ಏನೂ ಕೆಲಸವಿಲ್ಲ, ಅಟೆಂಡೆನ್ಸ್ ಹಾಕಿ 20 ವರ್ಷ ಫುಲ್ ಸ್ಯಾಲರಿ ಪಡೆದ ಮಹಿಳೆ ಕಂಪನಿ ವಿರುದ್ಧವೇ ದೂರು!
ವರ್ಗಾವಣೆ ಬಳಿಕ ಕಳೆದ 20 ವರ್ಷದಿಂದ ಮಹಿಳೆ ಪ್ರತಿ ತಿಂಗಳು ಸಂಪೂರ್ಣ ಸ್ಯಾಲರಿ ಪಡೆದಿದ್ದಾಳೆ. ಆದರೆ ಕೆಲಸ ಕೇವಲ ಹಾಜರಾತಿ ಹಾಕಿದರೆ ಸಾಕು. ಏನೂ ಕೆಲಸ ಮಾಡದಿದ್ದರೂ 2 ದಶಕಗಳಿಂದ ಯುವತಿಗೆ ತಕ್ಕ ಸಮಯಕ್ಕೆ ಸಂಬಳ ನೀಡುತ್ತಿದ್ದ ಕಂಪನಿ ವಿರುದ್ದವೇ ಮಹಿಳೆ ದೂರು ನೀಡಿದ್ದಾಳೆ.
ಫ್ರಾನ್ಸ್(ಜೂ.23) ಕಳೆದ 20 ವರ್ಷದಿಂದ ಒಂದು ದಿನ ವಿಳಂಬಾಗದೆ, ಒಂದೇ ದಿನವೂ ಏನು ಮಾಡುತ್ತಿದ್ದೀರಿ ಎಂದು ಕೇಳದೆ ಕಂಪನಿ ಪ್ರತಿ ತಿಂಗಳು ಮಹಿಳೆಗೆ ವೇತನ ಹಾಕಿದೆ. ಇತ್ತ ಮಹಿಳೆ ಪ್ರತಿ ದಿನ ಹಾಜರಾತಿ ಹಾಕಿದರೆ ಮುಗೀತು. ಇನ್ನುಳಿದಂತೆ ಬೆಳಗ್ಗೆ ಕಾಫಿ, ಮಧ್ಯಾಹ್ನ ಊಟ, ಸಂಜೆ ಕಾಫಿ ಬಳಿಕ ಮನೆಗೆ. ಇಷ್ಟಕ್ಕೆ ಕಂಪನಿ ಮರು ಮಾತನಾಡದೆ 20 ವರ್ಷ ಸಂಪೂರ್ಣ ಸ್ಯಾಲರಿ ಹಾಕಿದೆ. ಇದೀಗ ಮಹಿಳೆ ಕಂಪನಿ ವಿರುದ್ದವೇ ದೂರು ನೀಡಿ ಕಟಕಟೆಯಲ್ಲಿ ನಿಲ್ಲಿಸಿದ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ.
ಲ್ಯಾರೆನ್ಸ್ ವ್ಯಾನ್ ವೆಸನ್‌ಹೋವ್ ವಿಶೇಷತನ. ಫ್ರಾನ್ಸ್‌ನ ಅತೀ ದೊಡ್ಡ ಟೆಲಿಕಮ್ಯೂನಿಕೇಶನ್ ಕಂಪನಿ ಆರೇಂಜ್ ಸಂಸ್ಥೆಯಲ್ಲಿ 1993ರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಪಾರ್ಶ್ವವಾಯುವಿನಿಂದ ಬಳಲಿದ ಲಾರೆನ್ಸ್ ತಮ್ಮ ದೈಹಿಕ ನ್ಯೂನತೆಗಳಿಂದ ಎಲ್ಲಾ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಕಂಪನಿ ಕಾರ್ಯದರ್ಶಿ, ಮಾನವ ಸಂಪನ್ಮೂಲ ಅಧಿಕಾರಿ ಜವಾಬ್ದಾರಿಗಳನ್ನು ಲಾರೆನ್ಸ್ ವ್ಯಾನ್‌ಗೆ ನೀಡಿತ್ತು.
ಎಲಾನ್ ಮಸ್ಕ್ ಸಂಬಳಕ್ಕೆ ಅನುಮೋದನೆ; ಇದು ಟಾಟಾ ಮೋಟಾರ್ಸ್ ಆದಾಯಕ್ಕಿಂತಲೂ ಹೆಚ್ಚು
ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಲ್ಯಾರೆನ್ಸ್ ವ್ಯಾನ್ 2002ರಲ್ಲಿ ಕಂಪನಿಗೆ ವರ್ಗಾವಣೆ ಬಯಸಿ ಮನವಿ ಪತ್ರ ನೀಡಿದ್ದಳು. ಮತ್ತೊಂದು ಪ್ರಾಂತ್ಯದಲ್ಲಿನ ಕಚೇರಿಗೆ ವರ್ಗಾವಣೆ ಬಯಸಿದ್ದಳು. ವಿಶೇಷಚೇತನ ಉದ್ಯೋಗಿಯಾಗಿರುವ ಕಾರಣ ಈ ಮನವಿಯನ್ನು ಆರೇಂಜ್ ಸಂಸ್ಥೆ ಪರಿಗಣಸಿತ್ತು. ಎರಡು ತಿಂಗಳಲ್ಲಿ ಆಕೆಯನ್ನು ಬಯಸಿದ್ದ ಸ್ಥಳಕ್ಕೆ ವರ್ಗಾವಣೆ ಮಾಡಿತು.
