ಕೇವಲ 7 ನಿಮಿಷದ ಮೀಟಿಂಗ್, ಉದ್ಯೋಗ ಕಡಿತ ಘೋಷಿಸಿ ಶಾಕ್ ನೀಡಿದ IBM!
ವೇತನ ಹೆಚ್ಚಳ, ವರ್ಕ್ ಫ್ರಮ್ ಹೋಮ್ ಸೇರಿದಂತೆ ಇತರ ಹಲವು ಲೆಕ್ಕಾಚಾರಗಳೊಂದಿಗ ಐಬಿಎಂ ಉದ್ಯೋಗಿಗಳು ದಿಢೀರ್ ಕರೆದ ಮೀಟಿಂಗ್‌ಗೆ ಹಾಜರಾಗಿದ್ದರು. ಆದರೆ ಕೇವಲ ಏಳೇ ನಿಮಿಷ ನಡೆದ ಮೀಟಿಂಗ್‌ನಲ್ಲಿ ಏಕಾಏಕಿ ಉದ್ಯೋಗ ಕಡಿತ ಘೋಷಣೆ ಮಾಡಿದ ಐಬಿಎಎಂ ಕಂಪನಿ ಬಹುದೊಡ್ಡ ಶಾಕ್ ನೀಡಿದೆ.
ನವದೆಹಲಿ(ಮಾ.14) ಕಾರ್ಪೋರೇಟ್ ವಲಯದಲ್ಲಿ ಕೆಲ ದಿನಗಳಿಂದ ತಣ್ಣಗಿದ್ದ ಉದ್ಯೋಗ ಕಡಿತ ಆಘಾತ ಇದೀಗ ಮತ್ತೆ ಅಬ್ಬರಿಸಲು ಆರಂಭಗೊಂಡಿದೆ. ಟೆಕ್ ಕಂಪನಿಗಳ ಪೈಕಿ ದಿಗ್ಗಜ ಐಬಿಎಂ ಇದೀಗ ಏಕಾಏಕಿ ಉದ್ಯೋಗ ಕಡಿತ ಘೋಷಣೆ ಮಾಡಿದೆ. ಉದ್ಯೋಗಿಗಳ ಮೀಟಿಂಗ್ ಕರೆದ ಕಂಪನಿ, ಕೇವಲ 7 ನಿಮಿಷದಲ್ಲ ಮೀಟಿಂಗ್ ಮುಗಿಸಿದೆ. ಆದರೆ ಈ ಮೀಟಿಂಗ್‌ನಲ್ಲಿ ಐಬಿಎಂನ ಎರಡು ವಿಭಾಗದಲ್ಲಿ ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದೆ ಎಂದು ಸಿಎನ್‌ಎನ್ ಸೇರಿದಂತೆ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ಉದ್ಯೋಗ ಕಡಿತದ ಸಂಖ್ಯೆ ಬಹಿರಂಗಪಡಿಸಿಲ್ಲ. ಐಬಿಎಂ ಈ ಘೋಷಣೆಯಿಂದ ಇದೀಗ ಉದ್ಯೋಗಿಗಳಲ್ಲಿ ನಡುಕು ಶುರುಕವಾಗಿದೆ.
ಐಬಿಎಂ ಚೀಫ್ ಕಮ್ಯೂನಿಕೇಶನ್ ಆಫೀಸರ್ ಜೋನಾಥನ್ ಆದಾಶೇಕ್ ಇಂದು 7 ನಿಮಿಷಗಳ ಮೀಟಿಂಗ್ ನಡೆಸಿ ಈ ಘೋಷಣೆ ಮಾಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಆದರೆ ಕಂಪನಿ ಅಧಿಕೃತ ಘೋಷಣೆ ಮಾಡಿಲ್ಲ. ಕಳೆದ ವರ್ಷ ಅರವಿಂದ್ ಕೃಷ್ಣ ನೇಮಕಾತಿ ಕುರಿತು ಮಹತ್ವದ ಹೇಳಿಕೆ ನೀಡಿದ್ದರು. ಪ್ರಸಕ್ತ ವರ್ಷದಲ್ಲಿ ಐಬಿಎಂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಎಂದು ಘೋಷಿಸಿತ್ತು. ಇದೀಗ ಉದ್ಯೋಗ ಕಡಿತದ ಬಳಿಕ ಆರ್ಟಿಫೀಶಿಯಲ್ ಇಂಟಲಿಜೆನ್ಸಿ ಬಳಕೆಯಿಂದ ಐಬಿಎಂ ಕಂಪನಿಯ ಉದ್ಯೋಗ ಕಡಿತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಹೀಗಾಗಿ ಉದ್ಯೋಗ ಕಡಿತದ ವರದಿ ಕಾರ್ಪೋರೇಟ್ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
Paytm layoffs: ಶೇ.20ರಷ್ಟು ನೌಕರರಿಗೆ ಗೇಟ್‌ಪಾಸ್ ನೀಡಲಿದೆ ಕಂಪನಿ?
ಈಗಾಗಲೇ ಹಲವು ಕಂಪನಿಗಳು 2024ರಲ್ಲಿ ಉದ್ಯೋಗ ಕಡಿತ ಘೋಷಿಸಿದೆ. ಈ ಸಾಲಿಗೆ ಐಬಿಎಂ ಕೂಡ ಇದೀಗ ಸೇರಿಕೊಳ್ಳುತ್ತಿದೆ. 200ಕ್ಕೂ ಹೆಚ್ಚು ಕಂಪನಿಗಳು ಈಗಾಗಲೇ ಉದ್ಯೋಗ ಕಡಿತ ಮಾಡಿದೆ. ಸರಿಸುಮಾರು 49 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಳೆದುಕೊಂಡಿದ್ದಾರೆ. ಗೂಗಲ್ ಸೇರಿದಂತೆ ಹಲವು ಐಟಿ ದಿಗ್ಗಜ ಕಂಪನಿಗಳು ಉದ್ಯೋಗ ಕಡಿತ ಮಾಡಿದೆ.
ಇತ್ತೀಚೆಗೆ ಬೈಜುಸ್ ಆರ್ಥಿಕ ಸಂಕಷ್ಟದಿಂದ ಉದ್ಯೋಗ ಕಡಿತ ಮಾತ್ರವಲ್ಲ, ಉದ್ಯೋಗಿಗಳಿಗೆ ಸಂಬಳ ನೀಡಲು ಪರದಾಡುತ್ತಿದೆ. ಇಷ್ಟೇ ಅಲ್ಲ ಬೆಂಗಳೂರಿನ ಪ್ರಧಾನ ಕಚೇರಿ ಹೊರತುಪಡಿಸಿ ಇನ್ನುಳಿದ ಎಲ್ಲಾ ಕಚೇರಿಗಳನ್ನು ತೊರೆದಿತ್ತು. ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಿದೆ. ಬೆಂಗಳೂರಿನಲ್ಲಿರುವ ಮುಖ್ಯ ಕಚೇರಿಯ ಸಾವಿರ ಉದ್ಯೋಗಿಗಳಿಗೆ ಮಾತ್ರ ಕಚೇರಿಗೆ ಬರಲು ಸೂಚಿಸಲಾಗಿದೆ.
ಮತ್ತೊಮ್ಮೆ 10% ಉದ್ಯೋಗಿಗಳನ್ನು ವಜಾಗೊಳಿಸಿದ ಸ್ನ್ಯಾಪ್!