ಮತ್ತೆ ಕಾಣಿಸಿಕೊಂಡಿತು 7 ಹೆಡೆಯ ಸರ್ಪದ ಪೊರೆ : ಏನಿದು ಅಚ್ಚರಿ!
ರಾಮನಗರದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ 7 ಹೆಡೆಯ ಸರ್ಪದ ಪೊರೆ ಇದೀಗ ಮತ್ತೆ ಕಾಣಿಸಿಕೊಂಡಿದೆ. ಇದು ಇಲ್ಲಿನ ಜನರಲ್ಲಿ ಹೆಚ್ಚು ಅಚ್ಚರಿಯನ್ನುಂಟು ಮಾಡಿದೆ.
ರಾಮನಗರ [ಅ.09]: ಕಳೆದ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ 7 ಹೆಡೆ ಸರ್ಪದ ಪೊರೆ ಮತ್ತೆ ರಾಮನಗರದಲ್ಲಿ ಕಾಣಿಸಿಕೊಂಡಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಿಗೌಡನ ದೊಡ್ಡಿಯಲ್ಲಿ ಕಳೆದ ಬಾರಿ ಕಾಣಿಸಿಕೊಂಡ ಜಾಗದಲ್ಲಿಯೇ ಪೊರೆ ಕಾಣಿಸಿಕೊಂಡಿದೆ.
ಕಳೆದ ಬಾರಿ ಸರ್ಪದ ಪೊರೆ ಸಿಕ್ಕ ಜಾಗದಲ್ಲಿ ದೇವಾಲಯವನ್ನು ಕಟ್ಟಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಇದೀಗ ಈ ದೇವಾಲಯದ ಪಕ್ಕದಲ್ಲಿಯೇ ಪೊರೆ ಕಂಡಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪುರೆಬಾಳಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಪೊರೆ ಕಂಡಿದ್ದು, ದೇವಾಲಯದ ಸುತ್ತ ಕಸ ಗುಡಿಸುತ್ತಿದ್ದ ವೇಳೆ ಪತ್ತೆಯಾಗಿದೆ. ಇದೀಗ 7 ಹೆಡೆ ಸರ್ಪ ಪತ್ತೆಯಾದ ಸ್ಥಳ ನೋಡಲು ಜನರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.