ಲಾರೆನ್ಸ್ ವ್ಯಾನ್ ವರ್ಗಾವಣೆಯಾದ ಕಚೇರಿಯಲ್ಲಿ ಮಾನವ ಸಂಪನ್ಮೂಲ, ಕಾರ್ಯದರ್ಶಿ, ಕಚೇರಿ ಕೆಲಸಗಳು ಇರಲಿಲ್ಲ. ಸಾಫ್ಟ್‌ವೇರ್, ಎಲೆಕ್ಟ್ರಿಕಲ್ ಸೇರಿದಂತೆ ಇತರ ಕೆಲಸಗಳು ಮಾತ್ರವಿತ್ತು. ವಿಶೇಷಚೇತನವಾಗಿರುವ ಕಾರಣ ಇತರ ಕೆಲಸಗಳನ್ನು ಮಾಡಲು ಈಕೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪ್ರತಿ ದಿನ ಬಂದು ಕಚೇರಿಯಲ್ಲಿ ಹಾಜರಾತಿ ಹಾಕಿದರೆ ಸಾಕು. ತಿಂಗಳ ಅಂತ್ಯದಲ್ಲಿ ಸಂಪೂರ್ಣ ಸ್ಯಾಲರಿಯನ್ನು ಕಂಪನಿ ನೀಡುತ್ತಿತ್ತು.
ಕಳೆದ 20 ವರ್ಷ ಈ ರೀತಿ ವೇತನ ಪಡೆದ ಮಹಿಳೆ ಇದೀಗ ಆರೇಂಜ್ ಕಂಪನಿ ವಿರುದ್ದ ದೂರು ನೀಡಿದ್ದಾಳೆ. ನನಗೆ ಯಾವುದೇ ಕೆಲಸ ಕೊಡದೆ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ. ನನ್ನ ವೃತ್ತಿ ಜೀವನದ ಏಳಿಕೆಗೆ ಕೊಳ್ಳಿ ಇಟ್ಟಿದ್ದಾರೆ ಎಂದು ದೂರು ನೀಡಿದ್ದಾಳೆ. ಕಂಪನಿ ನನಗೆ ಉಳಿದುಕೊಳ್ಳಲುವ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ್ದಾಳೆ. ಆದರೆ ಈಕೆಯ ಆರೋಪಕ್ಕೆ ಕಂಪನಿ ದಾಖಲೆ ಸಮೇತ ಉತ್ತರ ನೀಡಿದೆ. ಉದ್ಯೋಗಿ ವಿಶೇಷತನರಾಗಿದ್ದಾರೆ. ಪದೇ ಪದೆ ಅನಾರೋಗ್ಯ ನಿಮಿತ್ತ ರಜೆ ಪಡೆದುಕೊಂಡಿದ್ದಾರೆ. ತಿಂಗಳಲ್ಲಿ ಹೆಚ್ಚು ದಿನ ರಜೆ ಮಾಡಿದ್ದಾರೆ. ಹೀಗಾಗಿ ಉದ್ಯೋಗಿಗೆ ಹೊಸ ಜವಾಬ್ದಾರಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಉಳಿದುಕೊಳ್ಳುವ ವ್ಯವಸ್ಥೆ, ಪ್ರಯಾಣ, ಆಹಾರ ಸೇರಿದಂತೆ ಎಲ್ಲವನ್ನೂ ಒಟ್ಟುಗೂಡಿಸಿ ವೇತನದಲ್ಲಿ ನೀಡಲಾಗಿದೆ. ಆಫರ್ ಲೆಟರ್ ಪಡೆಯುವಾಗ ಉದ್ಯೋಗಿ ಈ ಷರತ್ತು, ವೇತನದ ವಿಭಾಗಗಳ ಕುರಿತು ಸಹಿ ಹಾಕಿದ್ದಾರೆ ಎಂದು ಕಂಪನಿ ದಾಖಲೆ ಸಮೇತ ಕೋರ್ಟ್ ಮುಂದೆ ಹಾಜರುಪಡಿಸಿದೆ.
ನಟ ಯಶ್ ಹತ್ರ ಬರೋಕೆ ಯಾರ್ಗೂ ಆಗಲ್ಲ; ಬಾಡಿ ಗಾರ್ಡ್ ಶ್ರೀನಿವಾಸ್ ಮಾಸ್ ಫೋಟೋ ನೋಡಿ ಎಲ್ಲರು ಶಾಕ್