ ಮಾಡಿ. ಒಮ್ಮೆಯಾದರೂ ವಿಡಿಯೋ ಕಾಲ್ ಮಾಡಿ. ಕೆಲವೊಮ್ಮೆ ಆಡಿಯೋ ಕಾಲ್‌ನಲ್ಲಿ ಅವರು ತಮ್ಮ ಆರೋಗ್ಯ ಪರಿಸ್ಥಿತಿಗಳನ್ನು ಮರೆಮಾಚಬಹುದು. ಆದರೆ ವಿಡಿಯೋ ಕಾಲ್‌ನಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಅವರ ದೇಹದ  ಪರಿಸ್ಥಿತಿಯನ್ನು ನೀವು ನೋಡಬಹುದು. ಅದಕ್ಕೆ ತಕ್ಕಂತೆ ಮುಂದಿನ ಪ್ಲಾನ್ ಮಾಡಬಹುದು.
  • ಹಿರಿಯರು ಒಂದು ವೇಳೆ ಹೃದಯ ರೋಗಿಗಳಾಗಿದ್ದರೆ, ಮಧುಮೇಹ ಕಾಯಿಲೆ ಉಳ್ಳವರಾಗಿದ್ದರೆ, ಪಾರ್ಕಿನ್ಸನ್ ಅಥವಾ ಅಲ್ಜೀಮರ್ಸ್ ಕಾಯಿಲೆ ಇರುವವರಾದರೆ, ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವವರಾದರೆ, ಅಸ್ತಮಾ ಸಮಸ್ಯೆ ಇದ್ದರೆ ಹೆಚ್ಚಿನ ನಿಗಾ ಇಡಬೇಕು. ಅಂಥವರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ಹೋಗಲೇಬೇಕು. 
  • ಕ್ವಾರಂಟೈನ್ ಆಗಿರುವವರು ಅಂಧರಾಗಿದ್ದರೆ, ಅವರಿಗೆ ನಿಮ್ಮ ಸಹಾಯ ಬೇಕಾದೀತು. ಸ್ನಾನ, ಬಟ್ಟೆ ಧರಿಸುವಿಕೆ ಎಲ್ಲದರಲ್ಲೂ ನಿಮ್ಮ ಸಹಾಯ ಅಗತ್ಯ. 
  • ಕ್ವಾರಂಟೈನ್ ಆಗಿರುವವರು ನಿಮ್ಮ ದೂರದ ಸಂಬಂಧಿಯೇ ಆಗಿದ್ದರೂ ಸಹ, ನೀವು ಒದು ಸಲ ಫೋನ್ ಮಾಡಿ ವಿಚಾರಿಸಿಕೊಂಡರೆ, ಧೈರ್ಯ ಹೇಳಿದರೆ ಉಲ್ಲಸಿತರಾಗುತ್ತಾರೆ. ಹೆದರಿಸುವ ಮಾತುಗಳನ್ನು ಆಡಬಾರದು. ಅವರಲ್ಲಿ ಸ್ಫೂರ್ತಿ ತುಂಬುವ ಮಾತುಗಳನ್ನೇ ಆಡಬೇಕು.

ಲಸಿಕೆ ಹಾಕಿಸಿದ ನಂತರ ಜ್ವರ ಬಂದರೆ ನೀವು ಸ್ಟ್ರಾಂಗ್ ಅಂತೇನೂ ಅಲ್ಲ! ...

  • ನಿಮ್ಮ ಮನೆಯ ಹಿರಿಯರು ಕ್ವಾರಂಟೈನ್ ಆಗಿದ್ದರೆ, ಅವರಿಗೆ ಪ್ರೀತಿಪಾತ್ರರಾದ ಬಂಧುಗಳಿಂದ ಕರೆ ಮಾಡಿಸಿ, ಧೈರ್ಯ ತುಂಬುವ ಮಾತುಗಳನ್ನು ಆಡುವಂತೆ ಮಾಡಿ. ಕೊರೊನಾದ ಕುರಿತ ರಕ್ತಸಿಕ್ತ ವಾರ್ತೆಗಳನ್ನು ಹೆಚ್ಚಾಗಿ ಕೇಳಿಸಬೇಡಿ.
  • ಪೇಂಟಿಂಗ್ ಮಾಡುವುದು, ಹೊಸದೊಂದು ಭಾಷೆ ಕಲಿಯುವುದು, ಲೆಕ್ಕ ಮಾಡುವುದು, ಮುಂತಾದವುಗಳು ಮೆದುಳನ್ನು ಆಕ್ಟಿವ್ ಆಗಿಡುವ ಹವ್ಯಾಸಗಳು. ಇವುಗಳನ್ನು ಕಲಿಯಲು ಹೆತ್ತವರನ್ನು ಪ್ರೇರೇಪಿಸಿ.
  • ನೀವು ದೂರದಲ್ಲಿದ್ದರೂ, ಅವರ ಜೊತೆಗೇ ಇದ್ದೀರಿ ಎಂದು ಖಚಿತಪಡಿಸಿ. ಸಂಕಷ್ಟದ ಸಮಯದಲ್ಲಿ ನಾವು ಹಾಜರಿರುತ್ತೇವೆ ಎಂಬ ಭರವಸೆ ತುಂಬಿ.
  • ಅಗತ್ಯಬಿದ್ದರೆ ಮನೋವೈದ್ಯರಿಂದ ಕೌನ್ಸೆಲಿಂಗ್, ತಜ್ಞ ಸಹಾಯ ಪಡೆಯಲು ಅಂಜಿಕೆ ಬೇಡ.
Follow Us:
Download App:
  • android
  • ios