ಐಐಟಿ, ಬಿಟೆಕ್ ಅಥವಾ ಯಾವ ಡಿಗ್ರಿಯೂ ಅವಶ್ಯಕತೆ ಇಲ್ಲ. ವರ್ಷಕ್ಕೆ 15 ಲಕ್ಷ ರೂಪಾಯಿ ಸಂಪಾದಿಸಲು ಉತ್ತಮ ಮಾರ್ಗವಿದೆ. ಈ ಕುರಿತು ರೆಡ್ಡಿಟ್ ಬಳಕೆದಾರ ಐಡಿಯಾ ಕೊಟ್ಟಿದ್ದಾನೆ. ಈ ಹಣ ಸಂಪಾದಿಸುವ ಮಾರ್ಗ ಇದೀಗ ಭಾರಿ ಚರ್ಚೆಯಾಗುತ್ತಿದೆ. 

ಉದ್ಯೋಗ ಗಿಟ್ಟಿಸಿಕೊಳ್ಳುವುದು, ಅನುಭವ ಇಲ್ಲದೆ ಉತ್ತಮ ವೇತನ ಪಡೆಯುವುದು ಅತೀ ದೊಡ್ಡ ಸವಾಲು, ಡಿಗ್ರಿ, ಮಾಸ್ಟರ್ ಡಿಗ್ರಿ, ವೃತ್ತಿಪರ ಕೋರ್ಸ್, ಇಂಟರ್ನ್‌ಶಿಪ್, ಹೆಚ್ಚುವರಿ ತರಬೇತಿ ಸೇರಿದಂತೆ ಎಲ್ಲಾ ಸರ್ಟಿಫಿಕೇಟ್ ಇದ್ದರೂ ಉತ್ತಮ ಸ್ಯಾಲರಿ ಕೆಲಸ ಸಿಗುವುದು ಕಷ್ಟ. ಆದರೆ ಇಲ್ಲೊಬ್ಬ ರೆಡ್ಡಿಟ್ ಬಳಕೆದಾರ ನೀವು ಯಾವ ಡಿಗ್ರಿನೂ ಇಲ್ಲದೆ ವರ್ಷಕ್ಕೆ 15 ಲಕ್ಷ ರೂಪಾಯಿ ಸಂಪಾದಿಸಬಹುದು ಎಂದಿದ್ದಾನೆ. ಈತ ಬಿಟ್ಟಿ ಸಲಹೆ ನೀಡಿ ಮಾಯವಾಗಿಲ್ಲ, 15 ಲಕ್ಷ ರೂಪಾಯಿ ಸಂಪಾದಿಸುವ ಮಾರ್ಗವನ್ನು ಹೇಳಿಕೊಟ್ಟಿದ್ದಾನೆ. ಸ್ಟಾರ್ಟ್‌ಅಪ್ ಕಂಪನಿಗೆ ಕೆಲಸ ಮಾಡಿ ವಾರ್ಷಿಕ 15 ಲಕ್ಷ ರೂಪಾಯಿ ಕುಳಿತಲ್ಲೇ ಗಳಿಸಿ ಎಂದಿದ್ದಾನೆ. 

ರೆಡ್ಡಿಟ್ ಬಳಕೆದಾರ ಪ್ರಾಯೋಗಿಕ ಸಲಹೆ ನೀಡಿದ್ದಾನೆ. ಈತ ಸೂಚಿಸಿದ ಕೆಲಸ ಟೆಕ್ ಆಸಕ್ತರಿಗೆ ಹೆಚ್ಚು ಸೂಕ್ತವಾಗಿದೆ. Btechtards ಅನ್ನೋ ರೆಡ್ಡಿಟ್ ಬಳಕದಾರ ಈ ಪೋಸ್ಟ್ ಮಾಡಿದ್ದಾನೆ. ಈತನ ಪೋಸ್ಟ್‌ಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಇಷ್ಟೇ ಅಲ್ಲ ಹಲವರು ಈ ಸ್ಟಾರ್ಟ್ಅಪ್ ಹಾಗೂ ಉದ್ಯೋಗ ಕುರಿತು ಆಸಕ್ತಿ ಹೊಂದಿರುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಈತ ಸೂಚಿಸಿದಂತೆ ಸ್ಟಾರ್ಟ್ಅಪ್ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಹಣ ಸಂಪಾದಿಸುವ ಪ್ರಯತ್ನ ಆರಂಭಿಸಿದ್ದಾರೆ. ಅಷ್ಟಕ್ಕೂ ಈತ ಸೂಚಿಸಿದ 15 ಲಕ್ಷ ರೂಪಾಯಿ ಸಂಪಾದನೆ ಮಾರ್ಗ ಯಾವುದು?

ಭಾರತೀಯ ರೈಲ್ವೇಯ 1036 ಹುದ್ದೆಗೆ ನೇಮಕಾತಿ ಆರಂಭ, ಅರ್ಜಿ ಸಲ್ಲಿಕೆ ಹೇಗೆ?

