ಸಿರವಾರ(ಅ.9): ಪಟ್ಟಣ ಸೇರಿ ಹಲವೆಡೆ ಸುರಿದ ಭಾರೀ ಮಳೆಯಿಂದಾಗಿ ಮುಖ್ಯ ರಸ್ತೆಯು ಜಲಾವೃತವಾದರೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಸಾರ್ವಜನಿಕರು ಸಮಸ್ಯೆ ಅನುಭವಿಸಿದ್ದಾರೆ.

ತಾಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ 1 ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಮುಖ್ಯ ರಸ್ತೆಯಲ್ಲಿರುವ ಚರಂಡಿಗೆ ನೀರು ಹೋಗಲು ನಿರ್ಮಾಣ ಮಾಡಿರುವ ಹೋಲ್‌ಗಳ ಬಂದ್‌ ಆಗಿರುವುದರಿಂದ ಗದ್ದೆಹಳ್ಳದಿಂದ ಎಪಿಎಂಸಿ ಕ್ರಾಸ್‌ನವರೆಗೂ ನೀರು ನಿಂತುಕೊಂಡು ಸಂಚಾರಕ್ಕೆ ತೊಂದರೆಯಾಗಿತ್ತು. ನವಲಕಲ್‌ ಶಾಖಾ ಮಠದ ಪಕ್ಕದಲ್ಲಿ ಚರಂಡಿ ತುಂಬಿರುವುದರಿಂದ ಮನೆಗಳಿಗೆ ನೀರು ನುಗ್ಗಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿರವಾರದಲ್ಲಿ ಸಂತೆ ಜರುಗುವುದರಿಂದ ದಸರಾ ಹಬ್ಬಕ್ಕೆ ವಿವಿಧ ವಸ್ತುಗಳ ಖರೀದಿಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರಿಗೆ ಮಳೆಯಿಂದಾಗಿ ತೊಂದರೆಯಾದರೆ. ದಿಢೀರ್ ಎಂದು ಆಗಮಿಸಿದ ಮಳೆಯಿಂದ ತರಕಾರಿ, ಕಾಳುಕಡಿ, ಸೇರಿದಂತೆ ವಸ್ತುಗಳು ಮಳೆಯಿಂದ ತೊಯ್ದವು. ವಾಹನಗಳನ್ನು ಅಡ್ಡಾ ದೀಡಿ ನಿಲ್ಲಿಸಿದ್ದರಿಂದ ಬಸವೇಶ್ವರ ವೃತ್ತದಲ್ಲಿ 1 ಗಂಟೆಗೂ ಅದಿಕ ಕಾಲ ಟ್ರಾಫಿಕ್‌ ಜಾಮ್‌ ಆಗಿ ಸಂಚಾರಕ್ಕೆ ತೊಂದರೆಯಾಗಿತು.