ಅಮೆರಿಕದ ಟೆಕ್ನಾಲಜಿ ಸ್ಟಾರ್ಟ್ಅಪ್ ವೈಸಿ(YC) ಮೂಲಕ ವರ್ಷಕ್ಕೆ 15 ಲಕ್ಷ ರೂಪಾಯಿ ಆದಾಯಗಳಿಸುವ ಮಾರ್ಗ ಈತ ಹೇಳಿದ್ದಾನೆ. ವೈ ಕಾಂಬಿನೇಟರ್ ಡೈರೆಕ್ಟರಿ ಸ್ಟಾರ್ಟ್ಅಪ್ ಕಂಪನಿಯಲ್ಲಿ ಸುಲಭವಾಗಿ ಹಣ ಸಂಪಾದಿಸುವ ಮಾರ್ಗವಿದೆ ಎಂದಿದ್ದಾನೆ. ಇಲ್ಲಿ ನಿಮ್ಮ ಆಸಕ್ತಿ ಹಾಗೂ ಆಸಕ್ತಿಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಅವಕಾಶಗಳಿವೆ. ಇಲ್ಲಿ ಹುಡುಕಾಡಬೇಕು. ಬಳಿಕ ಸೂಕ್ತವಾದದ್ದು ಆಯ್ಕೆ ಮಾಡಬೇಕು ಎಂದಿದ್ದಾನೆ. ವೈ ಕಾಂಬಿನೇಟರ್ ಅಮೆರಿಕನ್ ಟೆಕ್ನಾಲಜಿ ಸ್ಟಾರ್ಟ್ಅಪ್ ಕಂಪನಿಯಾಗಿದೆ. ಇದು ಆರಂಭಿಕ ಹಂತದಲ್ಲಿ ಹೊಸ ಕಂಪನಿಗಳಿಗೆ ಆರ್ಥಿಕ ನೆರವು ನೀಡುತ್ತದೆ. ಹಲವು ಸ್ಟಾರ್ಟ್ಅಪ್ ಕಂಪನಿಗಳು ಸಂಸ್ಥಾಪಕರು ಅಥವಾ ಐಡಿಯಾ ಹಿಡಿದುಕೊಂಡು ಬಂದು ಇಲ್ಲಿ ವಿವರಣೆ ನೀಡುತ್ತಾರೆ. ಐಡಿಯಾ ಉತ್ತಮವಾಗಿದ್ದರೆ, ಅಥವಾ ಸ್ಟಾರ್ಟ್ ಅಪ್ ಕಂಪನಿ ಉತ್ತಮವಾಗಿದ್ದರೆ ಆರಂಭಿಕ ಹಂತದಲ್ಲಿ ವೈ ಕಾಂಬಿನೇಟರ್ ಹಣ ನೀಡುತ್ತದೆ.

ವೈಸಿ ಡೈರೆಕ್ಟರಿಯಲ್ಲಿನ ಓಪನ್ ಸೋರ್ಸ್ ಮೂಲಕ ನಿಮ್ಮ ಆಸಕ್ತಿಯ ಪ್ರಾಜೆಕ್ಟ್ ಫಿಲ್ಟರ್ ಮಾಡಿಕೊಳ್ಳಬೇಕು. ಬಳಿಕ ಕಮ್ಯೂನಿಟಿಯಲ್ಲಿ ತೊಡಗಿಸಿಕೊಳ್ಳಿ. ಇಲ್ಲಿ ಕಮ್ಯೂನಿಟಿಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಬೇಕು, ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಸವಾಲುಗಳನ್ನು ಪರಿಹರಿಸಬೇಕು. ಈ ರೀತಿಯಲ್ಲಿ ಕೆಲಸ ಆರಂಭಿಸಿದರೆ ಸಾಕು. ಆರಂಭಿಕ ಹಂತದಲ್ಲಿ 1500 ಅಮೆರಿಕನ್ ಡಾಲರ್ ರೂಪದಲ್ಲಿ ನಿಮಗೆ ವೇತನ ಬರಲಿದೆ. ಇದು ವರ್ಷಕ್ಕೆ 15 ಲಕ್ಷ ರೂಪಾಯಿವರಗೂ ಸಂಪಾದಿಸಲು ಸಾಧ್ಯವಾಗಲಿದೆ ಎಂದಿದ್ದಾರೆ. ರೆಡ್ಡಿಟ್ ಪೋಸ್ಟ್ ಕೊನೆಯಲ್ಲಿ ನಿಮಗೆ ಆಸಕ್ತಿ ಇದ್ದರೆ, ನೀವು ಇತರರ ಸಮಸ್ಯೆಗಳಿಗೆ ಉತ್ತರ ಅಥವಾ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವಿದ್ದರೆ ಕುಳಿತಲ್ಲೇ 15 ಲಕ್ಷ ರೂಪಾಯಿ ಸಂಪಾದಿಸಬಹುದು ಎಂದಿದ್ದಾರೆ.

ಈ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ಇದೇ ರೀತಿಯ ಇತರ ಕೆಲ ಸ್ಟಾರ್ಟ್ಅಪ್ ಮಾಹಿತಿಗಳನ್ನು ನೀಡಿದ್ದಾರೆ. ಇದೇ ವೇಳೆ ಇವೆಲ್ಲಾ ಅಸಾಧ್ಯ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದೀಗ ಪರ ವಿರೋಧದ ಚರ್ಚೆ ಶುರುವಾಗಿದೆ. ಇದಕ್ಕೆ ತಂತ್ರಜ್ಞಾನದ ಮಾಹಿತಿ ಇರಬೇಕು. ಕನಿಷ್ಠ ಟೆಕ್ ಕ್ಷೇತ್ರದಲ್ಲಿ ಪದವಿ ಮಾಡಿದ್ದರೆ ಉತ್ತಮ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

ಮುಂದೇನು ಮಾಡಲಿ? ಬೆಳಗ್ಗೆ 5 ಗಂಟೆಗೆ ಬಂದ ಇಮೇಲ್‌ಗೆ ಕಾರು ಕಂಪನಿ ನಿರ್ದೇಶಕ ಕಂಗಾಲು!